ಅಭಿಮಾನಿಯ ಮದುವೆಗೆ ಹಾಜರಾಗಿ ಹಾರೈಸಿದ ಕುಮಾರಸ್ವಾಮಿ

ಬಾಗಲಕೋಟ : ಆತ ಅಪ್ಪಟ ಕುಮಾರಸ್ವಾಮಿ ಅಭಿಮಾನಿ, ಎಚ್ ಡಿಕೆ ಬಂದರೆ ಮಾತ್ರ ಮದುವೆಯಾಗುತ್ತೇನೆ ಎಂಬ ಹಂಬಲ. ಈತನ ಅಭಿಮಾನ ಕಂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಮದುವೆಗೆ ಹಾಜರಾಗಿ ತನ್ನ ಶಿಷ್ಯನಿಗೆ ಶುಭ ಕೋರಿದರು. ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಶ್ರೀಶೈಲ ಲಮಾಣಿ ಬೆಂಗಳೂರಿನಲ್ಲಿ ಆರ್ಕೆಸ್ಟ್ರಾ ಒಂದರಲ್ಲಿ ಕಲಾವಿದರು. ಕುಮಾರಸ್ವಾಮಿಯವರನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ವಿಕಲಚೇತನರಾದ ಶ್ರೀಶೈಲ ಅವರಿಗೆ ಶಾರದಾ ಅವರೊಂದಿಗೆ ಮದುವೆ ನಿಶ್ಚಯವಾಯಿತು. ಕುಮಾರಸ್ವಾಮಿ ಉಪಸ್ಥಿತಿ ಯಲ್ಲಿ ಮದುವೆಯಾಗಬೇಕು ಎಂದು ಶ್ರೀಶೈಲ ಎಚ್ ಡಿಕೆ ಯವರನ್ನು ಭೇಟಿಯಾಗಿ ಮನದಾಳದ ಮಾತನ್ನು ತೋಡಿಕೊಂಡರು. ಕಳೆದ ತಿಂಗಳು ಕುಮಾರಸ್ವಾಮಿ ಬರಬೇಕಾಗಿತ್ತಾದರೂ ಬರಲು ಸಾಧ್ಯವಾಗಲಿಲ್ಲ. ಆಗ ಮದುವೆ ಮುಹೂರ್ತ ವನ್ನು ಶ್ರೀಶೈಲ ಮುಂದೂಡಿದರು. ಮೇ ೩೦ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದ ಕುಮಾರಸ್ವಾಮಿ ದಿನಾಂಕವೊಂದನ್ನು ನೀಡಿದರು.
ಮಂಗಳವಾರ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದ ಎದುರು ಶ್ರೀಶೈಲ ಮದುವೆ ನೆರವೇರಿತು. ಕುಮಾರಸ್ವಾಮಿ ಬಂದ ನಂತರವಷ್ಟೇ ಶ್ರೀಶೈಲ ವಧುವಿಗೆ ತಾಳಿ ಕಟ್ಟಿದರು. ನೂತನ ದಂಪತಿಗೆ ಕುಮಾರಸ್ವಾಮಿ ಶುಭ ಕೋರಿದರು.

Comments are closed.

Social Media Auto Publish Powered By : XYZScripts.com