ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ವಿಧಿವಶ

ಬಹುಅಂಗ ವೈಫಲ್ಯದಿಂದ ಬಳಲುತ್ತಿದ್ದ ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್​ (77) ಅವರು ಬುಧವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಅವರು ಹಲವು ದಿನಗಳಿಂದ ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ವರ್ಷಗಳಿಂದ ಪಾರ್ವತಮ್ಮ ಅವರು ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಕ್ಯಾನ್ಸರ್​ ಲಿವರ್​ಗೂ ಹರಡಿತ್ತು. ಜತೆಗೆ ಶುಗರ್​ ಮತ್ತು ಬಿಪಿ ಹೆಚ್ಚಳವಾಗಿತ್ತು. ಅವರು ಜಾಂಡೀಸ್​ನಿಂದಲೂ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಪಾರ್ವತಮ್ಮ ರಾಜಕುಮಾರ್ ತೀವೃ ಅನಾರೋಗ್ಯದಿಂದ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಬುಧವಾರ ಬೆಳಗಿನ ಜಾವ ಪಾರ್ವತಮ್ಮ ರಾಜ್ ಕುಮಾರ್ ಅವರು ಮೃತಪಟ್ಟಿದ್ದಾರೆ.

1939ರ ರಲ್ಲಿ ಸಾಲಿಗ್ರಾಮದಲ್ಲಿ ಜನಿಸಿದ್ದ ಪಾರ್ವತಮ್ಮ ಅವರು 1953ರಲ್ಲಿ ರಾಜ್​ಕುಮಾರ್​ ಜತೆ ಸಪ್ತಪದಿ ತುಳಿದಿದ್ದರು. ಪಾರ್ವತಮ್ಮ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಿರ್ಮಾಪಕರಾಗಿ ಅವರು ಹಲವು ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರ ರಂಗಕ್ಕೆ ನೀಡಿದ್ದಾರೆ.

2 thoughts on “ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ವಿಧಿವಶ

Comments are closed.

Social Media Auto Publish Powered By : XYZScripts.com