ಬೆಳಗಾವಿಯಲ್ಲಿ ಮತ್ತೆ ಎಂಇಎಸ್, ಶಿವಸೇನೆ ಕಾರ್ಯಕರ್ತರ ಪುಂಡಾಟ

ಬೆಳಗಾವಿ : ಬೆಳಗಾವಿಯಲ್ಲಿ ಮತ್ತೆ ಎಂಇಎಸ್ , ಶಿವಸೇನೆ ಕಾರ್ಯಕರ್ತರ ಪುಂಡಾಟ ಪ್ರಾರಂಭವಾಗಿದೆ. ಮಹಾರಾಷ್ಟ್ರ ಸಾರಿಗೆ ಬಸ್ ಅನ್ನು ನಾಡವಿರೋಧಿ ಘೋಷಣೆ ಕೂಗಿನೊಂದಿಗೆ ಸ್ವಾಗತ ಮಾಡಿಕೊಂಡಿದೆ.
ನಿನ್ನೆ ಮಹಾರಾಷ್ಟ್ರ ಸಾರಿಗೆ ಬಸ್ ಮೇಲೆ ಜೈ ಮಹಾರಾಷ್ಟ್ರ ಬರೆದಿರುವ ಬಸ್ ಗೆ ಸ್ವಾಗತ ಮಾಡಿಕೊಂಡಿತ್ತು. ಮಹಾರಾಷ್ಟ್ರ ಸಾರಿಗೆ ಸಚಿವರಿಂದ ಮುಂಬೈಯಿಂದ ಬೆಳಗಾವಿ ಚಾಲನೆ ನೀಡಿದ್ದ ಬಸ್ ಅನ್ನು ಸ್ವಾಗತಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಎಂಇಎಸ್ ಪುಂಡಾಟ ಮುಂದುವರೆದರೂ ಪೊಲೀಸರು ನಿದ್ದೆಗೆ ಜಾರಿದ್ದಾರೆ. ಪದೇ ಪದೇ ಜೈ ಮಹಾರಾಷ್ಟ್ರ ಘೋಷಣೆ ಕೂಗಿ ಎಂಇಎಸ್ ಅಟ್ಟಹಾಸ ಮೆರದರೂ ಪೊಲೀಸ್ ಇಲಾಖೆ ಮೌನ ವಹಿಸಿರುವುದು‌ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪರೋಕ್ಷವಾಗಿ ನಾಡದ್ರೋಹಿಗಳಿಗೆ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂದು ಕನ್ನಡಿಗರಿಗೆ ಭಾಸವಾಗುತ್ತಿದೆ.

Comments are closed.