ಬಾಬ್ರಿ ಮಸೀದಿ ಧ್ವಂಸ ಪ್ರಕರಣ : ಅಡ್ವಾಣಿ, ಜೋಷಿ ಹಾಗೂ ಉಮಾಭಾರತಿಗೆ ಜಾಮೀನು ..

ಲಕ್ನೋ: ಬಿಜೆಪಿ ಹಿರಿಯ ಮುಖಂಡರಾದ ಲಾಲಕೃಷ್ಣ ಅಡ್ವಾಣಿ, ಮುರಳಿಮನೋಹರ ಜೋಷಿ ಹಾಗೂ ಉಮಾಭಾರತಿ ಸೇರಿದಂತೆ ಆರು ಜನರ ವಿರುದ್ಧ 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ‘ಪಿತೂರಿ’ ನಡೆಸಿದ ಆರೋಪ ಪಟ್ಟಿ ಸಲ್ಲಿಸಲಾಯಿತು.

ಹಾಗೆಯೇ ಖುದ್ದಾಗಿ ಹಾಜರಾದ ಮೂವರು ಹಿರಿಯ ನಾಯಕರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು. 1992ರ ಡಿಸೆಂಬರ್ 6ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಅದು ದೇಶದಾದ್ಯಂತ 2000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ತೀವ್ರ ಸ್ವರೂಪದ ಕೋಮುಗಲಭೆಗೆ ಕಾರಣವಾಗಿತ್ತು.

ಬಾಬರಿ ಮಸೀದಿ ಧ್ವಂಸ ಪ್ರಕರಣದ ಪಿತೂರಿ ಆರೋಪವನ್ನು ಕೈ ಬಿಡುವಂತೆ ಕೋರಿ ಅಡ್ವಾಣಿ (89), ಜೋಷಿ (83) ಹಾಗೂ ಭಾರತಿ (58) ಸಲ್ಲಿಸಿದ್ದ ಮನವಿಯನ್ನು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಲಯವು ತಳ್ಳಿಹಾಕಿತು.

ಈ ಮೂವರು ಹಿರಿಯ ನಾಯಕರಲ್ಲದೆ ಬಿಜೆಪಿಯ ವಿನಯ್ ಕಟಿಯಾರ್ (62), ವಿಶ್ವ ಹಿಂದು ಪರಿಷತ್ತಿನ ವಿಷ್ಣು ಹರಿ ದಾಲ್ಮಿಯಾ ಹಾಗೂ ಹಿಂದುತ್ವದ ಪ್ರಮುಖ ನಾಯಕಿ ಸಾಧ್ವಿ ರಿತಂಬರಿ (58) ಅವರ ವಿರುದ್ಧ ಕೂಡ ಭಾರತೀಯ ದಂಡ ಸಂಹಿತೆಯ (ಐಪಿಸಿ) 120ನೇ ಸೆಕ್ಷನ್ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಯಿತು.

One thought on “ಬಾಬ್ರಿ ಮಸೀದಿ ಧ್ವಂಸ ಪ್ರಕರಣ : ಅಡ್ವಾಣಿ, ಜೋಷಿ ಹಾಗೂ ಉಮಾಭಾರತಿಗೆ ಜಾಮೀನು ..

  • October 16, 2017 at 4:48 PM
    Permalink

    I cling on to listening to the news bulletin speak about getting boundless online grant applications so I have been looking around for the finest site to get one. Could you advise me please, where could i acquire some?

Comments are closed.

Social Media Auto Publish Powered By : XYZScripts.com