ದಲಿತರ ಮನೆಯಲ್ಲಿ ಊಟ ಮಾಡೋದು ರಾಜಕಾರಣ ಅನ್ನೋರು ಅಯೋಗ್ಯರು, ಮೂರ್ಖರು : ಯಡಿಯೂರಪ್ಪ

ಕೊಪ್ಪಳ: ಯಡಿಯೂರಪ್ಪ ದಲಿತರ ಮನೆಯಲ್ಲಿ ಊಟ ಮಾಡುವುದು ರಾಜಕಾರಣ ಎಂದು ಹೇಳುವವರು ಅಯೋಗ್ಯರು, ಮೂರ್ಖರು…! ಎಂದು ಟೀಕಿಸಿದವರನ್ನೇ ಬಿ.ಎಸ್ ಯಡಿಯೂರಪ್ಪ ಛೀಮಾರಿ ಹಾಕಿದ್ದಾರೆ.  ಜನಸಂಪರ್ಕ ಅಭಿಯಾನಕ್ಕಾಗಿ ಸೋಮವಾರ ಕೊಪ್ಪಳಕ್ಕೆ ಆಗಮಿಸಿ ನಂತರ ಮಾತನಾಡಿದ ಅವರು,   ಯಡಿಯೂರಪ್ಪನ ಈ ಪ್ರವಾಸದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಬೇಕು ಎಂಬುದು  ಪಕ್ಷದ ಮುಖಂಡನಾದ ನನ್ನ ನಿರ್ಧಾರ.  ಇದನ್ನ ಟೀಕೆ ಟಿಪ್ಪಣೆ ಮಾಡುವವರಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಶೋಷಣೆ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಿದ ಯಡಿಯೂರಪ್ಪ, ದತರ ಮೇಲೆ ಹಲ್ಲೆ ನಡೆದ್ರೆ ಈ ಸಿದ್ದರಾಯಮ್ಯ ಕಾರಣ. ಹಿರೇಬಗನಾಳ ಗ್ರಾಮದಲ್ಲಿ ಅಸ್ಪ್ರಶ್ಯತೆ ವಿಷಯ ಗೊತ್ತಾಗಿ ನಾನು ಅಲ್ಲಿಯ ಎಲ್ಲ ಸಮಾಜದ ಜರನ್ನೂ ಕರೆದುಕೊಂಡು ಹೋಗಿ ದಲಿತರ ಕೇರಿಯಲ್ಲಿಯೇ ಉಪಹಾರ ಮಾಡಿ ಬಂದಿದ್ದೇನೆ.  ನನ್ನ ಮನೆಯಲ್ಲಿ ಅಡುಗೆ ಮಾಡುವುದೂ ಕೂಡ ದಲಿತ ಸಮಾಜದವರು.  ಯಾವುದೇ ಊರಲ್ಲಿ ದಲಿತರಿಗೆ ಬಹಿಷ್ಕಾರ ಹಾಕುವುದನ್ನ ನಾನು ಖಂಡಿಸುತ್ತೇನೆ. ಕೊಪ್ಪಳದಲ್ಲಿ ನಡೆದಿರುವ ಈ ಘಟನೆ ಸಂಬಂಧ ನಾನು ಡಿ.ಸಿಗಳೊಂದಿಗೆ ಮಾತನಾಡುತ್ತೇನೆ.  ಇದಕ್ಕೆ ನಮ್ಮ ರಾಜ್ಯದಲ್ಲಿ ಅವಕಾಶವಿಲ್ಲ. ಒಂದೆ ತಾಯಿಯ ಮಕ್ಕಳಂತೆ ನಾವೆಲ್ಲ ಬಾಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Comments are closed.