Environment day : ವಿನಾಶದಷ್ಟು ಸುಲಭವಾಗಿ ಸೃಷ್ಟಿಸಲು ಅಸಾಧ್ಯ…!

Words worth ಮಹಾಕವಿ ಹೇಳುತ್ತಾರೆ “Man is the child of nature”  ಪ್ರಕೃತಿಯಲ್ಲೇ ಹುಟ್ಟಿ, ಪ್ರಕೃತಿಯೊಡನೆ ಒಡನಾಡಿ ಪ್ರಕೃತಿಯಲ್ಲೇ ಲೀನವಾಗುವ ಈ ದೇಹ ತಂತ್ರಜ್ಞಾನವೆಂಬ ಮಾಯೆಯ ಬೆನ್ನು ಹತ್ತಿ, ಪ್ರಕೃತಿಯ ಹೃದಯವನ್ನೇ ಬಗೆಯುತ್ತಾ, ಬಗೆಯುತ್ತಾ, ತನ್ನ ಅಸ್ತಿತ್ವಕ್ಕೆ ಧಕ್ಕೆ ತರಲೆತ್ನಿಸುತ್ತಿದ್ದಾನೆ.
ನಮ್ಮ ನಾಡಿನ ಹೆಮ್ಮೆಯ ಕವಿ ನಿಸಾರ್ ಅಹಮದ ಕನ್ನಡನಾಡಿನ ಚೆಲುವನ್ನು ಅದೆಷ್ಟು ಸುಂದರವಾಗಿ ಹಿಡಿದಿಟ್ಟಿದ್ದಾರೆಂದರೆ, ನಮಗೆ ನಮ್ಮ ಬಗ್ಗೆಯೇ ಹೆಮ್ಮೆಯಾಗಬೇಕು ಅಷ್ಟೇ,
“ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದ ಸಿರಿ
ಉತ್ತುಂಗದ ಬಳುಕಿನಲಿ
ನಿತ್ಯಹರಿದ್ವರ್ಣ ವನದ
ತೇಗ-ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ”
ಇಂತಹ ಸುಂದರ ಪ್ರಕೃತಿ ಒಮ್ಮೆ ವಿನಾಶವಾದರೆ, ಪ್ರಕೃತಿಯ ಸೌಂದರ್ಯವನ್ನು ಮತ್ತೇ-ಮತ್ತೇ ಪಡೆಯಲು ಸಾದ್ಯವಿಲ್ಲ. Rabindranath Tagore ಹೇಳುತ್ತಾರೆ
“By Plucking her petals,you
Do not gather the beauty of the flower”
ಆದ್ದರಿಂದ ನಾವು ನೆನಪಿಡಬೇಕಾದ ಸಂಗತಿಯಷ್ಟೇ ಪ್ರಕೃತಿಯಲ್ಲಿ ಬದುಕುವ ನಾವು ವಿನಾಶ ಮಾಡಿದಷ್ಟೇ ಸುಲಭವಾಗಿ ಸೃಷ್ಟಿಸಲು ಅಸಾಧ್ಯ.
ಅಂದರೆ ಪ್ರಕೃತಿಯ ಜೀವ ಜಾಲಗಳನ್ನು ಎಳೆದೆಳೆದು ಆಧುನಿಕತೆಯ ಅಹಂನಲ್ಲೇ ನಾವು ಬೀಗಿದಾಗ ಹೊಸ ವಿಪತ್ತು ಇಣುಕಿ ಇಣುಕಿ, ನಮಗರಿವಿಲ್ಲದೇ ಪ್ರಕ್ಷುಬ್ಬ ಪರಿಸ್ಥಿತಿಯೆಂಬ ವಿಷ-ಜಾಲದಲ್ಲಿ ಸುತ್ತುವರೆದು ಬಿಟ್ಟಿರುತ್ತೇವೆ.
ಪ್ರಕೃತಿಯ ಚೈನ್ ನಮಗೆಲ್ಲ ಗೊತ್ತಿರುವಂತಹದ್ದೇ ಅಂದರೆ  ಒಂದು ಪ್ರಾಣಿ ಮೇಲೆ ಮತ್ತೊಂದು ಪ್ರಾಣಿ ಅವಲಂಬನೆ ಪ್ರಕೃತಿಯ ವಿಸ್ಮಯದೊಂದಿಗೆ ಅನಿವಾರ್ಯತೆಯೂ ಹೌದು. ಆದರೆ ನಾವು ನಮ್ಮ  ಕ್ಷಣಿಕ ಸ್ವಾರ್ಥಕ್ಕಾಗಿ ಅದನ್ನೇ ಹಾಳುಗೆಡುವುತ್ತಿದ್ದೆವೆ. ಪ್ರಕೃತಿಯ ವಿನಾಶದ ಪಥ ಎಂದರೆ ನಮ್ಮ ವಿನಾಶವಷ್ಟೇ. ನಮ್ಮ ಹಿಂದಿನ ತಲೆಮಾರುಗಳಲ್ಲಿ ಒಬ್ಬ ವ್ಯಕ್ತಿಯ ವಯಸ್ಸು : ೧೦೦ ಆಗಿದ್ದರೆ ೬೦ ವರ್ಷಕ್ಕೆ ಬಂದು ನಿಂತಿದೆ.
ನಮ್ಮ ಪೂರ್ವಜರು ಕಂಡು ಕೇಳರಿಯದಂತಹ ಹೊಸ-ಹೊಸ ರೋಗಗಳು ನಮ್ಮ ಬೆನ್ನ ಹಿಂದಿವೆ. ಇದಕ್ಕೆಲ್ಲಾ ಮುಖ್ಯ ಕಾರಣ ನಮಗೆ ಪ್ರಕೃತಿ ಕುರಿತು ಇರುವ ನಿರ್ಲಕ್ಷ್ಯ ಈ ಕುರಿತು ಎಚ್ಚರಕೆ ಹೊಂದಬೇಕಾದ್ದು ನಮ್ಮೆಲ್ಲರ ಕರ್ತವ್ಯ ಇದು ಶಾಲೆಗಳಿಂದಲೇ ಪ್ರಾರಂಭವಾದರೆ, ಆಳವಾಗಿ ತಿಳಿಸಬಹುದು.
ಆಗ ಮಾನವ ತನ್ನರಿವಿನಿಂದ ಜಗದಗಲ ಮುಗಿದಗಲ ಹರಡಿರುವ ಪ್ರಕೃತಿಯಲ್ಲಿ ಸಂತೋಷವಾಗಿ ಜೀವಿಸಲು ಸಾಧ್ಯ.
“No one saves us but
Ourselves. No
One can & no one may
We ourselves must walk the path”
ನಮ್ಮ ಹೃದಯ ಆಂತರ್‍ಯದಲ್ಲಿ ಶಾಂತಿ ಇರುವ ತರಹ ಪ್ರಕೃತಿಯಲ್ಲಿಯೇ ಮನುಷ್ಯನ ಸೌಂದರ್‍ಯ ಅಡಗಿದೆ. ಇದನ್ನೇ ನಾವು ನಮ್ಮ ಮಕ್ಕಳಿಗಿ ತಿಳಿಸುವ ಅವಶ್ಯಕವಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಜೀವ-ವೈವಿದ್ಯ ಸಂರಕ್ಷಣೆ ಕುರಿತು ನಿಯಮಾವಳಿ ರೂಪಿಸುವಾಗ ಮಾನ್ಯ ಮಾಡಿದ ೫ ಧೈಯಗಳು :-
ಜೀವ ಸಂಕುಲ ಸಂರಕ್ಷಣೆ ಹೊಣೆ ಆಯಾ ರಾಷ್ಟ್ರದ ಪಾಲಿಗೆ ಸೇರಿರಬೇಕೆ ವಿನಾ, ಹೊರಗಿನವರ ಹಸ್ತಕ್ಷೇಪ ಇರಕೂಡದು.
ಜೀವ-ವೈವಿದ್ಯವನ್ನು ನಾಶ ಮಾಡುವಂಥ ಕಾನೂನುಗಳನ್ನು ಬದಲಾಯಿಸಬೇಕು.
ಜೀವ ಸಂರಕ್ಷಣೆಯ ಬಗ್ಗೆ ಸರಕಾರಗಳು ತಮ್ಮ ಗ್ರಾಮೀಣ ಪ್ರಜೆಗಳಲ್ಲಿ ಹಾಗೂ ಅರಣ್ಯವಾಸಿಗಳಲ್ಲಿ ಜಾಗೃತಿ ಮೂಡಿಸಬೇಕು. ಅವರೇ ಸಂರಕ್ಷಣೆ ಮಾಡಲು ಅತ್ಯಂತ ಯೋಗ್ಯ ಎಂಬ ಮಾತನ್ನು ಗೌರವಿಸಬೇಕು.
ಪ್ರತಿ ರಾಷ್ಟ್ರದಲ್ಲೂ ಉದ್ಯಾನ ಜೀವಾಶ್ರಯ ಅಭಿಯಾರಣ್ಯ, ವನ್ಯಧಾಮ & ಬೀಜ ಬ್ಯಾಂಕುಗಳ ಸ್ಥಾಪನೆಗೆ ವಿಶ್ವಸಂಸ್ಥೆ ಹಾಗೂ ಆಯಾ ರಾಷ್ಟ್ರ ಆದ್ಯತೆ ನೀಡಬೇಕು.
ದೀರ್ಘ ಕಾಲದವರಗೆ ಸಂರಕ್ಷಣ ಪ್ರಯತ್ನ ಜಾರಿಯಲ್ಲಿರುವಂತೆ ಸಂಘ ಸಂಸ್ಥೆ ಸ್ಥಾಪಿಸಬೇಕಿದೆ.
ಇಂದು ಎಲ್ಲಾ ವ್ಯವಸ್ಥಿತ ರೂಪದಲ್ಲಿ ಅನುಷ್ಠಾನಕ್ಕೆ ಬರಬೇಕಾದರೆ ಪ್ರತಿ ಹಳ್ಳಿ-ನಗರಗಳಲ್ಲಿ ’ಜೀವ ವೈವಿಧ್ಯ ದಾಖಲಾತಿ ವ್ಯವಸ್ಥೆ’ ಜಾರಿಬರಬೇಕು.
ನಮ್ಮ ಪ್ರದೇಶದಲ್ಲಿರುವ ಇಂಥ ಸಸ್ಯ & ಪ್ರಾಣಿಗಳಿಂದ ನಮಗೆ ಎಂತಹ ಲಾಭವಾಗುತ್ತಿದೆ. ಎಂಬುದನ್ನು ದಾಖಲಿಸಿ, ಎಲ್ಲರಿಗೂ ತಿಳಿಸಬೇಕಿದೆ. ಏಕೆಂದರೆ ಆ ಎಲ್ಲವುಗಳ ಬಳಕೆ ಕಡಿಮೆಯಾಗಿ ಅವುಗಳ ಮಹತ್ವವರಿಯದೇ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ಅತ್ಯಮೂಲ್ಯ ಗಿಡಮೂಲಿಕೆಗಳ ಮಹತ್ವ ತಿಳಿಯದೇ ಕಸದ ರೀತಿ ಅವುಗಳನ್ನು ಪರಿಭಾವಿಸಲಾಗುತ್ತಿದೆ.
ನಾನು ಕಣ್ಣಾರೆ ನೋಡಿದ. ಸ್ವಲ್ಪ ಕಾಲದ ಅಲ್ಲಿ ಒಡನಾಡಿದ ಅನುಭವದ ಪ್ರಕಾರ ಕಪ್ಪತ್ತ ಗುಡ್ಡವನ್ನುವದು, ಸಂಜೀವಿನ ಮಾಲಿಕೆಗಳ ಆಗರ. ಅಲ್ಲಿ ಹರಿದು ಬರುವ ನೀರು ತೀರ್ಥ ಅದಕ್ಕೆ ಎಲ್ಲ ರೋಗ ಗುಣಪಡಿಸುವ ಶಕ್ತಿ ಇದೆ ಎಂಬುದು ಅಲ್ಲಿಯವರ ಅಭಿಪ್ರಾಯ. ನಿಜ ಅರ್ಥದಲ್ಲಿ ಆ ಮೂಲಿಕೆಗಳ ಹರಿದು ಬರುವ ಕಾರಣಕ್ಕಾಗಿ ಅಲ್ಲಿ ನೀರಿಗೆ ಆ ಮಹತ್ವ ಬಂದಿರುವದು.
ಹೀಗೆ ನಮ್ಮಲ್ಲಿರುವ ಸಸ್ಯರಾಶಿಗಳ & ಜೀವರಾಶಿಗಳ ಮಹತ್ವವರಿಯದೇ ಅವುಗಳನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಅದಕ್ಕಾಗಿ ನಮ್ಮ ಸುತ್ತಲಿನ ವಾತಾವರಣದಲ್ಲಿ ಲಭ್ಯವಿರುವ ಸಸ್ಯರಾಶಿಗಳ ಮಹತ್ವ ಅರಿಯಲು, ನಾವು ನಮ್ಮ ಶಾಲೆಗಳಲ್ಲಿ ಪ್ರಾಯೋಗಿಕತೆಯೊಂದಿಗೆ ಅವುಗಳ ಮಹತ್ವ ಅರಿಯುವ ಅವಶ್ಯಕತೆಯಿದೆ.
ನಿಸರ್ಗ ಮಡಿಲಿಲ್ಲ ನಮ್ಮ ಶಾಲೆಗಳನ್ನು ರೂಪಿಸಿಕೊಂಡಲ್ಲಿ, ಅದು ನಮ್ಮ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೆಲ್ಲರಿಗೂ ಅನುಕೂಲ, ಆದರೆ ಆಧುನಿಕತೆಯ ಹೆಸರಲ್ಲಿ ಕಾಂಕ್ರೇಟ್ ಕಾಡಿಗೇ ನಮ್ಮ ಮಹತ್ವ ಬಂದು ಬಿಟ್ಟಿದೆ. ಆದರೆ ಅದರ ಸೂತ್ತಲೂ ನೆಡಬೇಕಾದ ಗಿಡಗಳ ಮಹತ್ವ ತಿಳಿಯಬೇಕಾಗಿದೆ ಹಾಗಾಗಿ ಸಾಧ್ಯವಾದಷ್ಟು ಕೈತೋಟ ನಿರ್ಮಿಸೋಣ.
-: ಪರಿಸರ ಕುರಿತು ಮಕ್ಕಳಿಗೆ ತಿಳಿಸಬೇಕಾದ ಅಂಶಗಳು :-
೧) ನೀರಿನ ಮಿತವ್ಯಯ & ಸದ್ಭಳಕೆ :-
ನಾವು ಅನೇಕ ಕಡೆ ನೋಡುತ್ತಿರುತ್ತೇವೆ ನೀರು ಸುಲಭವಾಗಿ ಸಿಗುವ ಪ್ರದೇಶಗಳಲ್ಲಿ ಅನವಶ್ಯಕವಾಗಿ ನೀರನ್ನು ದುರ್ಬಳಕೆಯಾಗುತ್ತಿರುತ್ತದೆ ಆದರೆ ಅದೇ ಕೆಲ ನೀರಿನ ಅಭಾವದ ಪ್ರದೇಶಗಳಲ್ಲಿ ಒಂದು ಎರಡು ಬಿಂದಿಗೆ ನೀರಿಗೂ ಪರದಾಡುತ್ತಿರುತ್ತಾರೆ ಆದ್ದರಿಂದ ನೀರನ್ನು ಮಿತವ್ಯಯವಾಗಿ ಬಳಸುವ ಕುರಿತು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ನೀಡುವದು.
೨) ಪರಿಸರ ಸಂರಕ್ಷಣೆಯಲ್ಲಿ ವೃಕ್ಷಗಳ ಮಹತ್ವ ತಿಳಿಸುವದು ದಿನೇ ಸಿನೇ ಕಾಯುತ್ತಿರುವ ಭೂಮಿಯನ್ನು ತಣಿಸುವ ಉಪಾಯಗಳಲ್ಲಿ ವೃಕ್ಷಗಳ ಪಾತ್ರ ಅತ್ಯಂತ ಮಹತ್ವದ್ದು ಆದ್ದರಿಂದ ಎಳೆಯ ವಯಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ವೃಕ್ಷರಕ್ಷಣಿಯ ಅರಿವು ಮೂಡಿಸುವದು, ಪರಿಸರದ ದಿನದ ಮಹತ್ವವಾಗಲಿ.
೩) ಪರಿಸರ ರಕ್ಷಣೆಯ ಬೇರು ನಮ್ಮ-ನಮ್ಮ ವಯಕ್ತಿಕ ಮಟ್ಟದಲ್ಲಿ ಆಗಬೇಕು ಆದ್ದರಿಂದ ಚಿಕ್ಕಂದಿನಿಂದಲೇ ಪರಿಸರ ರಕ್ಷಣಿಯ ಮನಸ್ಸು & ಕೃತಿ ನಮ್ಮಲ್ಲಿ & ನಮ್ಮ ಸುತ್ತಲ್ಲಿನ ಪರಿಸರದಲ್ಲಿ ಕ್ರಮೇಣ ಪ್ರಗತಿ ಕಾಣಬಹುದು.
೪) ಒಂದು ಮಾತು ಪ್ರಕೃತಿಯನ್ನು ನಾವು ಹಾಳ ಮಾಡಬಹುದಷ್ಟೇ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಅಂದರೆ ನಮ್ಮ & ನಮ್ಮ ಮುಂದಿನ ಜನಾಂಗದ ಒಳ್ಳೆಯ ಜೀವನದ ಕೀಲಿಕೈ ನಮ್ಮಲ್ಲೇ ಇವೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಣ.
ಉದ್ಯಾನವನಗಳು ಶಾಲೆಯನ್ನು ನಳನಳಸುವಂತೆ ಮಾಡುತ್ತವೆ. ಅಲ್ಲದೇ ಶಾಲೆಯನ್ನೇ ಜೀವಂತವಾಗಿಡುವ ಕೆಲಸ ಮಾಡುತ್ತದೆ.
“A School garden is a place where students are inspired to ask questions & seek answers through their own research & observations”
ಮತ್ತೊಂದು ಶೈಕ್ಷಣಿಕ ವರ್ಷ ಪ್ರಾರಂಭವಾಯಿತು ಅದರ ಬೆನ್ನೆಲ್ಲೇ ಜೂನ್ ೫ ರ ನೆನಪು ಮತ್ತೊಮ್ಮೆ ಎಲ್ಲರಿಗೂ ’ವಿಶ್ವ ಪರಿಸರ ದಿನಾಚರಣೆಯೆಂದು ಒಂದು ಅಥವಾ ಎರಡು ಕುಂಡಲದಲ್ಲಿ ಸಸಿಯ ನೆಟ್ಟು, ಫೋಟೋ ಕ್ಲಿಕ್ಕಿಸಿ ರೀಪೋರ್ಟ್ ಇಟ್ಟುಕೊಂಡರಷ್ಟೇ ಸಾಲದು.
ಪರಿಸರ ಮಾಲಿನ್ಯ ಜಗದ ವಾಸಿಮಾಡಬಾರದ ಖಾಯಿಲೆ ಆದರೆ ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳಬಹುದು ಅಂದರೆ ನಮ್ಮಲ್ಲಿ ಅದರ ಮಹತ್ವದ ಅರಿವಾಗಬೇಕಾಗಿದೆ.
 “The environment is everything that is n’t me” ಐನ್‌ಸ್ಟೈನ
ಹಾಗಾದರೆ ಆಧುನಿಕತೆಯು, ಪರಿಸರದ ಮೇಲೆ ಸವಾರಿ ಮಾಡಿದ ಮೇಲೆ ಆಗಿರುವ ಪ್ರಮುಖ ಸಮಸ್ಯೆಗಳು ಇಂತಿವೆ :
ಬಡತನ, ನಿರುದ್ಯೋಗದಂತಹ ಸಮಸ್ಯೆಗಳಿಂದ ನಗರಕ್ಕೆ ವಲಸೆ ಬರುವ ನಿರಾಶ್ರಿತರು.
ಮಾಲಿನ್ಯ (ವಾಯು,ಜಲ,ಘನ)& ಅದರ ಹತೋಟಿ ಸಮಸ್ಯೆ
ಅದನ್ನೇ Alan M Edison  ಈ ರೀತಿ ಹೇಳುತ್ತಾರೆ
“Modern technology owes
Ecology An apology”
ಆದ್ದರಿಂದ ಒಂದೆಡೆ Technology ಹೊಗಳುತ್ತಾ, ನಮ್ಮ ಆರಾಮದಾಯಕವಾದ ಜೀವನಕ್ಕೆ ಸದ್ದಿಲ್ಲದೇ ಪರಿಸರ ಹಾನಿ ಮಾಡುತ್ತಿದ್ದೇವೆ ಇದೆಲ್ಲಾ ಸರಿಯಾಗಲು ನಾವು ಮನಸ್ಸು ಮಾಡಬೇಕಿದೆ.
ಅದನ್ನೇ ಅರಿಸ್ಟಾಟಲ್ ಹೇಳಯತ್ತಾರೆ.
“Educating the mind without educating the heart is no education at all”
  ಅಂದರೆ ಶಿಕ್ಷಣ ಎನ್ನುವದು ಕೇವಲ ಜೀವನಕ್ಕೆ ಸಜ್ಜಗೊಳಿಸುವದಲ್ಲ. ನಾವು ಪಡೆದ ಒಳ್ಳೆಯ ಶಿಕ್ಷಣವೇ ಜೀವನವಾಗಬೇಕು ಹೀಗೆ ಪರಿಸರ ಶಿಕ್ಷಣ ಕೂಡಾ ನಮ್ಮ ಜೀವನವಾದಾಗ ಪರಿಸರ ಶೈಕ್ಷಣಿಯು ಬಲಿಷ್ಠವಾಗಿ ಸಾಧ್ಯವಾಗಬಹುದು.
ವಿದೇಶಿಯರು ಅಂದರೆ ವಿದೇಶಿ ಪ್ರವಾಶಿಗರು ನಮ್ಮ ದೇಶವನ್ನು ತಿಪ್ಪೆಗಳ ನಾಡು ಎಂದು ಉಲ್ಲೇಖಿಸಿದ್ದಾರೆ, ಕಾರಣ ಬಾಲ್ಯದಿಂದಲೇ ಕಂಡ-ಕಂಡಲ್ಲಿ ವಸ್ತು ಚೆಲ್ಲುವ, ಮೂತ್ರ ವಿಸರ್ಜಸುವ ರೂಢೀಯಾದರೆ, ಆ ಅಭ್ಯಾಸಗಳು ನಾವು ದೊಡ್ಡವರಾದಗಲೂ ಹೋಗುವದಿಲ್ಲ.
ನಮ್ಮ ಸುತ್ತಲಿನ ಪರಿಸರ ಪ್ರೀತಿಸೋಣ ಆಗ ನಾವು ಅದನ್ನು ಸ್ವಚ್ಛವಾಗಿಡುತ್ತೇವೆ ಏಕೆಂದರೆ ಅದರ ಮೇಲಿನ ಪ್ರೀತಿ, ನಮ್ಮನ್ನು ಪರಿಸರದ ಮೇಲೆ ಪ್ರೀತಿ ಇಡುವಂತೆ ಮಾಡುತ್ತವೆ.
ಒಬ್ಬ ತಾಯಿ ತನ್ನ ಮಗುವನ್ನು ಪ್ರೀತಿಸುವ ರೀತಿ, ನಾವು ನಮ್ಮ ಪರಿಸರವನ್ನು ಪ್ರೀತಿಸಬೇಕು ಏಕೆಂದರೆ ಅದರಲ್ಲಿ ನಾವು ಮಗು ತಾಯಿಯ ಅತೀತ, ನಿಶ್ವಾರ್ಥ ಪ್ರೀತಿಯನ್ನು ಕಾಣುತ್ತೇವೆ. ಇದು ಇರದೇ ಹೋದರೆ ಮುಂದೊದು ದಿನ ಮಾಲಿನ್ಯವೆಂಬ ಅಸುರ ಅಲ್ಲಲ್ಲ ಮಾಲಿನ್ಯದ ರಕ್ತ ಬೀಜಾಸುರನೆಂಬ ಅಸುರ ಇಡೀ ಭೂಮಿಯನ್ನೇ ಬಲಿ ತೆಗೆದುಕೊಳ್ಳಬಹುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಈ ಬಿಸಿಲು ವರ್ಷದ ೧೨ ತಿಂಗಳಲ್ಲಿ ಕನಿಷ್ಠ ೮ ತಿಂಗಳಾದರೂ ತನ್ನ ಧಗ-ಧಗಿಸುವಿಕೆಯನ್ನು ತೋರಿಸುತ್ತದೆ. ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಶಾಲೆಯಲ್ಲಿಯೆ ಪರಿಸರ ಪ್ರೀತಿ ಮತ್ತು ಅದರ ಹಾನಿಯಿಂದ ಆಗುವ ದುಷ್ಪರಿಣಾಮಗಳ ಕುರಿತು ನಮ್ಮ ಪಾಠಗಳಲ್ಲಿಯೇ ಸಂದರ್ಭಕ್ಕನುಸಾರವಾಗಿ ಕಲಿಸೋಣ.

6 thoughts on “Environment day : ವಿನಾಶದಷ್ಟು ಸುಲಭವಾಗಿ ಸೃಷ್ಟಿಸಲು ಅಸಾಧ್ಯ…!

 • October 18, 2017 at 3:43 PM
  Permalink

  Oh my goodness! Amazing article dude! Thanks, However I am encountering
  difficulties with your RSS. I don’t know why I cannot join it.
  Is there anybody having identical RSS problems?
  Anybody who knows the answer can you kindly respond?
  Thanx!!

 • October 20, 2017 at 9:20 PM
  Permalink

  I’ve learn several good stuff here. Definitely value bookmarking for revisiting. I wonder how a lot effort you place to create the sort of fantastic informative site.|

 • October 20, 2017 at 11:48 PM
  Permalink

  Thank you for the good writeup. It actually was once a enjoyment account it.
  Look complex to far introduced agreeable from you!
  However, how could we communicate?

 • October 21, 2017 at 3:35 AM
  Permalink

  This is a topic that is close to my heart…
  Cheers! Exactly where are your contact details though?

 • October 24, 2017 at 7:12 PM
  Permalink

  What’s up, just wanted to tell you, I liked this blog post.
  It was inspiring. Keep on posting!

 • October 25, 2017 at 10:43 AM
  Permalink

  Remarkable issues here. I am very glad to peer your post. Thank you a lot and I am looking forward to contact you.

  Will you please drop me a e-mail?

Comments are closed.

Social Media Auto Publish Powered By : XYZScripts.com