HDK ಕಾಲಿಟ್ಟರೆ ಮಳೆಯಾಗುತ್ತದೆ, ಸವಲತ್ತು ನೀಡಿ ಬರಪ್ರದೇಶಕ್ಕೆ ಕಳುಹಿಸಿಕೊಡಿ : ಸಿ.ಎಂ ಗೆ ಪತ್ರ

ಮಂಡ್ಯ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಲಿಟ್ಟಲ್ಲೆಲ್ಲ ಮಳೆಯಾಗುತ್ತಿದೆ,  ಕುಮಾರಸ್ವಾಮಿಗೆ ಸರ್ಕಾರಿ ಸವಲತ್ತು ನೀಡಿ ಬರಪ್ರದೇಶಕ್ಕೆ ಕಳುಹಿಸಿ ಎಂದು ಓರ್ವ ಬಿ.ಜೆ.ಪಿ ಕಾರ್ಯಕರ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಕ್ರವಾರ ಪತ್ರ ಬರೆದಿದ್ದಾನೆ.  ಗುರುವಾರ ಹೆಚ್‌.ಡಿ ಕುಮಾರಸ್ವಾಮಿ ಆದಿ ಚುಂಚನಗಿರಿಗೆ ಭೇಟಿ ಕೊಟ್ಟಿದ್ದು, ಅಲ್ಲಿ ಭಾಷಣದ ವೇಳೆ, ತಾನು ಹೋದಕಡೆಯಲ್ಲೆಲ್ಲ ಮಳೆಯಾಗುತ್ತಿದೆ ಎಂಬ ಹೇಳಿಕೆಯನ್ನ ನೀಡಿದ್ದರು.
ಈ ವಿಚಾರವಾಗಿ ಮಂಡ್ಯದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಪಾತಾಳಗಂಗೆ ಯೋಜನೆ ಹಾಗೂ ಮೋಡ ಬಿತ್ತನೆ ಯೋಜನೆಯ ಹಣವನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ನೀಡಿ,  ರಾಜ್ಯದಲ್ಲಿ ಬರ ಇರುವ ಕಡೆಗಳಿಗೆ ಸರ್ಕಾರದ ಸವಲತ್ತು ನೀಡಿ ಕುಮಾರಸ್ವಾಮಿಯವ್ರನ್ನ ಕಳುಹಿಸಿ ಭಾಷಣ ಮಾಡಿಸಿ. ಇದರಿಂದ ಬರ ಪ್ರದೇಶದಲ್ಲಿ ಮಳೆಯಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, ಕುಮಾರಸ್ವಾಮಿಯವರ ಅದೃಷ್ಟದಿಂದ ಬರ ಇರುವ ಕಡೆಗಳಲ್ಲಿ ಮಳೆಯಾಗಲಿ, ಆ ಮೂಲಕ ಸರ್ಕಾರದ ಬೊಕ್ಕಸ ತುಂಬಲಿ ಎಂದು ಹಾಸ್ಯವಾಗಿ ಹಾರೈಸಿದ್ದಾರೆ. ⁠⁠⁠⁠

Comments are closed.

Social Media Auto Publish Powered By : XYZScripts.com