ವಾಟಾಳ್ ನಾಗರಾಜ್ ನರಿ ಬುದ್ಧಿಯ ವ್ಯಕ್ತಿ : ಮನೋಹರ್ ಕಿಣೇಕರ್

ಬೆಳಗಾವಿ : ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಧರಣಿ ವಿಚಾರವಾಗಿ ಎಂಇಎಸ್ ಮುಖಂಡರು
ವಾಟಾಳ್ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಅರವಿಂದ ಪಾಟೀಲ್ ಹಾಗೂ ಮಾಜಿ ಶಾಸಕ ಮನೋಹರ್ ಕೀಣೇಕರ್ ವಾಗ್ದಾಳಿ ನಡೆಸಿದ್ದಾರೆ.
ಇಂದು ನಡೆದ ಎಂಇಎಸ್ ಹುತಾತ್ಮ ದಿನ ಆಚರಣೆ ವೇಳೆಯಲ್ಲಿ ವಾಟಾಳ್ ವಿರುದ್ಧ ಕಿಡಿಕಾರಿದ್ದಾರೆ.
‘ ವಾಟಾಳ್ ನಾಗರಾಜ್ ಎಂಬ ನರಿ ಬುದ್ದಿಯ ವ್ಯಕ್ತಿ ಬೆಳಗಾವಿಗೆ ಬಂದು ಪುಂಡಾಟಿಕೆ ಮಾಡಿದ್ದಾರೆ.
ಎಂಇಎಸ್ ಸಂಘಟನೆಯ ಬಗ್ಗೆ ವಾಟಾಳ್ ಹೇಳಿದ ವಿಚಾರ, ವಾಟಾಳ್ ಪುಂಡಾಟ ತೋರಿಸುತ್ತದೆ.
ನಾಲ್ಕೈದು ಬಾರಿ ಶಾಸಕರಾದ ವ್ಯಕ್ತಿಗೆ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಗೊತ್ತಿಲ್ಲವೆ..?
ಕರ್ನಾಟಕದಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ ‘ ಎಂಧು
ಮಾಜಿ ಶಾಸಕ ಮನೋಹರ್ ಕಿಣೇಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ 200 ಪೊಲೀಸರ ಭದ್ರತೆಯ ಅವಶ್ಯಕತೆ ಏನಿತ್ತು
ಬೆಳಗಾವಿಯಲ್ಲಿ ಮರಾಠಿಗರ ತಾಕತ್ತು ಗೊತ್ತಿದ್ದರಿಂದ ಇಷ್ಟೊಂದು ಭದ್ರತೆಯಲ್ಲಿ ವಾಟಾಳ್ ಬಂದಿದ್ದರು ‘ ಎಂದು
ಖಾನಾಪುರದ ಎಂಇಎಸ್ ಶಾಸಕ ಅರವಿಂದ ಪಾಟೀಲ್ ಹೇಳಿದ್ದಾರೆ.

Comments are closed.