Mandya : ಸಿದ್ಧರಾಮಯ್ಯ ಹೆಸರು ಬಳಸಿ ವೃದ್ಧೆಯ ಚಿನ್ನ ದೋಚಿದ ಕಳ್ಳ…

ಮಂಡ್ಯ : ಸಿದ್ದರಾಮಯ್ಯ ಮುಂದಿನ‌ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಮತ ಹಾಕಲು ಬ್ಯಾಂಕಿನಿಂದ ೨೦ ಸಾವಿರ ಹಣ ನೀಡ್ತಿದ್ದಾರೆ ಎಂದು ವೃದ್ಧೆಯನ್ನು ನಂಬಿಸಿದ ಕಳನೊಬ್ಬ ಚಿನ್ನಾಭರಣ ಅಪಹರಿಸಿದ್ದಾನೆ. ವೃದ್ಧೆಗೆ ಬ್ಯಾಂಕಿನಲ್ಲಿ ಹಣ ಕೊಡಿಸೋದಾಗಿ ನಂಬಿಸಿ ಆಭರಣ ದೋಚಿರೋ ಕಳ್ಳ. ಮಂಡ್ಯದ KSRTC ಬಸ್ ನಿಲ್ದಾಣದಲ್ಲಿ ವೃದ್ಧೆಗೆ ಪರಿಚಯವಾದ ಕಳ್ಳಸಿಎಂ ಸಿದ್ದರಾಮಯ್ಯ ನಮಗೆ ಮತ ಹಾಕಬೇಕೆಂದು ಬ್ಯಾಂಕಿನಿಂದ ೨೦ ಸಾವಿರ ಹಣ ನೀಡ್ತಿದ್ದಾರೆ ಎಂದು ನಂಬಿಸಿದ್ದಾನೆ.

ಮಂಡ್ಯದಲ್ಲಿರೋ ಇಂಡಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ತೋರಿಸಿ, ಮೈಮೇಲಿನ ಚಿನ್ನ ನೋಡಿದ್ರೆ ಹಣ ನೀಡಲ್ಲ, ತೆಗೆದು ಬ್ಯಾಗಿನಲ್ಲಿರಿಸಿ ಎಂದು ವೃದ್ಧೆಗೆ ಯಾಮಾರಿಸಿದ್ದಾನೆ. ಚಿನ್ನದ ಸರ, ಎರಡು ಉಂಗುರ, ಓಲೆ, ತಾಳಿ, ಹದಿನೆಂಟು ಚಿನ್ನದ ಗುಂಡು ಬ್ಯಾಂಕಿನೆದುರೆ ದೋಚಿಕೊಂಡು ಹೋಗಿದ್ದಾನೆ. ಮಂಡ್ಯ ತಾಲೂಕಿನ ಕೆಸ್ತೂರು ಗ್ರಾಮದ ಚಿಕ್ಕೋಳಮ್ಮ ಚಿನ್ನ ಕಳೆದುಕೊಂಡವರು. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com