Champions challenge : ಹರಿಣಗಳಿಗೆ ಶ್ರೀಲಂಕಾ ಸಿಂಹಗಳ ಸವಾಲು….

ವಿಶ್ವದ ನಂಬರ್​ 1 ಸ್ಥಾನ ಪಡೆದಿರುವ್ ದಕ್ಷಿಣ ಆಫ್ರಿಕಾ ತಂಡ ಹಾಗೂ ಶ್ರೀಲಂಕಾ ತಂಡಗಳು ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ ಟೂರ್ನಿಯ ಮೂರನೇ ಪಂದ್ಯದಲ್ಲಿ ಕಾದಟವನ್ನು ನಡೆಸಲಿದೆ. ಅಂಕಿ ನಅಂಶಗಳ ಲೆಕ್ಕಾಚರದಲ್ಲಿ ಬಲಿಷ್ಠವಾಗಿರುವ ಲಂಕಾ ತಂಡವನ್ನು ಕಟ್ಟಿಹಾಕಲು ಆಫ್ರಿಕಾ ಪ್ಲಾನ್​ ಮಾಡಿಕೊಂಡಿದೆ.

ಎಬಿಡಿ ವಿಲಿಯರ್ಸ್​ ಹರಿಣಗಳ ಟ್ರಂಪ್​ ಕಾರ್ಡ್​ ಬ್ಯಾಟ್ಸ್​​​ಮನ್​​​. ದಕ್ಷಿಣ ಆಫ್ರಿಕಾ ಎಬಿಡಿ ಸಾರಥ್ಯದಲ್ಲೇ ಮುನ್ನಡೆಯಲಿದೆ. ವಿಶ್ವದ ಖ್ಯಾತ ಬ್ಯಾಟ್ಸ್​​ಮನ್​ ಐಪಿಎಲ್​​ನಲ್ಲಿ ಶತಕ ಬಾರಿಸಿರುವ ಹಶೀಮ್​ ಆಮ್ಲಾ, ಫಾಫ್​ ಡುಪ್ಲೆಸಿಸ್​​​, ಡೇವಿಡ್​​ ಮಿಲ್ಲರ್​​​ ತಂಡದ ಬ್ಯಾಟಿಂಗ್​ಗೆ ಬಲ ತುಂಬಿದ್ದಾರೆ. ಇವರು ಲಂಕಾ ಬೌಲರ್​​​​ಗಳಿಗೆ ಸವಾಲು ಎಸೆಯ ಬಲ್ಲರು. ಇನ್ನು ಏಕದಿನ ಶ್ರೇಯಾಂಕದಲ್ಲಿ ಇತ್ತೀಚಿಗೆ ನಂಬರ್​ 1 ಸ್ಥಾನವನ್ನು ಪಡೆದಿರುವ ಕಗಿಸೊ ರಬಾಡ ವೇಗದ ನೊಗವನ್ನು ಹೊರಲಿದ್ದಾರೆ. ರಬಾಡ ಅವರಿಗೆ ಮೋರ್ನೆ ಮಾರ್ಕೆಲ್​​​, ಕ್ರಿಸ್​ ಮೋರಿಸ್​​, ಕೇಶವ್​ ಮಹಾರಾಜ್​​​, ಎದುರಾಳಿಗಳನ್ನು ಕಟ್ಟಿ ಹಾಕಬಲ್ಲರು.
ಏಂಜಲೋ ಮ್ಯಾಥ್ಯೂಸ್​​​​​​​​ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಶ್ರೀಲಂಕಾ ಕೂಡ ಬಲಿಷ್ಠವಾಗಿದೆ. ಆರಂಭಿಕರಾಗಿ ಉಪುಲ್​ ತರಂಗಾ ಹಾಗೂ ನಿರೋಶನ್​​ ಡಿಕ್​​ವೆಲ್​​​​​​ ಕಣಕ್ಕಿಳಿಯಲಿದ್ದು ದೊಡ್ಡ ಇನಿಂಗ್ಸ್​ ಕಟ್ಟುವ ತಾಕತ್ತು ಹೊಂದಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ತಿಸಾರ ಪೆರೇರ, ದಿನೇಶ್​ ಚಂಡಿಮಾಲ್ ಹಾಗೂ ಚಮರ ಕಪುಗೆದರ ಕೂಡ ಇರೋದು ಲಂಕಾ ಬ್ಯಾಟಿಂಗ್​​ ಬಲ ಇನ್ನಷ್ಟು ಹೆಚ್ಚಿದೆ. ಬೌಲಿಂಗ್​ ವಿಭಾಗದಲ್ಲಿ ಅನುಭವಿ ಲಸಿತ್​ ಮಲಿಂಗಾ ಇರೋದು ಶ್ರೀಲಂಕಾದ ಪ್ಲಸ್​ ಪಾಯಿಂಟ್​​​​. ಅಲ್ದೇ ವೇಗಿ ನುವನ್​ ಕುಲಸೇಖರ, ತಿಸಾರ ಪೆರೇರ, ನುವನ್​​ ಪ್ರದೀಪ್​​​ ರಂತಹ ವರ್ಲ್ಡ್​ ಕ್ಲಾಸ್​ ಬೌಲರ್​​​ಗಳು ಇದ್ದಾರೆ. ಹೀಗಾಗಿ ಅಲ್ಪ ಮೊತ್ತಕ್ಕೆ ಎದುರಾಳಿಯನ್ನ ಕಟ್ಟಿಹಾಕೋದು ಹಾಗೂ ಡಿಫೆಂಡ್​​​​​​​ ಮಾಡೋದು ಕೂಡ ಶ್ರೀಲಂಕಾ ಪಾಲಿಗೆ ಕಷ್ಟದ ಮಾತಲ್ಲ.

Comments are closed.

Social Media Auto Publish Powered By : XYZScripts.com