ಅಭಿವೃದ್ಧಿ ಕಾರ್ಯಗಳ ನೆಪವಿಟ್ಟುಕೊಂಡು ಮರ ಕಡಿಯಬೇಡಿ..! ಪರಿಸರ ಸಂರಕ್ಷಣಾ ಸಮಿತಿ ಪ್ರತಿಭಟನೆ

ಮೈಸೂರು: ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಅನಗತ್ಯವಾಗಿ ರಸ್ತೆ ಬದಿಯ ಮರಗಳನ್ನು ಕಡಿದು ಉರುಳಿಸಲಾಗುತ್ತಿದೆ ಎಂದು ಆರೋಪಿಸಿ ಪರಿಸರ ಸಂರಕ್ಷಣೆ ಸಮಿತಿ ಸಂಘಟನೆ ಕಾರ್ಯಕರ್ತರು ಶುಕ್ರವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
 
ಮೈಸೂರಿನ ನ್ಯಾಯಾಲಯದ ಬಲಿಯಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ಮರಗಳಿಗಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ರಸ್ತೆ ಅಗಲೀಕರಣ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಅನಗತ್ಯವಾಗಿ ರಸ್ತೆ ಬದಿಯ ಮರಗಳನ್ನು ಕಡಿಯುತ್ತಿರುವ ಸರ್ಕಾರ ಕ್ರಮಕ್ಕೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ. ⁠⁠⁠⁠

3 thoughts on “ಅಭಿವೃದ್ಧಿ ಕಾರ್ಯಗಳ ನೆಪವಿಟ್ಟುಕೊಂಡು ಮರ ಕಡಿಯಬೇಡಿ..! ಪರಿಸರ ಸಂರಕ್ಷಣಾ ಸಮಿತಿ ಪ್ರತಿಭಟನೆ

Comments are closed.

Social Media Auto Publish Powered By : XYZScripts.com