ಸಂಘಮಿತ್ರ ಚಿತ್ರದಿಂದ ಶೃತಿ ಹಾಸನ್ ಔಟ್..ಕನ್ನಡತಿ ಪಾಲಾಗುತ್ತಾ ಈ ಪಾತ್ರ..?

2 ವಾರದ ಹಿಂದಷ್ಟೆ ಕಾನ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ತಮಿಳಿನ ಸಂಘಮಿತ್ರ ಸಿನಿಮಾ ಅನೌನ್ಸ್ ಮಾಡಿ ಫಸ್ಟ್ ಲುಕ್ ಪೋಸ್ಟರ್ಸ್ ರಿಲೀಸ್ ಮಾಡಲಾಗಿತ್ತು. ಇದಕ್ಕಿದಂತೆ ಮೊನ್ನೆ ಚಿತ್ರದ ಟೈಟಲ್ ರೋಲ್ ಮಾಡ್ಬೇಕಿದ್ದ ಶೃತಿ ಹಾಸನ್ ಚಿತ್ರತಂಡಕ್ಕೆ ಶಾಕ್ ಕೊಟ್ಟಿದ್ಲು. ನನಗೆ ಇನ್ನೂ ಚಿತ್ರದ ಸ್ಕ್ರಿಪ್ಟ್ ಸಿಕ್ಕಿಲ್ಲ. ಸರಿಯಾಗಿ ಕಥೆಯೇ ಸಿದ್ಧವಾಗಿಲ್ಲ ಅಂತಿದ್ದಾರೆ, ಹೀಗಿರುವಾಗ ನಾನು 2 ವರ್ಷ ಈ ಚಿತ್ರಕ್ಕಾಗಿ ಯಾಕೆ ಕಾಯ್ಬೇಕು. ನನ್ನಿಂದ ಈ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಿಲ್ಲ ಅಂತೇಳಿ ಅಚ್ಚರಿ ಉಂಟು ಮಾಡಿದ್ಲು. ಇದಕ್ಕೆ ಸಂಗಮಿತ್ರ ಚಿತ್ರತಂಡ ಕೂಡ ಅಸಮಧಾನ ವ್ಯಕ್ತಪಡಿಸಿತ್ತು. ಎಲ್ಲಾ ಓಕೆ ಆದ್ಮೇಲೆ ನಟಿಸೋಕೆ ಶೃತಿ ಹಾಸನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆದ್ರೆ ಈಗ ಈ ರೀತಿ ಮಾತಾಡೋದು ಸರಿ ಅಲ್ಲ ಅಂತ ವಾದಿಸಿತ್ತು.

ಸದ್ಯ ಈ ವಿಚಾರವಾಗಿ ಶೃತಿ ಹಾಸನ್ ಕ್ಲಾರಿಟಿ ಕೊಟ್ಟಿದ್ದಾಳೆ. ಸಂಘಮಿತ್ರ ಕಥೆ ನನಗೆ ಗೊತ್ತು, ನನ್ನ ಕ್ಯಾರೆಕ್ಟರ್ ಕುರಿತು ನನಗೆ ಸಂಪೂರ್ಣವಾಗಿ ತಿಳಿದಿದೆ, ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬರುತ್ತೆ, ಆದ್ರೆ ಸರಿಯಾದ ಸ್ಕ್ರಿಪ್ಟ್ ಇಲ್ಲದೇ, ಚಿತ್ರೀಕರಣಕ್ಕೆ ಸಂಬಂಧಿಸಿದ ಕ್ಯಾಲೆಂಡರ್ ಇಲ್ಲದೇ ಚಿತ್ರಕ್ಕಾಗಿ ಎರಡು ವರ್ಷ ವ್ಯಯಿಸಿದ್ರೆ ನನ್ನ ಕರಿಯರ್‍ನ ಪಣಕ್ಕಿಟ್ಟಂತೆ ಆಗುತ್ತೆ, ಅದೇ ಕಾರಣಕ್ಕೆ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಅಂತ ಆಕೆ ಹೇಳಿಕೊಂಡಿದ್ದಾಳೆ. ಒಟ್ಟಿನಲ್ಲಿ ಬಾಹುಬಲಿಯನ್ನ ಮೀರಿಸೋ ಚಿತ್ರವನ್ನ ನಿರ್ಮಿಸಬೇಕು ಅನ್ನೋ ನಿರ್ದೇಶಕ ಸುಂದರ್.ಸಿ ಕನಸ್ಸಿಗೆ ಆರಂಭದಲ್ಲೇ ದೊಡ್ಡ ಪೆಟ್ಟು ಬಿದ್ದಂತಾಗಿದೆ.

ಸಂಘಮಿತ್ರ ಚಿತ್ರಕ್ಕಾಗಿ ಶೃತಿ ಹಾಸನ್ ಸಾಕಷ್ಟು ಹೋಂ ವರ್ಕ್ ಮಾಡಿಕೊಳ್ತಿದ್ಲು. ಅದಕ್ಕೆ ಸಂಬಂಧಿಸಿದ ವಿಡೀಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿತ್ತು. ಎರಡು ವಾರದ ಹಿಂದೆ ಚಿತ್ರತಂಡದ ಜೊತೆ ಕಾನ್ ಫೆಸ್ಟಿವಲ್‍ನಲ್ಲಿ ಹಿರಿಹಿರಿ ಹಿಗ್ಗಿದ್ದ ಶೃತಿ ಈಗ ಕೈ ಕೊಟ್ಟಿರೋದು ಆಶ್ಚರ್ಯ ತಂದಿದೆ. ಚಿತ್ರದಲ್ಲಿ ಆರ್ಯ ಮತ್ತು ಜಯಂ ರವಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸ್ತಿದ್ದು, ಅವ್ರ ಫಸ್ಟ್ ಲುಕ್ ಪೋಸ್ಟರ್ಸ್ ಸಹ ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿದೆ. ಸದ್ಯ ಶೃತಿ ಹಾಸನ್ ಚಿತ್ರದಿಂದ ಹೊರಬಂದಿರೋ ಕಾರಣ ಚಿತ್ರತಂಡ ಮತ್ತೊಬ್ಬ ನಟಿಯ ಹುಡುಕಾಟದಲ್ಲಿದೆ. ಅದ್ರಲ್ಲೂ ಬಾಹುಬಲಿ ಸಿನಿಮಾದಲ್ಲಿ ದೇವಸೇನಾ ಪಾತ್ರದಲ್ಲಿ ಮಿಂಚಿದ ಕನ್ನಡತಿ ಅನುಷ್ಕಾ ಶೆಟ್ಟಿಯನ್ನ ಸಂಘಮಿತ್ರ ಪಾತ್ರಕ್ಕೆ ಕರೆತರೋ ಪ್ರಯತ್ನದಲ್ಲಿರಂತೆ ನಿರ್ದೇಶಕರು. ಅದೇ ನಿಜವಾದ್ರೆ ಮತ್ತೊಂದು ಅದ್ಭುತ ಪಾತ್ರದಲ್ಲಿ ಸ್ವೀಟಿಯನ್ನ ಅಭಿಮಾನಿಗಳು ನೋಡ್ಬೋದು.

Comments are closed.

Social Media Auto Publish Powered By : XYZScripts.com