CBI politics : ಎನ್ ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ನಿವಾಸದ ಮೇಲೆ ದಾಳಿ..

ನವದೆಹಲಿ: ಎನ್ ಡಿಟಿವಿ ಸಂಸ್ಥಾಪಕ ಹಾಗೂ ಮುಖ್ಯಸ್ಥ ಪ್ರಣಯ್ ರಾಯ್ ನಿವಾಸ ಹಾಗೂ ಕಚೇರಿಯ ಮೇಲೆ ಸೋಮವಾರ ಸಿಬಿಐ ದಾಳಿ ನಡೆಸಿದೆ. ಇದೊಂದು ದುರುದ್ದೇಶದಿಂದ ಕೂಡಿದ ‘ದಾಳಿ’ ಎಂದು ಪ್ರತಿಕ್ರಿಯಿಸಿರುವ ಎನ್ ಡಿಟಿವಿಯು ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹತ್ತಿಕ್ಕುವ ಇಂತಹ ಪ್ರಯತ್ನಗಳಿಗೆ ಮಣಿಯುವುದಿಲ್ಲ ಎಂದು ತಿಳಿಸಿದೆ.

ಐಸಿಐಸಿಐ ಬ್ಯಾಂಕ್ ನೀಡಿದ ದೂರಿನ ಮೇರೆಗೆ ದಾಖಲಾದ ಎಫ್ ಆರ್ ಐ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ನವದೆಹಲಿ ಹಾಗೂ ಡೆಹರಾಡೂನ್ ಗಳ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದರು. ಖಾಸಗಿ ಕಂಪೆನಿಯ ಹೆಸರಿನಲ್ಲಿ ಪ್ರಣಯ್ ರಾಯ್ ಹಾಗೂ ಅವರ ಪತ್ನಿ  ರಾಧಿಕಾ ರಾಯ್ ಅವರು ಸಾಲ ಮರುಪಾವತಿಸದೆ ಬ್ಯಾಂಕ್ ಗೆ ವಂಚನೆ ಮಾಡಿ 48 ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆಗೂಡಿ ಸಿಬಿಐ ಅಧಿಕಾರಿಗಳು ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.

ಹಳೆಯ ದೂರುಗಳನ್ನು ನೆಪವಾಗಿಟ್ಟು ದುರುದ್ದೇಶದಿಂದ ದಾಳಿ ನಡೆಸಲಾಗಿದೆ. ಇದೊಂದು ಭಾರತದ ಪ್ರಜಾಪ್ರಭುತ್ವದ ವಿವಿಧ ಸಂಸ್ಥೆಗಳನ್ನು ನಾಶ ಪಡಿಸುವ ಪ್ರಯತ್ನದ ಮುನ್ಸೂಚನೆಯಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಎನ್ ಡಿ ಟಿವಿ ಪ್ರತಿಕ್ರಿಯಿಸಿದೆ.

Comments are closed.

Social Media Auto Publish Powered By : XYZScripts.com