ಬೆಂಗಳೂರಿನಲ್ಲಿ ತಯಾರಾಗ್ತಾಯಿರುವ ಐಫೋನ್ ಕೇವಲ 10,000ರೂ ಗೆ ಸಿಗಲು ಹೇಗೆ ಸಾಧ್ಯ?

ಜಗತ್ತಿನ ನಂಬರ್ ಒನ್ ಸ್ಮಾರ್ಟ್‌ಫೋನ್‌ ಕಂಪೆನಿ ಆಪಲ್ ಭಾರತದಲ್ಲಿಯೇ ಮೊದಲ ಭಾರಿ ತನ್ನ ಮೊಬೈಲ್ ತಯಾರಿಕಾ ಕಂಪೆನಿಯನ್ನು ಬೆಂಗಳೂರಿನಲ್ಲಿ ಆರಂಭಿಸಿ ಮೊದಲ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿಯೂ ಲೀಕ್ ಆಗಿದೆ.! ಭಾರತಕ್ಕೆ ಅವಶ್ಯಕತೆ ಇರುವಷ್ಟು ಐಫೋನ್‌ಗಳನ್ನು ಬೆಂಗಳೂರಿನಲ್ಲಿಯೇ ತಯಾರಿಸಲು ಆಪಲ್ ಕಂಪೆನಿ ಮುಂದಾಗಿದೆ.!! ಇನ್ನು ಬೆಂಗಳೂರಿನಲ್ಲಿ ತಯಾರಾಗುವ ಆಪಲ್ ಸ್ಮಾರ್ಟ್‌ಫೋನ್‌ಗಳ ಬೆಲೆ ಕೇವಲ 10 ಸಾವಿರ ರೂಪಾಯಿಗಳಿಂದ ಶುರುವಾಗಲಿದೆ ಎಂಬ ಮಾಹಿತಿ ಸಹ ಹೊರಬಿದ್ದಿದ್ದು, ಈಗಾಗಲೇ ಈ ಸುದ್ದಿ ವೈರಲ್ ಆಗಿದೆ.
ಹಾಗಾದರೆ, ಬೆಂಗಳೂರಿನಲ್ಲಿ ತಯಾರಾದ ಐಫೋನ್‌ ಬೆಲೆ ಕೇವಲ 10 ಸಾವಿರ ರೂಪಾಯಿಗಳಿಂದ ಏಕೆ ಶುರುವಾಗಲಿದೆ? ಬೆಂಗಳೂರಿನಲ್ಲಿ ತಯಾರಿಕಾ ಘಟಕ ಆರಂಭಿಸಿರುವ ಆಪಲ್ ಕಂಪೆನಿಯ ಗುರಿಗಳೇನು ಅಂತ ಸ್ವಲ್ಪ ತಿಳ್ಕೊಳೋಣ.
ಐಫೋನ್ ಬೆಲೆ ಕೇವಲ 10000!!
ವಿದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ಆಪಲ್ ಫೋನ್‌ಗಳ ಬೆಲೆ ಭಾರತಕ್ಕೆ ಬರುವವೇಳೆಗೆ ಎರಡರಷ್ಟಾಗುತ್ತಿತ್ತು.! ಹಾಗಾಗಿ, ಆಪಲ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ದುಬಾರಿಯಾಗಿದ್ದವು. ಆದರೆ, ಆಪಲ್‌ ಮೊಬೈಲ್‌ಗಳು ಇಲ್ಲಿಯೇ ತಯಾರಾಗುವುದರಿಂದ ಐಫೋನ್ ಕೇವಲ 10000 ರೂಪಾಯಿಗಳಿಗೆ ಭಾರತೀಯರ ಕೈಸೇರುತ್ತಿದೆ.!!


ಬೆಂಗಳೂರಿನಲ್ಲಿಯೇ ತಯಾರಾಗಿ ಈಗಾಗಲೇ ಬಿಡುಗಡೆಯಾಗಿರುವ ಮಿಡ್‌ರೇಂಜ್ 32 GB ಸಂಗ್ರಹಣಾ ಸಾಮರ್ಥ್ಯದ ಐಫೋನ್ ಬೆಲೆ 27,000.!! ಅಂದರೆ ಆಪಲ್ ಐಫೋನ್ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು(16GB) ಕೇವಲ 10 ಸಾವಿರ ರೂಪಾಯಿಗಳಿಂದ ಶುರುವಾಗುತ್ತದೆ.!!
ಬರೀ ಐಫೋನ್ ಮಾತ್ರವಲ್ಲ.!!
ಬೆಂಗಳೂರಿನಲ್ಲಿ ಕೇವಲ ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲದೇ, ಆಪಲ್ ಟಿವಿ, ಆಪಲ್ ವಾಚ್‌ಗಳು ಸಹ ಇಲ್ಲೇ ತಯಾರಾಗುತ್ತವೆ ಎಂದು ಆಪಲ್ ತಿಳಿಸಿದೆ. ಸರ್ಕಾರಕ್ಕೆ ಸಲ್ಲಿಸುತ್ತಿರುವ ಆಮದು ತೆರಿಗೆ ಹಣವನ್ನು ಉಳಿಸಲು ಆಪಲ್ ಕಂಪೆನಿ ಎಲ್ಲಾ ಉತ್ಪನ್ನಗಳನ್ನು ಇಲ್ಲಿಯೇ ತಯಾರಿಸುತ್ತಿದೆ.!!


ಆಪಲ್ ಆದಾಯ ಹೆಚ್ಚಲಿದೆ!!
ಭಾರತದಲ್ಲಿ ಆಪಲ್‌ ಐಫೋನ್‌ಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಆಪಲ್‌ಗೆ ಪ್ರತಿವರ್ಷವೂ ಶೇ 21 ಪರ್ಸೆಂಟ್‌ನಷ್ಟು ಆದಾಯ ಹೆಚ್ಚುತ್ತಿದೆ. ಆದರೆ, ಈ ಮೊದಲು ಆಪಲ್ ಸ್ಮಾರ್ಟ್‌ಫೋನ್‌ಗಳ ದರ ಹೆಚ್ಚಾಗಿರುವುದರಿಂದ ಲಾಭದ ಪ್ರಮಾಣ ಕಡಿಮೆಯಾಗಿದೆ ಎಂದು ವರದಿಯಿಂದ ತಿಳಿದುಬಂದಿತ್ತು. ಹಾಗಾಗಿ, ಬೆಲೆ ಕಡಿಮೆಯಾದರೂ ಆಪಲ್ ಆದಾಯ ಹೆಚ್ಚಲಿದೆ!

Comments are closed.

Social Media Auto Publish Powered By : XYZScripts.com