ಮೋದಿಯವರಿಗೆ ಅಧಿಕೃತ ವಿರೋಧ ಪಕ್ಷವೇ ಇಲ್ಲ, ಇದು ಈ ದೇಶದ ದುರ್ದೈವ : ದೇವೇಗೌಡ

ಹಾಸನ: ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕೃತ ವಿರೋಧ ಪಕ್ಷವೇ ಇಲ್ಲ. ಇದು ನಮ್ಮ ದೇಶದ ದುರ್ದೈವ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಹಾಸನದ ಹೊಳೆನರಸೀಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮರ್ಥ ವಿರೋಧಪಕ್ಷಕ್ಕಾಗಿ ಸೋನಿಯಾ ಗಾಂಧಿ ನಾಯಕತ್ವದಲ್ಲಿ ರೀಜನಲ್‌ ಪಾರ್ಟಿಗಳನ್ನ ಒಂದುಗೂಡಿಸಲು ಪ್ರಯತ್ನ ನಡೆಯುತ್ತಿದೆ. ನನಗೂ ಕರೆ ಕೊಟ್ಟಿದ್ದಾರೆ, ಅದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಗೊತ್ತಿಲ್ಲ ಎಂದು ಹೆಚ್‌.ಡಿ ದೇವೇಗೌಡ ಹೇಳಿದ್ದಾರೆ.
 ದೇಶ ಪ್ರೇಮ ಎಲ್ಲರಿಗೂ ಇದೆ. ಬರಿ ಒಬ್ಬರಿಗೆ ಮಾತ್ರ ದೇಶಪ್ರೇಮವಿದೆ ಎಂಬುದನ್ನ ಬಿಂಬಿಸಬಾರದು ಎಂದು ಮಾಧ್ಯಮದವರಿಗೂ ಹೆಚ್‌.ಡಿ.ಡಿ ಟಾಂಗ್‌ ನೀಡಿದರು. ನಂತರ ಮಾತನಾಡಿ, ಮೋದಿ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರದ ಸಾಧನೆಯ ಬಗ್ಗೆ ದೇಶದ ಒಟ್ಟೂ 900 ನಗರಗಳಲ್ಲಿ ಈ ದೇಶದ ದ್ರಷ್ಯ ಮಾದ್ಯಮಗಳು ಹಿಂದೆಂದೂ ಕಂಡರಿಯದ ವಿಜ್ರಂಭಣೆಯಿಂದ ರಾಷ್ರ್ರೀಯ ಮಟ್ಟದಲ್ಲಿ ಮೋದಿಸಾಧನೆಯನ್ನ ಜನತೆ ಮುಂದೆ ಬಿತ್ತರಿಸಿದ್ದಾರೆ. ಅದರ ಬಗ್ಗೆ ನನಗೆ ಬೇಸರ ಇಲ್ಲ. ಆದರೆ,  ಗೋಹತ್ಯೆ ನಿಷೇಧ ಕಾಯಿದೆಯನ್ನ ತಂದಿರುವ ಮೋದಿಯವರ ರಾಜ್ಯವಾದ ಗುಜಾರಾತ್‌ ಗೋ ಮಾಂಸವನ್ನ ಹೊರ ದೇಶಗಳಿಗೆ ಸಪ್ಲೈ ಮಾಡುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ಇಂಥ ವಿಷಯಗಳೂ ಕೂಡ ಚರ್ಚೆಯಾಗಬೇಕು ಎಂದರು.

Comments are closed.

Social Media Auto Publish Powered By : XYZScripts.com