ಇಂದಿನಿಂದ ಚಾಂಪಿಯನ್ಸ್ ಟ್ರೋಫಿ ಆರಂಭ : ಇಂಗ್ಲೆಂಡ್ – ಬಾಂಗ್ಲಾ ನಡುವೆ ಮೊದಲ ಪಂದ್ಯ

ಕ್ರಿಕೆಟ್ ನಲ್ಲಿ ಮಿನಿ ವಿಶ್ವಕಪ್ ಎಂದೇ ಹೆಸರಾದ, ಜಗತ್ತಿನ ಎಂಟು ಬಲಿಷ್ಠ ತಂಡಗಳ ನಡುವಿನ ಸೆಣಸಾಟ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಆರಂಭಗೊಳ್ಳಲಿದ್ದು, ಇಂಗ್ಲೆಂಡ್ ಆತಿಥ್ಯ ವಹಿಸಿದೆ. ಅಭ್ಯಾಸ ಪಂದ್ಯಗಳು ಮುಗಿದು ಗ್ರೂಪ್ ಹಂತದ ಪಂದ್ಯಗಳು ಶುರುವಾಗಲಿವೆ. ಮೊದಲ ಪಂದ್ಯ ಗ್ರೂಪ್ ಎ ತಂಡಗಳಾದ ಇಂಗ್ಲೆಂಡ್ ಹಾಗೂ ಬಾಂಗ್ಲಾ ನಡುವೆ ಇಂದು ಓವಲ್ ನಲ್ಲಿ ನಡೆಯಲಿದೆ. ಇದುವರೆಗೂ ಇಂಗ್ಲೆಂಡ್ ಒಂದು ಬಾರಿಯೂ ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿಲ್ಲ. ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತದ ಎದುರು ಸೋತಿದ್ದ ಇಂಗ್ಲೆಂಡ್, ಇಂದು ಬಾಂಗ್ಲಾ ಎದುರು ಗೆಲುವಿನೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಇಯಾನ್ ಮಾರ್ ನಾಯಕತ್ವದ ತಂಡದಲ್ಲಿ ಜೇಸನ್ ರಾಯ್, ಜಾಸ್ ಬಟ್ಲರ್, ಜೋ ರೂಟ್, ಅಲೆಕ್ಸ್‌ ಹೇಲ್ಸ್‌ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಇದ್ದಾರೆ.

ಲಿಯಾಮ್ ಪ್ಲಂಕೆಟ್, ಕ್ರಿಸ್ ವೋಕ್ಸ್‌, ಜೇಕ್ ಬಾಲ್ ಅವರು ವೇಗದ ಬೌಲಿಂಗ್ ವಿಭಾಗಕ್ಕೆ ಆಸರೆಯಾಗಬಲ್ಲರು. ಮೊಯಿನ್ ಅಲಿ ಮತ್ತು ಆದಿಲ್ ರಶೀದ್ಅವರು ಸ್ಪಿನ್ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ದಕ್ಷಿಣ ಆಫ್ರಿಕ ವಿರುದ್ಧದ ಸರಣಿ ಗೆಲುವು ಇಂಗ್ಲೆಂಡ್ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಓವಲ್ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಆಡಿರುವ 43 ಪಂದ್ಯಗಳಲ್ಲಿ 25 ರಲ್ಲಿ ಗೆಲುವು ಸಾಧಿಸಿದೆ. ಮುಷ್ರಫೆ ಮೊರ್ತಜಾ ನಾಯಕತ್ವದ ಬಾಂಗ್ಲಾದೇಶ ತಂಡ­ವನ್ನು ಇಂಗ್ಲೆಂಡ್ ದುರ್ಬಲ ಎಂದು ಪರಿಗಣಿಸುವಂತಿಲ್ಲ.

ಎಡಗೈ ವೇಗಿ ಮುಸ್ತಫಿಜುರ್ ರೆಹಮಾನ್, ರುಬೆಲ್ ಹುಸೇನ್ ಅವರು ಇಂಗ್ಲೆಂಡ್‌ ವೇಗದ ಬೌಲಿಂಗ್ ನೆರವು ನೀಡುವ ಪಿಚ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಆಲ್‌ರೌಂಡರ್ ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ ಶಬ್ಬೀರ್ ರೆಹಮಾನ್, ಮಷ್ರಫೆ ಮೊರ್ತಜಾ, ಮಹಮದುಲ್ಲಾ ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ತೋರಬೇಕಿದೆ. ಮಂಗಳವಾರ ಭಾರತದ ವಿರುದ್ಧ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ತಂಡವು ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಭಾರತದ ಎದುರು ಕೇವಲ 84 ರನ್‌ ಗಳಿಗೆ ಆಲ್ ಔಟ್ ಆಗಿ, 240 ರನ್‌ಗಳ ಅಂತರದ ಸೋಲನುಭವಿಸಿತ್ತು.

ತಂಡ ಗಳು ಹೀಗಿವೆ.

ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಅಲೆಕ್ಸ್‌ ಹೇಲ್ಸ್‌, ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್, ಜಾನಿ ಬೇರ್ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್‌, ಆದಿಲ್ ರಶೀದ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್, ಜೇಕ್ ಬಾಲ್, ಡೇವಿಡ್ ವಿಲ್ಲಿ.

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಬ್ಬೀರ್ ರೆಹಮಾನ್, ಮುಷ್ಫಿಕರ್ ರಹೀಮ್, ಮಹಮ­ದುಲ್ಲಾ ರಿಯಾ, ಶಕೀಬ್ ಅಲ್ ಹಸನ್, ಮೊಸಾ­ದೇಕ್ ಹುಸೇನ್, ಮೆಹದಿ ಹಸನ್, ರುಬೆಲ್ ಹುಸೇನ್, ಮುಸ್ತಫಿಜುರ್ ರೆಹಮಾನ್.

7 thoughts on “ಇಂದಿನಿಂದ ಚಾಂಪಿಯನ್ಸ್ ಟ್ರೋಫಿ ಆರಂಭ : ಇಂಗ್ಲೆಂಡ್ – ಬಾಂಗ್ಲಾ ನಡುವೆ ಮೊದಲ ಪಂದ್ಯ

 • October 18, 2017 at 12:02 PM
  Permalink

  Nice respond in return of this issue with firm arguments and telling everything regarding that.

 • October 18, 2017 at 12:56 PM
  Permalink

  I am no longer positive where you are getting your information,
  but good topic. I needs to spend a while learning more
  or figuring out more. Thanks for great info
  I used to be looking for this info for my mission.

 • October 18, 2017 at 4:50 PM
  Permalink

  Análise da Mara” pra mim é que mais me faz sentido.

 • October 20, 2017 at 8:05 PM
  Permalink

  Hey, I think your blog might be having browser compatibility issues.
  When I look at your website in Firefox, it looks fine but when opening in Internet Explorer,
  it has some overlapping. I just wanted to give you a quick heads up!

  Other then that, amazing blog!

 • October 20, 2017 at 9:29 PM
  Permalink

  Greetings! This is my first comment here so I just wanted to give a quick shout
  out and say I genuinely enjoy reading your blog posts.
  Can you recommend any other blogs/websites/forums that go over the same topics?

  Appreciate it!

 • October 20, 2017 at 11:06 PM
  Permalink

  You actually make it appear so easy with your presentation however
  I in finding this matter to be actually one thing which I feel I
  would never understand. It seems too complicated and very wide for me.
  I am taking a look ahead for your subsequent post, I’ll try to
  get the cling of it!

 • October 20, 2017 at 11:07 PM
  Permalink

  When I initially commented I appear to have clicked on the
  -Notify me when new comments are added- checkbox and from now on every time a comment is added I receive
  4 emails with the same comment. Perhaps there is
  an easy method you can remove me from that service?
  Appreciate it!

Comments are closed.

Social Media Auto Publish Powered By : XYZScripts.com