ಶಾಸಕರ ಹಗರಣಗಳ , ಹೈಕಮಾಂಡ್‌ ಅವಕಾಶ ನೀಡದಿದ್ದಲ್ಲಿ ಮಾಧ್ಯಮಗಳಿಗೆ ನೀಡುತ್ತೇನೆ : ಕರಿಯಣ್ಣ ಸಂಗಟಿ

ಕೊಪ್ಪಳ : ನನ್ನ ಬಳಿ ರಾಜ್ಯ ಸರ್ಕಾರದ ಶಾಸಕರ ಹಗರಣಗಳ ದಾಖಲೆಗಳು ಇವೆ.  ಸೋನಿಯಾಗಾಂಧಿ, ರಾಹುಲ್ ಗಾಂಧಿ ನಮ್ಮ ಭೇಟಿಕಗೆ ಅವಕಾಶ ನೀಡದಿದ್ದರೆ ಅವುಗಳನ್ನು ಮಾದ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಕರಿಯಣ್ಣ ಸಂಗಟಿ ಹೇಳಿಕೆ ನೀಡಿದ್ದಾರೆ. ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಮುಖಂಡರು ಸೋನಿಯಾಗಾಂಧಿ, ರಾಹುಲ್ ಗಾಂಧಿ, ನಾನು ಹಾಗೂ ಎಚ್ ಆರ್ ಶ್ರೀನಾಥ ಹೈಕಮಾಂಡ್‌ ಭೇಟಿಯಾಗಲು ಸಮಯ ಕೇಳಿದ್ದೇವೆ. ಸಮಯ ನೀಡಿದ ತಕ್ಷಣವೇ ಅವರನ್ನು ಭೇಟಿಯಾಗುತ್ತೇವೆ,  ಕೊಪ್ಪಳ ಜಿಲ್ಲೆಯ ಪಕ್ಷದ ನಾಲ್ಕು ಜನ ಶಾಸಕರ ವಿವಿಧ ಭಾಗ್ಯಗಳನ್ನು (ಹಗರಣಗಳು)  ಅವರಿಗೆ ಹೇಳುತ್ತೇವೆ ಎಂದಿದ್ದಾರೆ.
ನಾನು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ರು ಎಐಸಿಸಿ ವೀಕ್ಷಕ ಡಾ ಸಾಕೆ ಶೈಲಜನಾಥ್ ಮುಂದೆ ನಮ್ಮ ನೋವನ್ನು ತೋಡಿಕೊಂಡಿದ್ದೆವು. ಅಂದು ಅವರು ನಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು, ಆದರೆ  ನನ್ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ. ಉಚ್ಛಾಟನೆ ನನಗೆ ಸಂಬಂಧ ಇಲ್ಲ ಎಂದು ಕರಿಯಣ್ಣ ಸಂಗಟಿ ಹೇಳಿದ್ದಾರೆ.

Comments are closed.