ಕಾಂಗ್ರೆಸ್ ಸಂಘಟನೆಯ ಜವಾಬ್ದಾರಿ ನನಗಿಲ್ಲ, ಕೈ ಪಕ್ಷದ ಋಣ ನನ್ನ ಮೇಲಿಲ್ಲ : ಸಿ.ಪಿ ಯೋಗೇಶ್ವರ್‌

ರಾಮನಗರ :  ನನಗೆ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವ ಯಾವುದೇ ಹೆಚ್ಚಿನ ಜವಾಬ್ದಾರಿ ಇಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.  ಚನ್ನಪಟ್ಟಣದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಋುಣ ನನ್ನ ಮೇಲಿಲ್ಲ.  ತಾಲೂಕಿನ ಜನತೆಯ ಋುಣ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಮೇಲಿದೆ ಎಂದು ತಮ್ಮ ಜವಾಬ್ಧಾರಿಯನ್ನ ಪಕ್ಷಕ್ಕೆ ವಹಿಸಿದ್ದಾರೆ.
ಅಲ್ಲದೆ,  ನನಗೆ ಹೆಚ್ಚಿನ ಅಧಿಕಾರವೂ ಇಲ್ಲ,  ಬಹಳಷ್ಟು ಸಂದರ್ಭಗಳಲ್ಲಿ ನನಗೆ ಕಾಂಗ್ರೆಸ್ ಪಕ್ಷ ಟಿಕೇಟ್ ಕೂಡ ನೀಡಿಲ್ಲ ಎಂಬುದನ್ನ ಒತ್ತಿ ಹೇಳುವ ಮೂಲಕ ತನಗೆ ಪಕ್ಷಾಂತರದಲ್ಲಿ ಆಸಕ್ತಿ ಇದೆ ಎಂಬುದನ್ನ ಪರೋಕ್ಷವಾಗಿ ತಿಳಿಸಿದ್ದಾರೆ.
 ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದುಕೊಂಡು ಬಂದಿದ್ದೇನೆ,  ಆದರೆ ನನ್ನನ್ನ ಪಕ್ಷದಿಂದ ಹೊರಹಾಕುತ್ತಿದ್ದಾರೆ ಆದರೆ ನಾನು ಮತ್ತೆ ಸೇರಿಕೊಳ್ಳುತ್ತಿದ್ದೇನೆ,  ಜನರ ಹಿತಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದೇನೆ ಅಷ್ಟೆ.  ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಲು ನಾನು ಕಾಂಗ್ರೆಸ್ ಪಕ್ಷದ ಶಾಸಕನಲ್ಲ ಎಂದು ಯೋಗೀಶ್ವರ್‌ ಹೇಳಿಕೆ ನೀಡಿದ್ದಾರೆ.

3 thoughts on “ಕಾಂಗ್ರೆಸ್ ಸಂಘಟನೆಯ ಜವಾಬ್ದಾರಿ ನನಗಿಲ್ಲ, ಕೈ ಪಕ್ಷದ ಋಣ ನನ್ನ ಮೇಲಿಲ್ಲ : ಸಿ.ಪಿ ಯೋಗೇಶ್ವರ್‌

  • October 24, 2017 at 12:27 PM
    Permalink

    I am not sure where you are getting your info, but good topic. I needs to spend some time learning much more or understanding more. Thanks for great information I was looking for this info for my mission.

  • October 24, 2017 at 12:52 PM
    Permalink

    I’m extremely impressed with your writing skills and also with the layout on your weblog. Is this a paid theme or did you customize it yourself? Either way keep up the excellent quality writing, it’s rare to see a nice blog like this one today..

Comments are closed.

Social Media Auto Publish Powered By : XYZScripts.com