ನಾಡಿಗೆ ಬಂದವು ಕಾಡಿನ ರುಚಿಕರ ಫಲಗಳು, ದುಬಾರಿಯಾದರೂ ಸಿಹಿ ಹುಳಿ…

ಬೆಂಗಳೂರು: ಕಾಡಿನ ಹಣ್ಣುಗಳೆಲ್ಲಾ ನಾಡಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರಕ್ಕೆ ವಲಸೆ ಬಂದಿವೆ.  ಅಷ್ಟೇ ಅಲ್ಲ ಸಿಲಿಕಾನ್ ಸಿಟಿ ಜನ ಕೂಡ ಈ ಕಾಡಿನ ಹಣ್ಣುಗಳನ್ನು ಇಷ್ಟಪಡುತ್ತಿದ್ದಾರೆ.ಇವುಗಳ ಬೆಲೆ ಮಾತ್ರ ಜನ ಹೌಹಾರುವಷ್ಟು ದುಬಾರಿಯಾಗಿವೆ. ಪನ್ನೇರಳೆ, ಅಂಜೂರ, ಅತ್ತಿ, ಜಾಂಬು ನೇರಳೆ, ಜಾಮೂನ್ ಹಣ್ಣು…ಇವೆಲ್ಲಾ ಹಳ್ಳಿಗಳಲ್ಲಿ, ಕಾಡುಗಳಲ್ಲಿ ಸುಲಭವಾಗಿ ಸಿಗುವ ಹಣ್ಣುಗಳು… ಈಗ ನಗರಗಳಿಗೆ ಕಾಲಿಟ್ಟುಅಲ್ಲಿನ ಜನರ ಬಾಯಿರುಚಿ ತಣಿಸುತ್ತಿವೆ. ಈ ಹಣ್ಣುಗಳೆಲ್ಲಾ ಮಾರ್ಕೆಟ್ಟಿನಲ್ಲಿ, ಮಾಲ್ ಗಳಲ್ಲಿ ಸದಾ ಸಿಗೋದಿಲ್ಲ. ಈ ಸೀಸನ್ ನಲ್ಲಿ ಮಾತ್ರ ಸಿಗೋದ್ರಿಂದ ಇವು ಕೇವಲಒಂದೆರಡು ತಿಂಗಳಿನ ಅತಿಥಿಗಳು. ಹಾಗಾಗಿ ಜನ ಇಷ್ಟಪಟ್ಟು ಇವುಗಳ ರುಚಿ ಸವಿಯುತ್ತಿದ್ದಾರೆ. ಬೇರೆ ಹಣ್ಣುಗಳಿಗೆ ಹೋಲಿಸಿದ್ರೆ ಈ ಕಾಡುಹಣ್ಣುಗಳ ಬೆಲೆ ತುಸು ಹೆಚ್ಚೇ ಇದೆ. ಕಾಲು ಕೆಜಿಗೆ 80-

Read more

ಜನಸಾಮಾನ್ಯರ ಜೇಬು ಸುಡಲಿದೆ ಅಕ್ಕಿ: ಮುಂದಿನ ತಿಂಗಳಿಂದ ಕೆಜಿಗೆ 10ರೂ ಹೆಚ್ಚಲಿದೆ…

ಬೆಂಗಳೂರು: ಪ್ರತಿತಿಂಗಳು ಖರೀದಿಸುವುದಕ್ಕಿಂತ ಈ ತಿಂಗಳು ಸ್ವಲ್ಪ ಜಾಸ್ತಿನೇ ಅಕ್ಕಿ ಕೊಂಡುಕೊಂಡುಬಿಡಿ… ದಿನ ತಿಂಗಳು ಪ್ರತೀ ಕೆಜಿಗೆ ಅಕ್ಕಿಯ ಬೆಲೆ 10 ರೂಪಾಯಿ ಹೆಚ್ಚಾಗಲಿದೆ.  ಚಿನ್ನ, ಪೆಟ್ರೋಲ್, ತೊಗರಿಬೇಳೆ, ಈರುಳ್ಳಿ ಇವೆಲ್ಲಾ ಆಗಾಗ ಬೆಲೆಯೇರಿಕೆ ಮಾಮೂಲಿಯಾಗಿದೆ ಈಗ ಅಕ್ಕಿಯ ಸರದಿ.   ಬೆಲೆಯೇರಿಕೆಯ ಬಿಸಿ ನೇರವಾಗಿ ಅನ್ನಕ್ಕೇತಟ್ಟಲಿದೆ. ಮುಂದಿನ ತಿಂಗಳಿಂತ ಪ್ರತೀ ಕೆಜಿ ಅಕ್ಕಿಗೆ ಕನಿಷ್ಟ 8ರಿಂದ 10 ರೂಪಾಯಿಗಳಷ್ಟು ದರ ಏರಿಕೆಯಾಗಲಿದೆ. ಇದಕ್ಕೆ  ರಾಜ್ಯ ಸರ್ಕಾರದ ಅವೈಜ್ಷಾನಿಕ ವಹಿವಾಟುನೀತಿಯೇ ಕಾರಣ ಎಂಬುದು  ವ್ಯಾಪಾರಿಗಳ ದೂರು. ಕರ್ನಾಟಕದಲ್ಲಿ ಬೆಳೆದ ಭತ್ತವನ್ನು ಯಾವ ರಾಜ್ಯದವರು ಬೇಕಾದ್ರು ಹರಾಜಿನಲ್ಲಿ ಕೊಳ್ಳುವ ಅವಕಾಶವಿದೆ. ಆದ್ರೆ ನೆರೆಯ ಆಂಧ್ರ, ತಮಿಳುನಾಡಿನಲ್ಲಿ ತಮ್ಮ ರಾಜ್ಯಕ್ಕೆಸಾಕಾಗಿ ನಂತರ ಉಳಿದ ಭತ್ತವನ್ನು ಮಾತ್ರ ಮಾರಾಟ ಮಾಡುವ ನಿಯಮವಿದೆ. ರಾಜ್ಯದಲ್ಲಿ ಈ ನಿಯಮ ಇಲ್ಲದೇ ಇರುವುದರಿಂದ ಕರ್ನಾಟಕದ ರೈತರು ಬೆಳೆದ ಭತ್ತದಬಹುಪಾಲನ್ನು ತಮಿಳುನಾಡಿನ ವರ್ತಕರು ಖರೀದಿಸಿದ್ದಾರೆ. ಇದೆಲ್ಲದಿಂದಾಗಿ ಅಕ್ಕಿಯ ಅಭಾವ ಉಂಟಾಗಲಿದೆ. ಇದು ಬೆಲೆಯೇರಿಕೆಗೂ ಕಾರಣವಾಗಲಿದೆ. ಒಟ್ಟಾರೆಯಾಗಿ ಇದರಿಂದಾಗಿ ಸಾಮಾನ್ಯ ಗ್ರಾಹಕರು

Read more