ಸಂಡೂರು ರಾಜ ಮನೆತನದ ಕೊನೆಯ ರಾಣಿ ವಿಧಿವಶ : ಬೆಂಗಳೂರಿನಲ್ಲಿ ಅಂತ್ಯಕ್ರಿಯೆ..

ಬಳ್ಳಾರಿ: ಬಳ್ಳಾರಿಯ ಸಂಡೂರು ರಾಜ ಮನೆತನದ ಕೊನೆಯ ಮಹಾರಾಣಿ ವಸುಂಧರ ಘೋರ್ಪಡೆ  ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ನಿಧನ ಹೊಂದಿದ್ದಾರೆ. ತಮ್ಮ ಮೂವರು ಗಂಡು ಮಕ್ಕಳು , ಓರ್ವ ಮಗಳನ್ನ ಹಾಗೂ ಅಪಾರ ಬಂಧುಗಳನ್ನ ಅಗಲಿದ ಘೋರ್ಪಡೆ ಅವರಿಗೆ 81 ವರ್ಷ ವಯಸ್ಸಾಗಿತ್ತು.
ಬರೋಡ ರಾಜ ಮನೆತನದ ಇವರು 1953 ರಲ್ಲಿ ರಾಜ ಮಾಜಿ ಸಚಿವ ದಿವಂಗತ  ಎಂ.ವೈ. ಘೋರ್ಪಡೆ ಅವರನ್ನು  ವಿವಾಹವಾಗಿದ್ದರು.  ಬುಧವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಅವರ ಸಂಬಂಧಿ ವೆಂಕಟರಾವ್ ಘೋರ್ಪಡೆ ತಿಳಿಸಿದ್ದಾರೆ. ⁠⁠⁠⁠

Comments are closed.

Social Media Auto Publish Powered By : XYZScripts.com