ಯುಗಪುರುಷ ಚಿತ್ರದ ನಾಯಕನ ಮೇಲೆ ಹಲ್ಲೆಗೆ ಯತ್ನ : ನಟನ ಕಾರ್‌ ಗಾಜು ಪುಡಿ ಪುಡಿ

ರಾಮನಗರ: ಚಿತ್ರ ನಟ ಅರ್ಜುನ್‌ ದೇವ್‌ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದು, ಅವರ ಕಾರಿನ ಗಾಜು ಪುಡಿ ಪುಡಿ ಮಾಡಿರುವ ಘಟನೆ ರಾಮನಗರದ ಬೆ.ಮೈ.ಹೆದ್ಜಾರಿಯ ಮುಖ್ಯ ರಸ್ತೆಯಲ್ಲಿ ಮಂಗಳವಾರ ಹಾಡುಹಗಲೇ ನಡೆದಿದೆ.
 
 ಯುಗಪುರಷ ಚಿತ್ರದ ನಾಯಕ ಅರ್ಜನ್ ದೇವ್ ಕಾರಿನ‌ ಮೇಲೆ ಹಲ್ಲೆ ನಡೆದಿದ್ದು,  ರಾಮನಗರ ಜಿಲ್ಲಾಕೋರ್ಟ್ ಆವರಣದ ಮುಂದೆ ಇರುವ ಎಸ್.ಬಿ.ಎಂ ಬ್ಯಾಂಕ್ ಎದುರು ಗಲಾಟೆ ನಡೆದಿದೆ.  ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ನಟನ ಕಾರಿನ ಗಾಜು ಪುಡಿಪುಡಿ ಮಾಡಿದ್ದಾರೆ.  ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com