ಜನಸಾಮಾನ್ಯರ ಜೇಬು ಸುಡಲಿದೆ ಅಕ್ಕಿ: ಮುಂದಿನ ತಿಂಗಳಿಂದ ಕೆಜಿಗೆ 10ರೂ ಹೆಚ್ಚಲಿದೆ…

ಬೆಂಗಳೂರು: ಪ್ರತಿತಿಂಗಳು ಖರೀದಿಸುವುದಕ್ಕಿಂತ ಈ ತಿಂಗಳು ಸ್ವಲ್ಪ ಜಾಸ್ತಿನೇ ಅಕ್ಕಿ ಕೊಂಡುಕೊಂಡುಬಿಡಿ… ದಿನ ತಿಂಗಳು ಪ್ರತೀ ಕೆಜಿಗೆ ಅಕ್ಕಿಯ ಬೆಲೆ 10 ರೂಪಾಯಿ ಹೆಚ್ಚಾಗಲಿದೆ.  ಚಿನ್ನ, ಪೆಟ್ರೋಲ್, ತೊಗರಿಬೇಳೆ, ಈರುಳ್ಳಿ ಇವೆಲ್ಲಾ ಆಗಾಗ ಬೆಲೆಯೇರಿಕೆ ಮಾಮೂಲಿಯಾಗಿದೆ ಈಗ ಅಕ್ಕಿಯ ಸರದಿ.

 

ಬೆಲೆಯೇರಿಕೆಯ ಬಿಸಿ ನೇರವಾಗಿ ಅನ್ನಕ್ಕೇತಟ್ಟಲಿದೆ. ಮುಂದಿನ ತಿಂಗಳಿಂತ ಪ್ರತೀ ಕೆಜಿ ಅಕ್ಕಿಗೆ ಕನಿಷ್ಟ 8ರಿಂದ 10 ರೂಪಾಯಿಗಳಷ್ಟು ದರ ಏರಿಕೆಯಾಗಲಿದೆ. ಇದಕ್ಕೆ  ರಾಜ್ಯ ಸರ್ಕಾರದ ಅವೈಜ್ಷಾನಿಕ ವಹಿವಾಟುನೀತಿಯೇ ಕಾರಣ ಎಂಬುದು  ವ್ಯಾಪಾರಿಗಳ ದೂರು.

ಕರ್ನಾಟಕದಲ್ಲಿ ಬೆಳೆದ ಭತ್ತವನ್ನು ಯಾವ ರಾಜ್ಯದವರು ಬೇಕಾದ್ರು ಹರಾಜಿನಲ್ಲಿ ಕೊಳ್ಳುವ ಅವಕಾಶವಿದೆ. ಆದ್ರೆ ನೆರೆಯ ಆಂಧ್ರ, ತಮಿಳುನಾಡಿನಲ್ಲಿ ತಮ್ಮ ರಾಜ್ಯಕ್ಕೆಸಾಕಾಗಿ ನಂತರ ಉಳಿದ ಭತ್ತವನ್ನು ಮಾತ್ರ ಮಾರಾಟ ಮಾಡುವ ನಿಯಮವಿದೆ. ರಾಜ್ಯದಲ್ಲಿ ಈ ನಿಯಮ ಇಲ್ಲದೇ ಇರುವುದರಿಂದ ಕರ್ನಾಟಕದ ರೈತರು ಬೆಳೆದ ಭತ್ತದಬಹುಪಾಲನ್ನು ತಮಿಳುನಾಡಿನ ವರ್ತಕರು ಖರೀದಿಸಿದ್ದಾರೆ. ಇದೆಲ್ಲದಿಂದಾಗಿ ಅಕ್ಕಿಯ ಅಭಾವ ಉಂಟಾಗಲಿದೆ. ಇದು ಬೆಲೆಯೇರಿಕೆಗೂ ಕಾರಣವಾಗಲಿದೆ. ಒಟ್ಟಾರೆಯಾಗಿ ಇದರಿಂದಾಗಿ ಸಾಮಾನ್ಯ ಗ್ರಾಹಕರು ಸಂಕಷ್ಟಕ್ಕೆ ಸಿಲುಕಬೇಕಾಗಿದೆ.

 

ಒಟ್ನಲ್ಲಿ ತಿನ್ನುವ ಅನ್ನಕ್ಕೂ ಬೆಲೆಯೇರಿಕೆ ಬಿಸಿ ತಟ್ಟೋದು ಗ್ಯಾರಂಟಿ ಎನ್ನುವಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಜಿಗೆ 10 ರೂಪಾಯಿ ನಿಜಕ್ಕೂ ಸಾಮಾನ್ಯ ಜನ್ರಿಗೆದೊಡ್ಡ ಹೊರೆಯೇ ಆಗಲಿದೆ. ಈ ಬೆಲೆಯೇರಿಕೆ ಬಿಸಿ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳು ನಿರೀಕ್ಷೆ ಜನ ಸಾಮಾನ್ಯರದು.

Comments are closed.

Social Media Auto Publish Powered By : XYZScripts.com