ಮಸಾಜ್‌ ಪಾರ್ಲರ್‌ನಲ್ಲಿ ರಹಸ್ಯ ಕ್ಯಾಮರಾ ಪತ್ತೆ..! ಮಹಿಳೆಯರ ಅರೆನಗ್ನ ದೃಶ್ಯಗಳ ಸೆರೆ ಹಿಡಿಯುತ್ತಿದ್ದ ಕಿರಾತಕರು

ಬೆಂಗಳೂರು : ಮಸಾಜ್ ಪಾರ್ಲರ್ನಲ್ಲಿ ಮಹಿಳೆಯರ ಅರೆನಗ್ನ ದೃಶ್ಯಗಳ ಸೆರೆ ಹಿಡಿಯುತ್ತಿದ್ದ ದುಷ್ಕರ್ಮಿಗಳ ಕೃತ್ಯ ಬುಧವಾರ ಬಯಲಾಗಿದ್ದು, ಯಲಹಂಕ‌ದ ಮಾರುತಿ ನಗರದಲ್ಲಿರುವ ಶ್ರೀಸಾಯಿ ಅಯುರ್ವೇದಿಕ್‌ ಕ್ಲೀನಿಕ್‌ನಲ್ಲಿ ರಹಸ್ಯ ಕ್ಯಾಮರಾ ಪತ್ತೆಯಾಗಿದೆ.  ಫುಲ್‌ಬಾಡಿ ಮಸಾಜ್‌ಗೆ ಬಂದಿದ್ದ ಮಹಿಳೆಯ ದೃಶ್ಯಗಳನ್ನ ರಹಸ್ಯವಾಗಿ ಚಿತ್ರೀಕರಿಸುತ್ತಿರುವ ವೇಳೆಯೇ ಆಕೆ ಅವರ ಕೃತ್ಯವನ್ನ ಕಂಡುಹಿಡಿದಿದ್ದಾಳೆ.
ಮಸಾಜ್‌ ನಡೆಯುವ ಕೋಣೆಯ ಕಿಟಕಿಯ ಕರ್ಟನ್‌ನಲ್ಲಿ ಕ್ಯಾಮರಾ ಅಳವಡಿಸಿದ್ದು ಆಕೆಯ ಗಮನಕ್ಕೆ ಬರುತ್ತಿದ್ದಂತೆ, ಆಕೆ ಪ್ರಶ್ನಿಸಿದ್ದಳು. ಆದರೆ, ಮಸಾಜ್‌ ಸೆಂಟರ್‌ ಸಿಬ್ಬಂದಿ ಅದು ಕ್ಯಾಮರಾ ಅಲ್ಲ, ಕರ್ಟನ್‌ ಇರುವುದೇ ಹಾಗೆ ಎಂದು ನಂಬಿಸಲು ಪ್ರಯತ್ನಿಸಿದ್ದರು. ಆದರೆ ಮಹಿಳೆ ಕರ್ಟನ್ ಪರಿಶೀಲನೆ ಮಾಡಿ ನೋಡಿದಾಗ ಕ್ಯಾಮರಾ ಫಿಕ್ಸ್ ಮಾಡಿರುವುದು ಧೃಡಪಟ್ಟಿತ್ತು. ಈ ಬಗ್ಗೆ ಅಲ್ಲಿಯೇ ಗಲಾಟೆ ಮಾಡಿದ ಆಕೆ ನಂತರ ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾಳೆ. ಯಲಹಂಕ ಪೊಲೀಸರು ದಾಳಿ ಮಾಡುತ್ತಿದ್ದಂತೆ ಶ್ರೀಸಾಯಿ ಕ್ಲೀನಿಕ್‌ ಸಿಬ್ಬಂದಿ ಪರಾರಿಯಾಗಿದ್ದಾರೆ.

Comments are closed.

Social Media Auto Publish Powered By : XYZScripts.com