ನನ್ನ ಮಗಳು ಸನ್ನಿ ಲಿಯೋನ್ ಆಗೋಕೆ ಬಯಸುತ್ತಾಳೆ..RGV ಹೊಸ ಬಾಂಬ್!

ವಿವಾದಾತ್ಮಕ ಮತ್ತು ಪ್ರತಿಭಾನ್ವಿತ ಫಿಲ್ಮ್ ಮೇಕರ್ ರಾಮ್ ಗೋಪಾಲ್ ವರ್ಮಾ. ಇತ್ತೀಚಿನ ದಿನಗಳಲ್ಲಿ ವರ್ಮಾ ನಿರ್ದೇಶನದ ಯಾವ್ದೆ ಸಿನಿಮಾ ಅಷ್ಟಾಗಿ ಸೌಂಡ್ ಮಾಡ್ಲಿಲ್ಲ. ಬಟ್ ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡ್ತಾನೆ ಇದ್ದಾರೆ. ಕಳೆದ ವಾರವಷ್ಟೆ ಟ್ವಿಟ್ಟರ್ ಗೆ ಗುಡ್ ಬೈ ಹೇಳಿರೋ RGV ಸದ್ಯ ಫೇಸ್ಬುಕ್ ಮತ್ತು ಇನ್ಸ್ಟ್ರಾಗ್ರಾಂನಲ್ಲಿ ಆಕ್ಟೀವ್ ಆಗಿದ್ದಾರೆ. MERI BETI SUNNY LEONE BANNA CHAAHTI HAI ಅನ್ನೋ ಶಾರ್ಟ್ ಫಿಲ್ಮ್ ಟೀಸರ್ ರಿಲೀಸ್ ಮಾಡಿ ಈ ವಿವಾದಾತ್ಮಕ ನಿರ್ದೇಶಕ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ.

ಸಿನಿಮಾಗಳಲ್ಲಿ ಹೇಳೋಕೆ ಸಾಧ್ಯವಾಗದ್ದನ್ನ ಇನ್ಮುಂದೆ ಯೂಟ್ಯೂಬ್ ಮೂಲಕ ಹೇಳ್ತೀನಿ ಅಂದಿದ್ದ ವರ್ಮಾ ಅದನ್ನ ಸ್ಟಾರ್ಟ್ ಮಾಡಿರುವಂತೆ ಕಾಣ್ತಿದೆ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸನ್ನಿ ಲಿಯೋನ್ ಕುರಿತು ಟ್ವೀಟ್ ಮಾಡಿ, ಆ ನಂತ್ರ ಮಹಿಳಾ ಸಂಘಟನೆಗಳ ಪ್ರತಿಭಟನೆಗೆ ತಲೆ ಬಾಗಿ ಕ್ಷಮೆಯಾಚಿಸಿದ್ದ ವರ್ಮಾ ಈಗ ಮತ್ತೆ ಸನ್ನಿ ಲಿಯೋನ್ ಹೆಸರಿನಲ್ಲಿ ಶಾರ್ಟ್ ಫಿಲ್ಮ್ ಮಾಡ್ತಿರೋದು ಅಚ್ಚರಿಗೆ ಕಾರಣವಾಗಿದೆ. ಆ ಶಾರ್ಟ್ ಫಿಲ್ಮ್ ಟೀಸರ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ.

ಸನ್ನಿ ಲಿಯೋನ್ ರೀತಿ ದೊಡ್ಡ ಪೋರ್ನ್ ಸ್ಟಾರ್ ಆಗ್ಬೇಕು ಅನ್ನೋ ಕನಸು ಕಾಣುವ ಯುವತಿಯ ಕಥೆಯನ್ನು ವರ್ಮಾ ಈ ಕಿರುಚಿತ್ರದಲ್ಲಿ ಹೇಳೊಕೆ ಹೊರಟಿದ್ದಾರೆ ಅನ್ನೋದು, ಈ ಟೀಸರ್ ನೋಡಿದ್ರೆ ಅರ್ಥವಾಗುತ್ತೆ. ಶೀಘ್ರದಲ್ಲೇ MERI BETI SUNNY LEONE BANNA CHAAHTI HAI ಶಾರ್ಟ್ ಫಿಲ್ಮ್ ರಿಲೀಸ್ ಆಗಲಿದೆ. ಈ ಕಿರುಚಿತ್ರ ವಿವಾದ ಸೃಷ್ಟಿಸಿದ್ರೂ ಅಚ್ಚರಿ ಪಡ್ಬೇಕಿಲ್ಲ.

Comments are closed.

Social Media Auto Publish Powered By : XYZScripts.com