ತಮಿಳು-ತೆಲುಗಿನಲ್ಲೂ ಬಿಗ್ ಬಾಸ್ ಶೋ..ಯಾರು ಹೋಸ್ಟ್ ಮಾಡ್ತಾರೆ ಗೊತ್ತಾ..?

ಹಿಂದಿ ಕಿರುತೆರೆಯಲ್ಲಿ ಶುರುವಾಗಿ ಸಕ್ಸಸ್ ಕಂಡ ಬಿಗ್ ಬಾಸ್ ರಿಯಾಲಿಟಿ ಶೋ ಕನ್ನಡದಲ್ಲೂ ಯಶಸ್ಸು ಕಾಣ್ತಿದೆ. ಕಿಚ್ಚ ಸುದೀಪ್ ಹೋಸ್ಟ್ ಮಾಡ್ತಿರೋ ಕನ್ನಡದ ಬಿಗ್ ಬಾಸ್ ಶೋ ಕನ್ನಡ ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ಒದಗಿಸುತ್ತಿದೆ. ಹಿಂದಿ ಮತ್ತು ಕನ್ನಡದಲ್ಲಿ ಸಕ್ಸಸ್ ಕಂಡಿರೋ ಈ ಶೋ ಶೀಘ್ರದಲ್ಲೇ ತೆಲುಗು ಮತ್ತು ತಮಿಳಿನಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ತಮಿಳು ಬಿಗ್ ಬಾಸ್ ರಿಯಾಲಿಟಿ ಶೋ ಪ್ರೋಮೊ ರಿಲೀಸ್ ಆಗಿದೆ. ತಮಿಳಿನಲ್ಲಿ ಸಕಲ ಕಲಾವಲ್ಲಭ ಕಮಲ್ ಹಾಸನ್ ಈ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ತಿದ್ದಾರೆ.

ಟಾಲಿವುಡ್ ಸೂಪರ್ ಸ್ಟಾರ್ಸ್ ಒಬ್ಬೊಬ್ಬರಾಗಿ ಕಿರುತೆರೆ ಕಡೆ ಮುಖ ಮಾಡ್ತಿದ್ದಾರೆ. ನಾಗಾರ್ಜುನ ಮೀಲೊ ಎವರು ಕೋಟಿಶ್ವರುಡು ಕಾರ್ಯಕ್ರಮವನ್ನ ಹೋಸ್ಟ್ ಮಾಡಿ ಗೆದ್ರು. ಸದ್ಯ ಮೆಗಾಸ್ಟಾರ್ ಚಿರಂಜೀವಿ ಈ ಕಾರ್ಯಕ್ರಮವನ್ನ ಮುಂದುವರೆಸಿದ್ದಾರೆ. ವಿಶೇಷ ಅಂದ್ರೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಯಂಗ್ ಟೈಗರ್ ಎನ್‍ಟಿಆರ್ ಕಿರುತೆರೆಗೆ ಬರ್ತಿದ್ದಾರೆ. ತೆಲುಗು ಬಿಗ್ ಬಾಸ್ ಶೋ ಹೋಸ್ಟ್ ಆಗಿ ಅವ್ರು ಆಯ್ಕೆಯಾಗಿದ್ದಾರೆ.

ತಮ್ಮ ಅದ್ಭುತ ಅಭಿನಯದಿಂದ ತೆಲುಗು ಸಿನಿರಸಿಕರ ಮನಗೆದ್ದಿರೋ ತಾರಕ್, ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಗೆ ಅವರು 7ಕೋಟಿ ಸಂಭಾವನೆ ಪಡೆಯಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ನಾಗಾರ್ಜುನ ಮತ್ತು ಚಿರಂಜೀವಿ ಮೀಲೊ ಎವರು ಕೋಟೀಶ್ವರಡು ಕಾರ್ಯಕ್ರಮಕ್ಕೆ ತಲಾ 4 ಕೋಟಿ ರೆಮ್ಯೂನರೇಷನ್ ಪಡೆದುಕೊಂಡಿದ್ದಾರೆ ಅನ್ನಲಾಗ್ತಿದೆ. ಅದೇ ನಿಜವಾದ್ರೆ ಅವರಿಬ್ಬರನ್ನ ಯಂಗ್ ಟೈಗರ್ ಮೀರಿಸಿದ್ದಾರೆ ಅನ್ಬೋದು. ಶೀಘ್ರದಲ್ಲೇ ತೆಲುಗು ಬಿಗ್ ಬಾಸ್ ಶೋ ಮಾಟಿವಿಯಲ್ಲಿ ಪ್ರಾರಂಭವಾಗಲಿದೆ.

Comments are closed.

Social Media Auto Publish Powered By : XYZScripts.com