ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ….

ಬೆಂಗಳೂರು : ಡಿಹೈಡ್ರೇಷನ್ ಹಾಗೂ ಕಾಲಿನ ಊತದ ಸಮಸ್ಯೆಯಿಂದ ಹಿರಿಯ ನಟ ದೊಡ್ಡಣ್ಣ ಅವ್ರನ್ನ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಲೋ ಬಿಪಿ ಹಾಗೂ ಕೊಂಚ ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ಐಸಿಯೂ ನಲ್ಲಿ ಇರಿಸಲಾಗಿತ್ತು. ಕಳೆದ ಶುಕ್ರವಾರದಿಂದ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೊಡ್ಡಣ್ಣ ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗ್ತಿದೆ.

ಕಾಲು ಸೋಂಕು ತಗುಲಿ ರಕ್ತದಲ್ಲಿ ಹರಡಿ, ಸೆಪ್ಟಿಸಿಮಿ ರೋಗ ಹರಡಿತ್ತು. ಇದರಿಂದ ರಕ್ತದೊತ್ತಡ, ಶುಗರ್ , ಕಿಡ್ನಿ, ಸೇರಿದಂತೆ ಉಸಿರಾಟಕ್ಕೂ ತೊಂದರೆಯಾಗಿತ್ತು. ಈಗ ಎಲ್ಲಾ ಸಹಜವಾಗಿದ್ದು ದೊಡ್ಡಣ್ಣ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.  ಕಳೆದ 15 ವರ್ಷಗಳಿಂದ ದೊಡ್ಡಣ್ಣ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈ ಎಸ್ ಸುರೇಶ್ ಈಗಲೂ ದೊಡ್ಡಣ್ಣ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಬಿಪಿ, ಶುಗರ್ ಸಾಮಾನ್ಯವಾಗಿದೆ.  ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಡಿಸ್ಚಾರ್ಜ್ ಮಾಡಲಾಗಿದೆ.

Comments are closed.

Social Media Auto Publish Powered By : XYZScripts.com