ಹುಬ್ಬಳ್ಳಿ -ಧಾರವಾಡ ಜನತೆಯ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳರ ಬಂಧನ : ಜನತೆ ನಿರಾಳ…

ಹುಬ್ಬಳ್ಳಿ : ಹಲವು ದಿನಗಳಿಂದ ಹುಬ್ಬಳ್ಳಿ ಧಾರವಾಡ ಜನತೆಯ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳರನ್ನ ಪತ್ತೆಹಚ್ಚಿ ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ದಾರಿಹೋಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಕೊರಳಲ್ಲಿದ್ದ ಮಾಂಗಲ್ಯ ಸರಗಳನ್ನ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಖದೀಮರು ಇದೀಗ ಸೆರೆಯಾಗಿದ್ದಾರೆ.


ಹೌದು ಕಳೆದ ಹಲವು ತಿಂಗಳುಗಳಿಂದ ವಾಣಿಜ್ಯ ನಗರಿ ಹುಬ್ಬಳ್ಳಿ ಧಾರವಾಡದ ಸಾರ್ವಜನಿಕ ಕಂಗೆಣ್ಣಿಗೆ ಗುರಿಯಾಗಿದ್ದ ಕುಖ್ಯಾತ ಸರಗಳ್ಳರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಾರ್ವಜನಿಕ ವಲಯದಲ್ಲಿ ಒಂಟಿಯಾಗಿ  ಓಡಾಡುವ ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದ ಈ ಖದೀಮರು ಮಹಿಳೆಯರ ಕೊರಳಲ್ಲಿದ್ದ ಮಾಂಗಲ್ಯ ಸರಗಳನ್ನ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದರು. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಸರಗಳ್ಳತನ ಪ್ರಕರಣಗಳಿಂದ ಪೊಲೀಸರು ಆತಂಕಕ್ಕೊಳಗಾಗಿದ್ದರು. ಇದರಿಂದ ಬೇಸತ್ತು ಕಳ್ಳತನ ಪತ್ತೆಗೆ ತಂಡ ರಚಿಸಿದ ಅವಳಿನಗರ ಪೊಲೀಸರು ಕೊನೆಗೂ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.


ದಾವಣಗೆರೆ ಮೂಲದ ರಾಘು, ಹುಬ್ಬಳ್ಳಿ ಮೂಲದ ಶಿವರಾಜ್ ಎಲಿಗಾರ್ ಹಾಗೂ ಗದಗ ಜಿಲ್ಲೆಯ ಚೇತನ ದಾಯಪುಲ್ಲೆ ಅವರನ್ನ ಬಂಧಿಸಲಾಗಿದೆ. ಬಂಧಿತರಿಂದ ೭ ಲಕ್ಷ ಮೌಲ್ಯದ ೨೬೦ ಗ್ರಾಂ ಚಿನ್ನಾಭರಣ, ಮೂರು ಬೈಕ್ ಗಳನ್ನ ಜಪ್ತಿ ಮಾಡಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಕುಖ್ಯಾತ ಸರಗಳ್ಳರು ೨೦ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕದ್ದ ಬೈಕ್ ಗಳನ್ನ ಸರಗಳ್ಳತನದ ಕೃತ್ಯಕ್ಕೆ ಬಳಸುತ್ತಿದ್ದರು ಎನ್ನಲಾಗಿದೆ‌. ರಾಜ್ಯದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕ್ಷಣಮಾತ್ರದಲ್ಲಿ ಸರ ಕಳವು ಮಾಡಿ ಪರಾರಿಯಾಗುತ್ತಿದ್ದ ಈ ಕುಖ್ಯಾತ ಖದೀಮರನ್ನು ಹಿಡಿಯುವಲ್ಲಿ ನ ಪೊಲೀಸ್ ಆಯುಕ್ತ ಪಾಂಡು ರಾಣೆ ನೇತೃತ್ವದಲ್ಲಿ ತಂಡ ಯಶಸ್ವಿಯಾಗಿದೆ. ವಿಶ್ವನಾಥ ಕೋಳಿವಾಡ ಸೇರಿದಂತೆ ಇನ್ನೂ ಮೂರು ಜನರ ತಂಡ ಸರಗಳ್ಳತನದ ಕೃತ್ಯದಲ್ಲಿ ಭಾಗಿಯಾಗಿದ್ದು ಅವರ ಬಂಧನಕ್ಕೂ ಬಲೆ‌ಬೀಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಸರಗಳ್ಳರು ತಮ್ಮ ಕೈ ಚಳಕ ತೋರಿಸಿ ಪರಾರಿಯಾಗುತ್ತಿದ್ದರು. ಕಳ್ಳರು ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೆ ಉತ್ತರ ಬೆಂಗಳೂರು, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ. ಇವರ ಈ ಕೃತ್ಯ ನಗರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.‌ ಇದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೇಶವಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದ್ರೆ, ಈ ಸರಗಳ್ಳರ ಕಿಂಗ್ ಪಿನ್ ವಿಶ್ವನಾಥ ಪರಾರಿಯಾಗಿದ್ದು, ಅವನ ಬಂಧನಕ್ಕೂ ಶೋಧ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಸರಗಳ್ಳರ ಹಾವಳಿಯಿಂದ ಮನೆಯಿಂದ ಹೊರ ಬೀಳಲು ಹೆದರುತ್ತಿದ್ದ ಮಹಿಳೆಯರು ಈಗ ಕೊಂಚ ನಿರಾಳರಾಗಿದ್ದಾರೆ.

5 thoughts on “ಹುಬ್ಬಳ್ಳಿ -ಧಾರವಾಡ ಜನತೆಯ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳರ ಬಂಧನ : ಜನತೆ ನಿರಾಳ…

 • October 18, 2017 at 12:06 PM
  Permalink

  This is a topic that is near to my heart… Many thanks! Exactly where are your contact details though?|

 • October 18, 2017 at 1:53 PM
  Permalink

  Hello this is kind of of off topic but I was wondering if blogs use WYSIWYG editors or if you have to manually code with HTML. I’m starting a blog soon but have no coding skills so I wanted to get advice from someone with experience. Any help would be greatly appreciated!|

 • October 18, 2017 at 3:35 PM
  Permalink

  This is the perfect site for everyone who wishes to understand this topic. You realize so much its almost tough to argue with you (not that I actually will need to…HaHa). You certainly put a fresh spin on a topic which has been discussed for many years. Great stuff, just excellent!|

 • October 18, 2017 at 4:25 PM
  Permalink

  Amazing! Its genuinely awesome article, I have got much clear idea about from this article.|

 • October 20, 2017 at 8:19 PM
  Permalink

  I have read so many articles or reviews on the topic of the blogger lovers but this paragraph is really a nice article, keep it up.|

Comments are closed.