Cricket : ಬಿಸಿಸಿಐ ಕುಂಬ್ಳೆ ನಡುವಿನ ಹನಿಮೂನ್ ಅವಧಿ ಮುಕ್ತಾಯ..?

ಮುಂಬೈ : ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ ) ಅರ್ಜಿ ಆಹ್ವಾನಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕುಂಬ್ಳೆಯನ್ನು ಕೋಚ್ ಹುದ್ದೆಯಲ್ಲಿ ಮುಂದುವರೆಸುವುದರ ಬಗ್ಗೆ ಬಿಸಿಸಿಐ ಹೆಚ್ಚು ಆಸಕ್ತಿ ತೋರುವಂತೆ ಕಂಡುಬರುತ್ತಿಲ್ಲ. ಈ ಅರ್ಜಿ ಆಹ್ವಾನ ಪ್ರಕ್ರಿಯೆ, ಬೋರ್ಡ್ ಹಾಗೂ ಕುಂಬ್ಳೆ ಮಧ್ಯೆ ಸಂಘರ್ಷ ನಡೆದಿರಬಹುದಾ..? ಎಂಬ ಸಂಶಯಗಳಿಗೆ ರೆಕ್ಕೆ ಮೂಡಿಸುವಂತಿದೆ.

ಬಹುಶಃ ಬಿಸಿಸಿಐ ಹಾಗೂ ಅನಿಲ್ ಕುಂಬ್ಳೆ ಹನಿಮೂನ್ ಅವಧಿ ಮುಗಿಯಿತಾ..? ಎಂಬುದು ಅಭಿಮಾನಿಗಳ ಮನದಲ್ಲಿ ಮೂಡಿರುವ ಸಂಶಯ. ಈಗ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಜೊತೆಗಿನ ಒಪ್ಪಂದ ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಬಳಿಕ ಮುಕ್ತಾಯಗೊಳ್ಳಲಿದೆ. ಅವರ ನಿರ್ಗಮನದ ನಂತರ ಆ ಸ್ಥಾನಕ್ಕಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ‘ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು ‘ ಎಂದು ತಿಳಿಸಿದ್ದಾರೆ.
ಸದ್ಯ ಕೋಚ್ ಆಗಿ ಕಾರ್ಯ ಪ್ರವೃತ್ತರಾಗಿರುವ ಅನಿಲ್ ಕುಂಬ್ಳೆ ಅವರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ನೇರ ಪ್ರವೇಶ ಒದಗಿಸಲಾಗಿದೆ. ಸುಪ್ರೀ ಕೋರ್ಟ್ ನಿಂದ ನಿಯೋಜಿತಗೊಂಡಿರುವ ನಿರ್ವಾಹಕರ ಸಮಿತಿ ( ಸಿಒಎ)  ಮತ್ತು ಕ್ರಿಕೆಟ್ ಸಲಹಾ ಸಮಿತಿಗಳು ಒಟ್ಟಾಗಿ ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿವೆ. ಕೋಚ್ ಆಯ್ಕೆ ಪ್ರಕ್ರಿಯೆ ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತವಾಗಿರಲಿದೆ

Comments are closed.

Social Media Auto Publish Powered By : XYZScripts.com