ಕುಮಾರಸ್ವಾಮಿ ಗಣಿ ಹಗರಣದ ಬಗ್ಗೆ ಹಿಂದೆಯೇ ಪುಸ್ತಕ ಪ್ರಕಟಿಸಿದ್ದೆ : ಬಿ.ಎಸ್‌ ಯಡಿಯೂರಪ್ಪ..

ಹಾವೇರಿ:  ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ನಡೆದ ಗಣಿ ಹಗರಣದ ಕುರಿತು ಆಗಲೇ ನಾನು ಪುಸ್ತಕ ಪ್ರಕಟಿಸಿ ಜನರಿಗೆ ತಿಳಿಸಿದ್ದೆ ಎಂದು ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಹಾವೇರಿಯಲ್ಲಿ ಈ ಬಗ್ಗೆ ಮಾತನಾಡಿದ ಬಿಎಸ್‌ವೈ, ಸುಪ್ರೀಂಕೋರ್ಟ್ ಆದೇಶದ ಮೇಲೆ ಈಗ ತನಿಖೆ ಪ್ರಾರಂಭವಾಗಿದೆ.
ಯಾರ್ಯಾರ ಕಾಲದಲ್ಲಿ ಗಣಿ ಹಗರಣ ಏನೇನಾಗಿದೆ ಅಂತ ತಾವು ಪ್ರಕಟಿಸಿದ ಪುಸ್ತಕದಲ್ಲಿ ವಿವರವಾಗಿ ದಾಖಲಾಗಿದೆ, ಇದರಲ್ಲಿ ಕುಮಾರಸ್ವಾಮಿ ಪಾತ್ರವೇನು, ಉಳಿದವರ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತಿದೆ, ಇದು ಹೊಸದೇನಲ್ಲ ಎಂದಿದ್ದಾರೆ.  ಈಗ ಸುಪ್ರೀಂ ಕೋರ್ಟ್ ಖುದ್ದಾಗಿ ತನಿಖೆಗೆ ಆದೇಶ ನೀಡಿರುವುದರಿಂದ  ಅಲ್ಲಿ ತಕ್ಕ ತೀರ್ಮಾನ ಆಗುತ್ತದೆ ಎಂದು ಬಿಎಸ್‌ವೈ ಹೇಳಿದ್ದಾರೆ. ಅಲ್ಲದೆ ಕುಮಾರಸ್ವಾಮಿ ದುರುದ್ದೇಶಪೂರ್ವಕವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅದು ಸರಿಯಲ್ಲ ಎಂದರು.

One thought on “ಕುಮಾರಸ್ವಾಮಿ ಗಣಿ ಹಗರಣದ ಬಗ್ಗೆ ಹಿಂದೆಯೇ ಪುಸ್ತಕ ಪ್ರಕಟಿಸಿದ್ದೆ : ಬಿ.ಎಸ್‌ ಯಡಿಯೂರಪ್ಪ..

  • October 24, 2017 at 8:40 PM
    Permalink

    Youre so cool! I dont suppose Ive read anything like this before. So nice to find any person with some original thoughts on this subject. realy thanks for beginning this up. this web site is one thing that’s needed on the internet, somebody with somewhat originality. helpful job for bringing something new to the internet!
    cancer and aries love compatibility 2017 http://www.youtube.com/watch?v=oBSvzeH9L60

Comments are closed.

Social Media Auto Publish Powered By : XYZScripts.com