French open : ಪ್ರಿ ಕ್ವಾರ್ಟರ್ ಫೈನಲ್‍ಗೆ ಜೋಕೊವಿಚ್, ರಾಫೆಲ್ ನಡಾಲ್ ….

ವಿಶ್ವದ ಮಾಜಿ ನಂಬರ್ 1 ಆಟಗಾರ ನೋವಾಕ್ ಜೋಕೊವಿಚ್ ಹಾಗೂ 10ನೇ ಫ‍್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೇಲೆ ಕಣ್ಣು ಇಟ್ಟಿರುವ ಸ್ಪೇನ್‍ ನ ರಾಫೆಲ್ ನಡಾಲ್ ಅವರು ವರ್ಷದ ಎರರಡನೇ ಗ್ರ್ಯಾನ್‍ ಸ್ಲ್ಯಾಮ್‍ ಟೂರ್ನಿಯಾದ ಫ್ರೆಂಚ್ ಓಪನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಶುಕ್ರವಾರ ಪ್ಯಾರೀಸ್ ನಲ್ಲಿ ನಡೆದ ಪುರುಷರ ಸಿಂಗಲ್ಸ್‍ನ ಮೂರನೇ ಸುತ್ತಿನ ಪಂದ್ಯದಲ್ಲಿ ಜೋಕೋವಿಚ್ ಅವರು 5-7, 6-3, 3-6, 6-1, 6-1 ಸೆಟ್‍ಗಳಿಂದ ಅರ್ಜಿಂಟೀನಾದ ಡಿಗೋ ಸ್ವಾರ್ಟಜಮನ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು.

3 ಗಂಟೆ 18 ನಿಮಿಷ ನಡೆದ ಹೋರಾಟದಲ್ಲಿ ನೋವಾಕ್ ನಡೆಯನ್ನು ಅರಿತು ಆಡಿದ ಡಿಗೋ ಸೊಗಸಾದ ಆಟ ಆಡಿದರು. ಮೊದಲ ಹಾಗೂ ಮೂರನೇ ಸೆಟ್‍ನಲ್ಲಿ ಗೆಲುವ ಕಂಡ ಡಿಗೋ, ಎರಡನೇ, 4 ಹಾಗೂ ಐದನೇ ಸೆಟ್‍ನಲ್ಲಿ ಸೋಲು ಅನುಭವಿಸಿದರು.

ಇನ್ನೊಂದು ಪರುಷರ ಸಿಂಗಲ್ಸ್ ಪಂದ್ಯದಲ್ಲಿ ನಡಾಲ್ 6-0, 6-1, 6-0, ಸೆಟ್‍ಗಳಿಂದ ಜಾರ್ಜಿಯಾದ ನಿಕೋಲೊಜ್ ಬಸಿಲ್‍ ಶಿವಿಲ್‍ ವಿರುದ್ಧ ಗೆದ್ದು 16 ಘಟ್ಟಕ್ಕೆ ಅರ್ಹತೆ ಪಡೆದುಕೊಂಡರು.

ಉಳಿದಂತೆ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ಸ್ಪೇನ್ ನ ಗಾರ್ಬಿನ್ ಮುಗುರಜಾ 7-5, 6-2 ರಿಂದ ಕಜಕಿಸ್ತಾನದ ಯುಲಿಯಾ ವಿರುದ್ಧ, ಮಾಜಿ ನಂಬರ್ 1 ಶ್ರೇಯಾಂಕಿತ ವೀನಸ್ ವಿಲಿಯಮ್ಸನ್ ಅವರು 6-3, 6-1 ಸೆಟ್ಗಳಿಂದ ಬೆಲ್ಜಿಯಂ ಎಲ್ಸಿ ಮೆರ್ಟನ್ಸ್‍ ಜಯ ಸಾಧಿಸಿದರು.

Comments are closed.

Social Media Auto Publish Powered By : XYZScripts.com