ಯಾವುದೇ ಘೋಷಣೆಗಳನ್ನ ಕೂಗಿ, ಶಾಂತಿ ಸುವ್ಯವಸ್ಥೆ ಕೆಡಿಸುವಂತಿಲ್ಲ : ಎಂ.ಇ.ಎಸ್‌ಗೆ ಡಿಸಿಪಿ ತಾಕೀತು

ಬೆಳಗಾವಿ : ಬೆಳಗಾವಿಯಲ್ಲಿರುವ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡಿಸಬೇಡಿ, ಯಾವುದೇ ಕಾರಣಕ್ಕೂ ಯಾವುದೇ ಘೋಷಣೆ ಕೂಗಬೇಡಿ ಎಂದು ಬೆಳಗಾವಿ ಕ್ರೈಂ ಡಿಸಿಪಿ ಅಮರನಾಥ ರೆಡ್ಡಿ ಎಂ.ಇ.ಎಸ್‌ ಗೆ ತಾಕೀತು ಮಾಡಿದ್ದಾರೆ. ಬೆಳಗಾವಿಯಲ್ಲಿ ಎಂ.ಇ.ಎಸ್‌ ಗುರುವಾರ ಪ್ರತಿಭಟನಾ ರ‍್ಯಾಲಿ ಕೈಗೊಂಡಿದ್ದು, ಈ ಸಂಬಂಧ ಕ್ರೈಂ ಡಿಸಿಪಿ ಅಮರನಾಥ ರೆಡ್ಡಿ, ಎಚ್ಚರಿಕೆ ನೀಡಿದ್ದು, ಎಂ.ಇ.ಎಸ್‌ ಭಿತ್ತಿ ಪತ್ರಗಳನ್ನ ಪ್ರದರ್ಶಿಸಲೂ ಅವರು ಅವಕಾಶ ನೀಡದೆ, ಶಾಂತ ರೀತಿಯಲ್ಲಿ ಮನವಿ ಪತ್ರ ಸಲ್ಲಿಸುವಂತೆ ಹೇಳಿದರು.
ಮತ್ತು  ಮಹಾರಾಷ್ಟ್ರ ಬಾರ್ಡರ್‌ವರೆಗೂ ಚಕಪೊಸ್ಟ್‌ಗಳನ್ನು ನಿರ್ಮಿಸಲಾಗಿದೆ. ಕಾನೂನ ವ್ಯವಸ್ಥೆಯನ್ನು ಹಾಳು ಮಾಡಿದವರ ವಿರುದ್ದ ಶಿಶ್ತು ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿಪಿ ತಾಕೀತು ಮಾಡಿದ್ದರು. ⁠⁠⁠⁠ ಬಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಎಂ.ಇ.ಎಸ್‌ ಪ್ರತಿಭಟನಾ ರ‍್ಯಾಲಿ ನಡೆಸಿದ್ದು, ತಮ್ಮ ಮರಾಠಿ ಪರ ಬೇಡಿಕೆ ಅಹವಾಲುಗಳನ್ನ ಜಿಲ್ಲಾಧಿಕಾರಿಗಳಿಗೆ ನೀಡಿದೆ.

Comments are closed.

Social Media Auto Publish Powered By : XYZScripts.com