French Open : ರಾಫೆಲ್‍ ನಡಾಲ್‍ , ನೋವಾಕ್‍ ಜೋಕೋವಿಚ್‍ 2ನೇ ಸುತ್ತಿಗೆ ಪ್ರವೇಶ…

10ನೇ ಫ್ರೆಂಚ್‍ ಓಪನ್‍ ಟೆನಿಸ್‍ ಟೂರ್ನಿಯ ಮೇಲೆ ಕಣ‍್ಣಿಟ್ಟಿರುವ ಸ್ಪೇನ್‍ನ ರಾಫೆಲ್‍ ನಡಾಲ್‍ ಅವರು ಸೋಮವಾರ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ.
ಪ್ಯಾರೀಸ್‍ನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಡಾಲ್‍ ಸೊಗಸಾದ ಆಟವನ್ನು ಆಡಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಆಡಿದ ಮೊದಲ ಗ್ರ್ಯಾನ್‍ ಸ್ಲ್ಯಾಮ್‍ ಟೂರ್ನಿಯಲ್ಲಿ ನಡಾಲ್‍ ಅದ್ಭುತ ಆಟ ಆಡಿದರು. ನಡಾಲ್‍ 6-1, 6-4, 6-1 ಸೆಟ್‍ ಗಳಿಂದ ಬೆನೈಟ್ ಪೇರ್ ವಿರುದ್ಧ ಮೂರು ನೇರ ಸೆಟ್‍ ಗಳಲ್ಲಿ ಗೆಲುವು ದಾಖಲಿಸಿದರು.
ಹಾಲಿ ಚಾಂಪಿಯನ್‍ ಸರ್ಬಿಯಾದ ನೋವಾಕ್‍ ಜೋಕೋವಿಚ್‍ ಅವರು ಮೊದಲ ಸೆಟ್‍ ನಲ್ಲಿ ಸುಲಭ ಜಯ ಸಾಧಿಸಿದರು. ಜೋಕೋ 6-3, 6-4, 6-2 ಸೆಟ್‍ ಗಳಿಂದ ಸ್ಪೇನ್‍ ನ ಮಾರ್ಸೆಲ್‍ ವಿರುದ್ಧ ಗೆಲುವಿನ ನಗೆ ಬೀರಿದರು.


ಇನ್ನು ವನಿತೆಯರ ಸಿಂಗಲ್ಸ್‍ ನಲ್ಲಿ ಸ್ಪೇನ್ ನ ಗಾರ್ಬಿನ್‍ ಮುಗುರುಜಾ 6-2, 6-4 ಸೆಟ್‍ ಗಳಿಂದ ಫ್ರಾನ್ಸಿಸ್ಕಾ ವಿರುದ್ಧ, ಡೆನ್ಮಾರ್ಕನ ಕರೋಲಿನಾ ವೋಜ್ನಿಯಾಕೆ 6-4, 3-6, 6-2 ಸೆಟ್‍ ಗಳಿಂದ ಆಸ್ಟ್ರೇಲಿಯಾದ ಜೆಮೈ ಪೋರ್ಲಿಸ್‍ ವಿರುದ್ಧ ಜಯ ಸಾಧಿಸಿ ಮುನ್ನಡೆದರು.

Comments are closed.