Champions challenge : ಭಾರತದ ಗೆಲುವಿಗಾಗಿ ಕಲ್ಬುರ್ಗಿಯಲ್ಲಿ ಹನುಮಂತನಿಗೆ ಪ್ರಾರ್ಥನೆ..

ಕಲ್ಬುರ್ಗಿ : ಇಂದು ನಡೆಯಲಿರುವ ಭಾರತ-ಪಾಕಿಸ್ತಾನ  ಚಾಂಪಿಯನ್ ಟ್ರೋಫಿ ಮ್ಯಾಚ್ ನಲ್ಲಿ ಭಾರತ ಕ್ರಿಕೆಟ್ ತಂಡ ಗೆಲವು ಸಾಧಿಸಲಿ ಎಂದು ಆಶಿಸಿ ಕಲಬುರಗಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕೋರಂಟಿ ಹನುಮಾನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.


ಕ್ರಿಕೆಟ್ ಪ್ರೇಮಿ ಹಾಗೂ ಯುವ  ಹೋರಾಟಗಾರ ಎಮ್ ಎಸ್ ಪಾಟೀಲ ನೇತೃತ್ವದಲ್ಲಿ ಅನೇಕ ಕ್ರಿಕೆಟ್ ಅಭಿಮಾನಿಗಳು ಪ್ರಸಿದ್ದ ಕೊರಂಟಿ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇಂದು ನಡೆಯಲಿರುವ ಪಾಕಿಸ್ತಾನ ಭಾರತ ಕ್ರಿಕೆಟ್ ನಲ್ಲಿ ಮ್ಯಾಚ್ ನಲ್ಲಿ ಭಾರತ ಟೀಮ್ ಗೆದ್ದೇ ಗೆಲ್ಲುತ್ತೆ ಎನ್ನುವ ವಿಶ್ವಾಸ ವ್ಯಕ್ತಪಸಿಡಿದರು. ಈ ವೇಳೆ ಅನೇಕ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ವಿರುದ್ದ ಭಾರತ ಗೆಲುವು ಸಾಧಿಸಲಿ ಎಂದು ಭಾರತದ ಪರವಾಗಿ ಜೈಘೋಷಗಳನ್ನು ಕೂಗಿ ಪ್ರಾರ್ಥನೆ ಸಲ್ಲಿಸಿದರು. ಇಂದಿನ  ಮ್ಯಾಚ್ ನಲ್ಲಿ ಎಲ್ಲರೂ ಚೆನ್ನಾಗಿ ಆಡುತ್ತಾರೆ. ಭಾರತವೇ ಟ್ರೋಫಿ ತರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

Comments are closed.

Social Media Auto Publish Powered By : XYZScripts.com