ಲಂಡನ್‌ನಲ್ಲಿ ಉಗ್ರರ ದಾಳಿ : 7 ಜನರ ಸಾವು, 48 ಜನರಿಗೆ ಗಾಯ, ತೀವ್ರಗೊಂಡ ತನಿಖೆ…

ಲಂಡನ್‌: ಲಂಡನ್‌ ಬ್ರಿಡ್ಜ್‌ ಹಾಗೂ ಬೋರೋ ಮಾರ್ಕೆಟ್‌ ಬಳಿ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7 ಕ್ಕೆ ಏರಿದೆ. ಒಟ್ಟೂ 48 ಜನರಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಇದು ಉಗ್ರರ ದಾಳಿ ಎಂದು ಶಂಕಿಸಲಾಗಿದ್ದು,  ಪೊಲೀಸರು ಮೂವರು ದುಷ್ಕರ್ಮಿಗಳನ್ನು ಹೊಡೆದುರುಳಿಸಿದ್ದಾರೆ. ಆದರೆ ನಿಗದಿಯಂತೆ  ಚುಣಾವಣೆ ನಡೆಯಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಲಂಡನ್‌ ಬ್ರಿಡ್ಜ್‌ ಮೇಲೆ ವೇಗವಾಗಿ ಬಂದ ಅಪರಿಚಿತ ವ್ಯಾನ್‌ವೊಂದು ಪಾದಚಾರಿಗಳ ಮೇಲೆ ಹರಿದಿದ್ದು, ಓರ್ವ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ. ಸುದ್ದಿ ತಿಳಿದ ತಕ್ಷಣವೇ ಲಂಡನ್‌ ಬ್ರಿಡ್ಜ್‌ನ ಎಲ್ಲಾ ಬಾಗಿಲುಗಳನ್ನು ಮುಚ್ಚಲಾಗಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇನ್ನೊಂದು ಘಟನೆ ಲಂಡನ್‌ ಬ್ರಿಡ್ಜ್‌ ಬಳಿಯ ಬೋರೋ ಮಾರ್ಕೆಟ್‌ನಲ್ಲಿ ನಡೆದಿದ್ದು,  ಅಪರಿಚಿತ ವ್ಯಕ್ತಿಯೋರ್ವ ಜನರ ಮೇಲೆ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಈ ವೇಳೆ ಇಬ್ಬರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಇನ್ನು ಈ ಘಟನೆ ಕುರಿತು ಬ್ರಿಟನ್‌‌ ಪ್ರಧಾನಮಂತ್ರಿ ಥೇರೆಸಾ ಸಭೆ ಕರೆದ್ದಿದ್ದಾರೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಟ್ವಿಟ್ಟರ್‌ ಮೂಲಕ ಘಟನೆ ಖಂಡಿಸಿ, ಬ್ರಿಟನ್‌ ಸರ್ಕಾರಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಘಟನೆ ವಿಶ್ವದಾದ್ಯಂತ ದಿಗ್ಭ್ರಮೆ ಮೂಡಿಸಿದ್ದು,  ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ.

4 thoughts on “ಲಂಡನ್‌ನಲ್ಲಿ ಉಗ್ರರ ದಾಳಿ : 7 ಜನರ ಸಾವು, 48 ಜನರಿಗೆ ಗಾಯ, ತೀವ್ರಗೊಂಡ ತನಿಖೆ…

 • October 18, 2017 at 1:07 PM
  Permalink

  heyas: -). how are you most?. well i enjoy write and i rele want to get in to creative composing and yet i have a hard time coming up with concepts on what things to write about and was wanting to know if you understood how i could get over this “writer’s block”?.. thanks a lot!!.

 • October 18, 2017 at 2:02 PM
  Permalink

  How do i obtain a Philippine copyright meant for my literary articles and/or books?

 • October 20, 2017 at 10:08 PM
  Permalink

  I’m about to start website where people can post projects and purchase projects. Do you think it is recommended?

Comments are closed.

Social Media Auto Publish Powered By : XYZScripts.com