ಕಟ್‌ ಆಗಿದ್ದ ಬಾಲಕಿಯ ಬೆರಳು ಮರುಜೋಡಣೆ : ಇನ್ನೂ ನಿದ್ರಾವಸ್ಥೆಯಲ್ಲಿದೆ ಅತ್ಯಾಚಾರಕ್ಕೊಳಗಾದ ಮಗು

ಬೆಂಗಳೂರು: ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಗು ಸಧ್ಯ ನಿದ್ರಾವಸ್ಥೆಯಲ್ಲಿದೆ, ಮಗು ಸಾಕಷ್ಟು ನೋವು ಅನುಭವಿಸುತ್ತಿದೆ, ಮೂಳೆಗೆ ಗಾಯವಾಗಿ, ಒಂದು ಬೆರಳು ಕಟ್ ಆಗಿದೆ. ಕಟ್ ಆಗಿರುವ ಬೆರಳನ್ನು ಮರುಜೊಡಣೆ ಮಾಡಲಾಗಿದೆ ಎಂದು ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷೆ ಕೃಪ ಅಮರ ಆಳ್ವಾ ಮಾಧ್ಯಮಗಳಿಗೆ ಹೇಳಿದ್ದಾರೆ. ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು,  ಈಗಾಗಲೇ ಬಾಲಕಿಯ ಸ್ಕ್ಯಾನಿಂಗ್ ಮಾಡಲಾಗಿದ್ದು, ಸ್ಕ್ಯಾನಿಂಗ್ ಆಧಾರದ ಮೇಲೆ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಇಂದು ಮತ್ತೆ ಸ್ಕ್ಯಾನಿಂಗ್ ಮಾಡಿ ಪರಿಕ್ಷಿಸಿ ಸ್ಕ್ಯಾನಿಂಗ್ ವರದಿ ಮೇಲೆ ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ತಿಳಿಸಿದ್ದಾರೆ.  ಮಗುವಿನ ರಕ್ತ ಮಾದರಿಯನ್ನು ಫ್ಲಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದ್ದು,  ವರದಿ ಬಂದ ನಂತರ ಸಂಪೂರ್ಣ ವಿವರವನ್ನು ತಿಳಿಸಲಾಗಯವುದು ಎಂದಿದ್ದಾರೆ. ಘಟನೆಯಿಂದ ಮಗು ಭಯಬಿದ್ದಿರುವುದರಿಂದ, ಕೌನ್ಸಿಲಿಂಗ್ ಆಕೆಗೆ ಅಗತ್ಯವಿದೆ ಎಂದಿರುವ ಕೃಪಾ,  ಈ ಬಗ್ಗೆ ನಿಮಾನ್ಸ್ ವೈದ್ಯ ಡಾ.ಶೇಷಾದ್ರಿಯವರೊಂದಿಗೆ ಮಾತನಾಡಿ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ⁠⁠⁠⁠
ಬೆಂಗಳೂರಿನ ವೈಯಾಲಿಕಾವಲ್‌ ಸೊಸೈಟಿ ಗ್ರೌಂಡ್‌ನಲ್ಲಿ ಜೂನ್‌ ೩ರ ರಾತ್ರಿ ಐದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೋರ್ವ ಜೂನ್‌ ೩ರ ರಾತ್ರಿ ಅತ್ಯಾಚಾರ ನಡೆಸಿದ್ದ. ಆತ್ಯಚಾರವೆಸಗಿ ಪರಾರಿಯಾಗಿದ್ದ ಆರೋಪಿ ವಿರೇಶ್‌ ಎಂಬಾತನನ್ನ ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಶನಿವಾರ ರಾತ್ರಿ ಮೂತ್ರ ವಿಸರ್ಜನೆಗಾಗಿ ಗುಡಿಸಲಿನಿಂದ ಹೊರಬಂದ ಮಗುವನ್ನು ಕಿಡ್ನಾಪ್ ಮಾಡಿ ಕೆಜಿ ಹಳ್ಹಿ ವ್ಯಾಪ್ತಿಯ ವೈಯಲಿಕಾವಲ್ ಸೂಸೈಟಿ ಗ್ರೌಂಡ್‌ಗೆ ಈತ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಅತ್ಯಾಚಾರಕ್ಕೊಳಗಾದ ಮಗು ತೀವ್ರ ಆಘಾತದಿಂದ ಎಚ್ಚರತಪ್ಪಿತ್ತು.  ಆರೋಪಿ ಮಗುವನ್ನ ಕಿಡ್ನಾಪ್ ಮಾಡಿರುವ ದೃಶ್ಯ ಮತ್ತು ಕೃತ್ಯವೆಸಗಿದ ನಂತರ ಮಗುವನ್ನ ಅರ್ಪಾಟ್ ಮೆಂಟ್ ಬಳಿ ಬಿಟ್ಟು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

Comments are closed.

Social Media Auto Publish Powered By : XYZScripts.com