Champion’s challenge : ಮೊದಲ ಗೆಲುವಿಗಾಗಿ ಆಸ್ಟ್ರೇಲಿಯಾ, ಬಾಂಗ್ಲಾ ಕದಾಟ..

ಓವಲ್​ ಅಂಗಳದಲ್ಲಿ ಸೋಮವಾರ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾ ದೇಶ ತಂಡಗಳು ಕಾದಟವನ್ನು ನಡೆಸಲಿವೆ. ಮೇಲ್ನೋಟಕ್ಕೆ ಏಕ ಪಕ್ಷೀಯಂತೆ ಕಾಣುವ ಪಂದ್ಯದಲ್ಲಿ ಆಸೀಸ್​ಗೆ ಬಾಂಗ್ಲಾಗೆ ಶಾಕ್​ ನೀಡಲು ಪ್ಲಾನ್​ ಮಾಡಿಕೊಂಡಿದೆ.


ಆಡಿರುವ 16 ಪಂದ್ಯಗಳಲ್ಲಿ 15 ಪಂದ್ಯದಲ್ಲಿ ಜಯ ಸಾಧಿಸಿರುವ ಆಸೀಸ್​ 1ರಲ್ಲಿ ಸೋಲು ಅನುಭವಿಸಿದೆ. ಸ್ಟೀವನ್​ ಸ್ಮಿತ್​ ಮುಂದಾಳತ್ವದ ತಂಡದ ಬ್ಯಾಟಿಂಗ್​ ತುಂಬಾನೆ ಸ್ಟಾರ್ ಬ್ಯಾಟ್ಸ್​​ಮನ್​ಗಳು ಇದ್ದಾರೆ. ಸ್ಪೋಟಕ್​​ ಬ್ಯಾಟ್ಸ್​​ಮನ್​ ಡೇವಿಡ್​ ವಾರ್ನರ್​ ಅವರು ಭರ್ಜರಿ ಫಾರ್ಮ್​​ನಲ್ಲಿದ್ದು ಬಾಂಗ್ಲಾ ಬೌಲರ್​​ಗಳನ್ನು ಕಾಡಬಲ್ಲರು. ಇನ್ನು ಏರಾನ್​ ಫಿಂಚ್​ ತಂಡದ ಮೊತ್ತವನ್ನು ಹಿಗ್ಗಿಸಬಲ್ಲರು. ಮಧ್ಯಮ ಕ್ರಮಾಂಕಕ್ಕೆ ಸ್ಮಿತ್​ ಹಾಗೂ ಕ್ರಿಸ್​ ಲೀನ್​ ದೊಡ್ಡ ಇನಿಂಗ್ಸ್​ ಕಟ್ಟಬಲ್ಲರು. ಆಲ್​ರೌಂಡರ್​ ರೂಪದಲ್ಲಿ ಟ್ರಾವಿಸ್​ ಹೆಡ್​ ಹಾಗೂ ಗ್ಲೇನ್​ ಮ್ಯಾಕ್ಸ್​ವೆಲ್​​ ತಂಡಕ್ಕೆ ಬ್ಯಾಟಿಂಗ್​ ಹಾಗೂ ಬೌಲಿಂಗ್​​ನಿಂದ ನೆರವಾಗಬಲ್ಲರು. ಬೌಲಿಂಗ್​ ವಿಭಾಗಕ್ಕೆ ಖ್ಯಾತ ಆಟಗಾರ ಮಿಚೆಲ್​ ಸ್ಟಾರ್ಕ್​​ ಇದ್ದು, ಇವರಿಗೆ ಹ್ಯಾಜಲ್​ವುಡ್​​, ಪ್ಯಾಟ್​ ಮಿನ್ಸ್​​​ ಎದುರಾಳಿಗಳ ರಣ ತಂತ್ರವನ್ನು ಬುಡಮೇಲು ಮಾಡಬಲ್ಲರು.
ಇನ್ನು ಬಾಂಗ್ಲಾ ಪರ ಆರಂಭಿಕ ತಮೀಮ್​ ಇಕ್ಬಾಲ್​ ಹಾಗೂ ಸೌಮ್ಯ ಸರ್ಕಾರ್​ ಅವರು ದೊಡ್ಡ ಇನಿಂಗ್ಸ್​ ಕಟ್ಟುವ ಕನಸು ಕಾಣುತ್ತಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಇಮ್ರುಲ್​ ಕಾಯಿಸ್​, ಮುಷ್ಫಾಫಿಕರ್​ ರೆಹಮಾನ್​​, ಶಕೀಬ್​ ಅಲ್​​ ಹಸನ್​, ಮೊಹಮೊದ್ದುಲ್ಲ ತಂಡದ ರನ್​ ಗತಿಯನ್ನು ಏರಿಸಬಲ್ಲರು. ಇನ್ನು ಬೌಲಿಂಗ್​ನಲ್ಲಿ ಮುಷರಾಫೆ ಮೊರ್ತಾಜ್​, ತಸ್ಕಿನ್​, ಹಸೀನ್​​ ವಿಕೆಟ್​ ಬೇಟೆ ನಡೆಸಬಲ್ಲರು.

8 thoughts on “Champion’s challenge : ಮೊದಲ ಗೆಲುವಿಗಾಗಿ ಆಸ್ಟ್ರೇಲಿಯಾ, ಬಾಂಗ್ಲಾ ಕದಾಟ..

Comments are closed.

Social Media Auto Publish Powered By : XYZScripts.com