ಶಿರಸಿಯಲ್ಲಿ ನಟ ಯಶ್‌ರ ನೆಜ ಜಲ ಪ್ರೀತಿ : ಸಭೆಯ ಮುಂದೆ ನೂಕು ನುಗ್ಗಲು : ಲಘು ಲಾಠಿ ಪ್ರಹಾರ

ಉತ್ತರಕನ್ನಡ: ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ಮಂಗಳವಾರ ಸಂಜೆ ಆಗಮಿಸಿದ್ದು, ಈ ಸ್ಟಾರ್‌ ದಂಪತಿಗಳನ್ನ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.  ಯಶ್‌, ರಾಧಿಕಾ ದಂಪತಿಗಳನ್ನ ನೋಡುವುದಕ್ಕಾಗಿ ಬಂದಿದ ಜನರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ, ಅವರನ್ನ ನಿಯಂತ್ರಿಸಲು ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರಿಗೆ ಅಸಾಧ್ಯವಾಗಿ ಪರಿಣಮಿಸಿತ್ತು.  ಶಿರಸಿಯಲ್ಲಿ ಮಂಗಳವಾರ ಜಿವಜಲ ಕಾರ್ಯಪಡೆಯಿಂದ ಆಯೋಜನಾ ಗೊಂಡಿದ್ದ ಜಲ ಅರಿವು ಅಭಿವೃದ್ಧಿ ಕಾರ್ಯಕ್ರಮ ದಲ್ಲಿ ಯಶ್‌ , ರಾಧಿಕಾ ದಂಪತಿಗಳು ಪಾಲ್ಗೊಂಡು, ಕರೆ ಅಭಿವೃದ್ಧಿ ಕಾಮಗಾರಿಯನ್ನ ವೀಕ್ಷಿಸಿದರು.⁠
ನಂತರ ಮಾರಿಕಾಂಬಾ ಕಾಲೇಜು ಆವಾರದಲ್ಲಿ ಯಶ್‌ ಮತ್ತು ರಾಧಿಕಾ ಲೇಟ್ ನೈಟ್ ಸಭೆಯಲ್ಲಿ ಭಾಗಿಯಾದರು. ಈ ಸಭೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿಯಾಗಿದ್ದರು.  ಅಲ್ಲಿಗೆ ದಾಗುಂಡಿ ಇಟ್ಟಿದ್ದ ಯುವಕರು ಯುವತಿಯರಿಂದ ವೇದಿಕೆಯ ಮುಂದೆ ನೂಕು ನುಗ್ಗಲು ಉಂಟಾಗಿತ್ತು. ಸಹಸ್ರ ಅಭಿಮಾನಿಗಳ ಮುಂದೆ ಮಾತನಾಡಿದ ಯಶ್‌, ” ಸಾಮಾಜಿಕ ಕೆಲಸ ಮಾಡಲು ರಾಜಕೀಯ ಮಹಾತ್ವಾಕಾಂಕ್ಷೆ ಇರ ಬೇಕು ಅಂತಾರೆ,  ಆದರೆ ನನಗೆ ಅಂತಹ ಯಾವ ಮಹಾತ್ವಾಕಾಂಕ್ಷೆಯೂ ಇಲ್ಲ.  ನೆಲ ಜಲದ ಮೇಲಿನ ಪ್ರೀತಿಯಿಂದ ಪಾಲ್ಗೊಳ್ಳುತ್ತಿದ್ದೇನೆ.”” ಎಂದರು.

Comments are closed.

Social Media Auto Publish Powered By : XYZScripts.com