ಫ್ಲೈ ವುಡ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ : ಬೆಂಕಿ ನಂದಿಸಲು ಹರಸಾಹಸ ಪಟ್ಟ ಅಗ್ನಿಶಾಮಕ ಸಿಬ್ಬಂದಿ..

ರಾಮನಗರ: ಫ್ಲೈ ವುಡ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿ, ಸುಮಾರು 7  ಕೋಟಿಗೂ ಅಧಿಕ ಮೌಲ್ಯದ ಫ್ಲೈವುಡ್ ಶೀಟ್‌ಗಳು ಸುಟ್ಟು ಕರಕಲಾಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಎಲಚಿಪಾಳ್ಯದ ಬಳಿ ಬುಧವಾರ ಮಧ್ಯರಾತ್ರಿ ನಡೆದಿದೆ.
 ಜನತಾ ಶಕೀಲ್ ಎಂಬುವರಿಗೆ ಸೇರಿದ ಫ್ಲೇ ವುಡ್ ಫ್ಯಾಕ್ಟರಿ ಇದಾಗಿದ್ದು, ಶಾರ್ಟ್‌ಸರ್ಕಿಟ್‌ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾಗಿದೆ.  ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಮಧ್ಯ ರಾತ್ರಿ ಯಿಂದಲೂ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.  ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.⁠⁠⁠⁠

Comments are closed.

Social Media Auto Publish Powered By : XYZScripts.com