ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ : ಕಣ್ಣು ಕಾದ ರೆಪ್ಪೆಗಳು ….!

ಸುತ್ತ ಹರಡಿದ್ದ ಹಾಗೂ ಹರಡುತ್ತಿದ್ದ ಕತೆಗಳು ಹಾಗೂ ದಂತಕತೆಗಳು, ಗಾಸಿಪ್ ಗಳು ಅವರನ್ನು ವಿಚಲಿತಗೊಳಿಸುವುದಕ್ಕೆ ಕಾರಣವಾಗಿದ್ದವು. ಸ್ಟಾರ್ ಪತ್ನಿಯಾಗಿರುವ ಕಾರಣಕ್ಕೆ ಇಂತಹ ಕತೆಗಳನ್ನು ಕೇಳುವ ಅನಿವಾರ್ಯ ಕರ್ಮವೂ ಎದುರಿಗಿತ್ತು. ಕತೆಗಳಲ್ಲಿ ಎಷ್ಟು ಸತ್ಯಾಂಶಗಳಿದ್ದವು ? ಎಂಬುದನ್ನು ಪರಿಶೀಲಿಸುವುದು ಸಾಧ್ಯವಿರಲಿಲ್ಲ. ಹಾಗೆಯೇ ಅಂತಹ ಕತೆಗಳ ಬೆನ್ನುಹತ್ತಿ ಹೋಗಲಿಲ್ಲ. ಹಾಗೆಯೇ ಆ ಕಾರಣಕ್ಕಾಗಿ ಮನೆಯಲ್ಲಿ ವಾಗ್ಯುದ್ಧ ನಡೆಯುವದಕ್ಕೆ ಅವಕಾಶ ನೀಡಲಿಲ್ಲ. ತಕ್ಷಣದ ಆದ್ಯತೆಯಾಗಿ ಯಾವುದೇ ಕ್ಷಣದಲ್ಲಿಯಾದರೂ ಛಿದ್ರವಾಗಬಹುದಾಗಿದ್ದ ಕುಟುಂಬವನ್ನು ಸಂರಕ್ಷಿಸಿಕೊಳ್ಳುವ ಸವಾಲು ಅವರಿಗಿತ್ತು. ಕ್ರಿಯಾಶೀಲರಾದ ಅವರು ಮನೆಯೊಡೆಯ ಹಾಗೂ ಮನೆಗಳೆರಡನ್ನೂ ಉಳಿಸಿದರು. ಕೇವಲ ಉಳಿಸಿದರು ಮಾತ್ರವಲ್ಲ, ನೋಡುವವರು ಬೆರಗಾಗಿ ಕಣ್ಬಿಟ್ಟು ನೋಡುವಂತೆ ಬೆಳೆಸಿದರು.

ಹೌದು. ಹಾಗೆ ತನ್ನ ಮನೆ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನ ಆರಂಭಿಸಿ ಅದನ್ನು ಕೇವಲ ತನ್ನ ಕುಟುಂಬದ ಯಶಸ್ಸಿಗೆ ಮಾತ್ರ ಸೀಮಿತವಾಗದೇ ಇರುವ ಹಾಗೆ ನೋಡಿಕೊಂಡವರು ಮಂಗಳವಾರ ಕೊನೆಯುಸಿರು ಎಳೆದ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್. ಗಾಸಿಪ್ ಗಳು ಮದ್ರಾಸಿನ ಸ್ಟುಡಿಯೋಗಳ ಸುತ್ತ ಹರಿದಾಡುತ್ತಿರುವಾಗ ಪತಿ ಕೈಬಿಟ್ಟು ಹೋಗಿ ಬಿಡುವ ಆತಂಕ ಎದುರಾಗಿತ್ತು. ತಾವೇ ಫೀಲ್ಡಿಗಿಳಿದರು. ವರನಟನ ಖಾಸಗಿ ಬದುಕು ಕಟ್ಟುವುದರ ಜೊತೆಯಲ್ಲಿಯೇ ವೃತ್ತಿ ಬದುಕನ್ನೂ ರೂಪಿಸುವುದಕ್ಕೆ ಕಾರಣರಾದರು. ಅದಕ್ಕಾಗಿ ಪಾರ್ವತಮ್ಮ ಅವರಿಗೆ ಕೈ ಜೋಡಿಸಿದವರು ರಾಜ್ ಸಹೋದರ ವರದರಾಜ್. ಹಾಗೆಯೇ ಪಾರ್ವತಮ್ಮ ಅವರಿಗೆ ಬೆಂಗಾವಲಾಗಿ ನಿಂತವರು ಅವರ ಮೂವರು ಸಹೋದರರು.

ತಮ್ಮ ನಟನಾ ಚಾತುರ್ಯದಿಂದ ಮುತ್ತಣ್ಣ ರಾಜ್ ನಾಗಿ ಬೆಳೆದು ನಿಂತಿದ್ದರು. ಆದರೆ, ವ್ಯಾವಹಾರಿಕ ಲೋಕದಿಂದ ದೂರವೇ ಇದ್ದ ರಾಜ್ ವೃತ್ತಿ ಬದುಕು ರೂಪುಗೊಳ್ಳುವುದಕ್ಕೆ ಪಾರ್ವತಮ್ಮ ಮತ್ತವರ ಸಮೂಹ ಟೊಂಕ ಕಟ್ಟಿ ನಿಂತಿತು. ‘ಬಂಗಾರದ ಮನುಷ್ಯ’ದಂತಹ ಸೂಪರ್ ಹಿಟ್ ಚಿತ್ರವೂ ಸೇರಿದಂತೆ ರಾಜ್ ಕೈ ಸೇರುತ್ತಿದ್ದ ಸಂಭಾವನೆಯ ಸ್ವರೂಪ ಗಣನೀಯವಾದದ್ದೇನಾಗಿರಲಿಲ್ಲ. ರಾಜ್ ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಸಾಕುವುದರಿಂದ, ರಕ್ಷಿಸುವುದರಿಂದ, ಬೆಳೆಸುವುದರಿಂದ ದೊರೆಯಬಹುದಾದ ಲಾಭದ ಅಂದಾಜು ಆರಂಭದ ದಿನಗಳಲ್ಲಿ ಪಾರ್ವತಮ್ಮ ಅವರಿಗೆ ಇರಲಿಲ್ಲ. ಆದರೆ, ಪಾರ್ವತಮ್ಮ ಅವರ ವೃತ್ತಿಬದುಕು ಕೂಡ ರಾಜ್ ಅವರ ನಟನಾ ವೃತ್ತಿ ಬದುಕಿನ ಜೊತೆ ಜೊತೆಯಲ್ಲಿಯೇ ಬೆಳೆಯುತ್ತ ಹೋಯಿತು. ತೆರೆಯ ಮೇಲೆ ಕಾಣಿಸಿಕೊಂಡ ಮತ್ತು ಕಾಣಿಸಿಕೊಳ್ಳುವ ಕಾರಣಕ್ಕಾಗಿ ಜನಪ್ರಿಯತೆ ರಾಜ್ ಅವರ ಹೆಗಲೇರಿತು. ಒಮ್ಮೆಯೂ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳದ ಪಾರ್ವತಮ್ಮ ಸಾಧನೆ ರಾಜ್ ರ ವೃತ್ತಿಬದುಕಿಗಿಂತ ಹೆಚ್ಚು ಮಹತ್ವದ್ದು. ಹಾಗೆ ನೋಡಿದರೆ ರಾಜ್ ಅವರ ವೃತ್ತಿಬದುಕು ಯಶಸ್ವಿಯಾಗಿ ರೂಪುಗೊಂಡದ್ದೇ ಪಾರ್ವತಮ್ಮ ಅವರಿಂದಾಗಿ. ರಾಜ್ ಅವರನ್ನು ಹತೋಟಿಯಲ್ಲಿಟ್ಟುಕೊಂಡ ಪಾರ್ವತಮ್ಮ ಅವರಿಗೆ ಉತ್ತಮ ಕಥೆ ಆಯ್ಕೆ ಮಾಡಿಕೊಡುವ ವರದರಾಜ್, ಚಿತ್ರಕಥೆ-ಸಂಭಾಷಣೆಯ ನೆರವು ನೀಡುತ್ತಿದ್ದ ಚಿ.ಉದಯಶಂಕರ್, ಮಾರುಕಟ್ಟೆ-ವಿತರಣೆಯಲ್ಲಿ ನೆರವು ನೀಡುತ್ತಿದ್ದ ಚಿನ್ನೇಗೌಡರು.. ಹೀಗೆ ಪಾರ್ವತಮ್ಮ ಅವರ ತಂಡವು ರಾಜ್ ಚಿತ್ರ ಬದುಕಿಗೆ ಬೆಂಗಾವಲಾಗಿ ನಿಂತಿತು.

ಪಾರ್ವತಮ್ಮ ಹಾಗೂ ಅವರ ತಂಡದ ಬಲ-ಬೆಂಬಲ ಇಲ್ಲದಿದ್ದರೆ ರಾಜ್ ಈಗ ಬೆಳೆದಿರುವ ಹಾಗೆ ಬೆಳೆಯುವುದು ಸಾಧ್ಯವೇ ಇರಲಿಲ್ಲ. ಅದಕ್ಕೆ ರಾಜ್ ಸಮಕಾಲೀನರಾಗಿದ್ದ ಹಾಗೂ ಅವರಷ್ಟೇ ಪ್ರತಿಭಾವಂತರಾಗಿದ್ದ ನಾಯಕ ನಟರು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣದೇ ಇರುವುದನ್ನು ಗಮನಿಸಬಹುದು. ಕಂಡ ಯಶಸ್ಸನ್ನು ಉಳಿಸಿಕೊಳ್ಳುವುದೂ ದೊಡ್ಡ ನಟರಿಗೆ ಅದಕ್ಕಿಂತ ದೊಡ್ಡ ಸವಾಲಾಗಿತ್ತು. ಪಾರ್ವತಮ್ಮ ಅವರು ಕೇವಲ ರಾಜ್ ಅವರನ್ನು ಮಾತ್ರವಲ್ಲ ಇಡೀ ಕನ್ನಡ ಚಿತ್ರರಂಗವನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಕನ್ನಡ ಚಿತ್ರರಂಗಕ್ಕೆ ರಾಜ್ ಮನೆಯೇ ‘ದೊಡ್ಡಮನೆ’ ಆಯಿತು. ಪಾರ್ವತಮ್ಮ ಅವರನ್ನು ಹೊರತು ಪಡಿಸಿದ ರಾಜ್ ಅವರ ವೃತ್ತಿಬದುಕು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಡೀ ಚಿತ್ರರಂಗದ ನಡೆಯನ್ನು ಹಾಗೂ ಅದರ ಸ್ವರೂಪವೇ ಬದಲಾಗುವಂತೆ ನೋಡಿಕೊಂಡವರು ಪಾರ್ವತಮ್ಮ. ರೆಪ್ಪೆಯಾಗಿದ್ದು ಕೊಂಡು ಕಣ್ಣನ್ನು ರಕ್ಷಣೆ ಮಾಡಿದವರು ಪಾರ್ವತಮ್ಮ. ನಿರ್ಮಾಪಕಿಯಾಗಿ ಪಾರ್ವತಮ್ಮ ಕೊಡುಗೆ ಅಪಾರವಾದದ್ದು. ರಾಜ್ ರ ಬದುಕು ರೂಪಿಸಿದ್ದೇ ಅವರ ಬಹುದೊಡ್ಡ ಅವರಿಗಾದ ಲಾಭ. ಬಾಕಿ ಉಳಿದದ್ದೆಲ್ಲ ಪಾರ್ವತಮ್ಮ ಅವರಿಗೆ ಸಿಕ್ಕ ಬೋನಸ್.

9 thoughts on “ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ : ಕಣ್ಣು ಕಾದ ರೆಪ್ಪೆಗಳು ….!

 • October 18, 2017 at 12:39 PM
  Permalink

  Ahaa, its good conversation about this article here at this website, I have read all that, so at this time me also commenting at this place.|

 • October 18, 2017 at 2:24 PM
  Permalink

  I am sure this piece of writing has touched all the internet visitors, its really really nice piece of writing on building up new weblog.|

 • October 18, 2017 at 4:11 PM
  Permalink

  Can you tell us more about this? I’d care to find out more details.|

 • October 20, 2017 at 6:54 PM
  Permalink

  Howdy! I’m at work browsing your blog from my new iphone! Just wanted to say I love reading through your blog and look forward to all your posts! Keep up the fantastic work!|

 • October 20, 2017 at 10:11 PM
  Permalink

  This is the right web site for anybody who would like to find out about this topic.
  You understand so much its almost tough to argue with you (not that
  I really would want to…HaHa). You certainly put a
  new spin on a subject which has been written about for years.
  Great stuff, just great!

 • October 21, 2017 at 2:25 AM
  Permalink

  I read this paragraph fully regarding the comparison of most up-to-date and preceding technologies, it’s amazing article.

 • October 24, 2017 at 2:13 PM
  Permalink

  Very great post. I simply stumbled upon your weblog and wanted to mention that I have
  really enjoyed surfing around your weblog posts. After all I will be subscribing for your feed and
  I hope you write once more very soon!

 • October 24, 2017 at 4:05 PM
  Permalink

  I’ve been browsing online more than three hours today, yet I never found any interesting article like yours.

  It is pretty worth enough for me. In my view, if all site owners and bloggers made
  good content as you did, the web will be a lot more useful than ever before.

Comments are closed.

Social Media Auto Publish Powered By : XYZScripts.com