ಕುರುಕ್ಷೇತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪಾತ್ರವೇನು ಗೊತ್ತಾ ? …

ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಇಂದು ೫೬ನೇ ಹುಟ್ಟುಹಬ್ಬದ ಸಂಭ್ರಮ. ಎಂದಿನಂತೆ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದ್ರೊಂದಿಗೆ ಇದೇ ಮೊದಲು ಬಾರಿಗೆ ತಾಯಿಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.

ಆದ್ರೆ ಜನುಮದಿನದಂದೇ ಸ್ಟಾರ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನ ಹೊರ ಹಾಕಿದ್ರು. ಇದು ಬಹುಶ: ಅವ್ರ ಅಭಿಮಾನಿಗಳಿಗೆ ಸಿಕ್ಕಾ-ಪಟ್ಟೆ ಖುಷಿಕೊಡುವುದು ನೂರಕ್ಕೆ ನೂರು ಸತ್ಯ.

ಅಸಲಿಗೆ ವಿಷ್ಯ ಏನಪ್ಪಾ ಅಂದ್ರೆ, ನಿರ್ಮಾಪಕ ಮುನಿರತ್ನ ನಿರ್ಮಿಸ್ತಿರೋ ಕುರುಕ್ಷೇತ್ರ ಚಿತ್ರದಲ್ಲಿ ಕ್ರೇಜಿ ಸ್ಟಾರ್ ಬಣ್ಣ ಹಚ್ಚುತ್ತಿದ್ದಾರೆ. ಇಲ್ಲಿವರೆಗೂ ಕ್ರೇಜಿ ಪಾತ್ರಗಳ ಮೂಲಕ ತಮ್ಮ ಪ್ಯಾನ್ಸ್ ಅನ್ನ ರಂಜಿಸಿದ್ದ ರವಿಚಂದ್ರನ್ ಫಸ್ಟ್ ಟೈಮ್ ಪೌರಾಣಿಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದ್ಹಾಗೆ ನಾಗಣ್ಣ ನಿರ್ದೇಶಿಸ್ತಿರೋ ಕುರುಕ್ಷೇತ್ರ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಗೆ ಶ್ರೀಕೃಷ್ಣನ ಪಾತ್ರ ಸಿಕ್ಕಿದೆ. ದುರ್ಯೋದನನಾಗಿ ನಟಿಸುತ್ತಿರೋ ದರ್ಶನ್ ಅವ್ರೊಂದಿಗೆ ಕ್ರೇಜಿಸ್ಟಾರ್ ಶ್ರೀಕೃಷ್ಣನ ಅವತಾರ ಹೇಗಿರುತ್ತೆ ಅನ್ನೋ ಕುತೂಹಲವಂತೂ ಇದ್ದೇ ಇದೆ.

One thought on “ಕುರುಕ್ಷೇತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪಾತ್ರವೇನು ಗೊತ್ತಾ ? …

Comments are closed.

Social Media Auto Publish Powered By : XYZScripts.com