ಪಾರ್ವತಮ್ಮ ಪಾರ್ಥೀವ ಶರೀರಕ್ಕೆ ರಾಷ್ಟ್ರಧ್ವಜ ಸುತ್ತಿದ ಆರೋಪ: ಖಾಸಗಿ ದೂರು ದಾಖಲಿಸಿದ ವಕೀಲ

ಬೆಂಗಳೂರು: ಪಾರ್ವತಮ್ಮ ರಾಜಕುಮಾರ್ ಅಂತಿಮ ಯಾತ್ರೆಯಲ್ಲಿ ಪಾರ್ವತಮ್ಮ ಪಾರ್ಥೀವ ಶರೀರಕ್ಕೆರಾಷ್ಟ್ರ ಧ್ವಜ ಸುತ್ತಲಾಗಿದೆ, ಈ ಮೂಲಕ ರಾಷ್ಟ್ರ ಧ್ವಜ ಕಾಯ್ದೆ ನಿಯಮ 5 ನ್ನು ಉಲ್ಲಂಘಿಸಲಾಗಿದೆ ಎಂದು ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ , ಗೃಹ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
ಪಾರ್ವತಮ್ಮ ಅವರ ಪಾರ್ಥಿವ ಶರೀರವನ್ನು ರಾಷ್ಟ್ರ ಧ್ವಜ ಸುತ್ತುವ ಮೂಲಕ   prevention of insult to the national honour act 1971 ಕಾಯ್ದೆ ಪ್ರಕಾರ ಅಪರಾಧವೆಸಗಿದ್ದಾರೆ, ಎಂದು ಖಾಸಗಿ ದೂರು ದಾಖಲಿಸಿದ್ದಾರೆ.  ಬೆಂಗಳೂರಿನ ವಿಜಯನಗರ ನಿವಾಸಿ ವಕೀಲ ಚೇತನ್ ಎಂಬುವವರು ಈ ದೂರು ನೀಡಿದ್ದು,  ರಾಷ್ಟ್ರ ಧ್ವಜವನ್ನು ಕೇವಲ ಮಿಲಿಟರಿ ಅಧಿಕಾರಿಗಳ ಪಾರ್ಥೀವ ಶರೀರಕ್ಕೆ ಸುತ್ತಲು ಅವಕಾಶವಿದೆ ಆದರೆ ಬೇರೆ ಯಾವುದೇ ಖಾಸಗಿ ವ್ಯಕ್ತಿಗಳ ಅಂತಿಮ  ಸಂಸ್ಕಾರಕ್ಕೆ ಬಳಸಬಾರದು ಎಂದು ಉಲ್ಲೇಖಿಸಿದ್ದಾರೆ.

Comments are closed.