`ಬಾಹುಬಲಿಗೆ ವರುಷ, ದಂಗಲ್‍ಗೆ ನಿಮಿಷ’ ಈ ರೀತಿ ಗಾದೆ ಬದಲಾಗುತ್ತಾ..?

ಕಳೆದ ಡಿಸೆಂಬರ್‍ನಲ್ಲಿ ವಿಶ್ವದಾದ್ಯಂತ ತೆರೆಕಂಡಿದ್ದ ದಂಗಲ್ ಸಿನಿಮಾ ಒಟ್ಟು 745ಕೋಟಿ ಕಲೆಕ್ಷನ್ ಮಾಡಿತ್ತು. ಮೂರು ವಾರದ ಹಿಂದೆ ಚೀನಾದಲ್ಲಿ 7 ಸಾವಿರ ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾಗಿರೋ ಈ ಸಿನಿಮಾ 500ಕೋಟಿಗೂ ಹೆಚ್ಚು ಕೊಳ್ಳೆ ಹೊಡೆದು ಹೊಸ ದಾಖಲೆ ಬರೆದಿದೆ. ಚೀನಿ ಪ್ರೇಕ್ಷಕರಂತೂ ಆಮೀರ್ ಖಾನ್, ದಂಗಲ್ ಮೋಡಿಗೆ ಮನಸೋತಿದ್ದಾರೆ. ಕುಸ್ತಿಪಟು ತಂದೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಕುಸ್ತಿಪಟುಗಳನ್ನಾಗಿ ರೂಪಿಸೋ ದಂಗಲ್ ಸಿನಿಮಾ ಕಥೆ ಅಲ್ಲಿನ ಪ್ರೇಕ್ಷಕರ ಇಷ್ಟವಾಗಿದೆ. ದಂಗಲ್ ನಾಗಾಲೋಟ ಬಾಹುಬಲಿ ದಿ ಕನ್‍ಕ್ಲೂಷನ್ ದಾಖಲೆಗೆ ತಲೆಬಿಸಿ ತಂದಿದೆ. ಯಾಕಂದ್ರೆ ಸದ್ಯ ಬಾಹುಬಲಿ ಮತ್ತು ದಂಗಲ್ ಸಿನಿಮಾ ಒಟ್ಟು ಕಲೆಕ್ಷನ್ ವ್ಯತ್ಯಾಸ ಕೇವಲ 31 ಕೋಟಿ.

ಕೆಲದಿನಗಳ ಹಿಂದಷ್ಟೆ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ನಿರ್ಮಿಸಿತ್ತು. ದಂಗಲ್ ಸಿನಿಮಾ ಕೂಡ ಒಟ್ಟಾರೆಯಾಗಿ 1000ಕೋಟಿ ಕಲೆಕ್ಷನ್ ಮಾಡಿ ಬಾಹುಬಲಿ ನಂತ್ರದ ಸ್ಥಾನದಲ್ಲಿ ನಿಂತಿದೆ. ಬಾಹುಬಲಿಯ 1000ಕೋಟಿ ಕ್ಲಬ್ ದಾಖಲೆ ಬ್ರೇಕ್ ಮಾಡೋಕೆ ಹೊಸ ಸಿನಿಮಾ ಬರ್ಬೇಕು ಅನ್ನಲಾಗ್ತಿತ್ತು. ಆದ್ರೆ ದಂಗಲ್ ಸಿನಿಮಾ ಅದನ್ನ ಮಾಡಿತೋರಿಸಿದೆ. ಸದ್ಯ ಬಾಹುಬಲಿ-2 ಸಿನಿಮಾ ಒಟ್ಟಾರೆ ಕಲೆಕ್ಷನ್ 1577 ಕೋಟಿಯಾದ್ರೆ, ದಂಗಲ್ ಒಟ್ಟು ಕಲೆಕ್ಷನ್ 1523ಕೋಟಿ ರೂಪಾಯಿಗಳು. ಚೀನಾದಲ್ಲಿ ದಂಗಲ್ ಚಿತ್ರ ಸೌಂಡ್ ಕಡಿಮೆಯಾಗಿಲ್ಲ. ಹಾಗಾಗಿ ಕಲೆಕ್ಷನ್ ಲೆಕ್ಕಾಚಾರದಲ್ಲಿ ಇನ್ನೊಂದು ವಾರದಲ್ಲಿ ಬಾಹುಬಲಿಯನ್ನ ದಂಗಲ್ ಮೀರಿಸಿದ್ರು ಅಚ್ಚರಿ ಪಡ್ಬೇಕಿಲ್ಲ.

ದಂಗಲ್ ಚೀನಾದಲ್ಲಿ ಈ ಪಾಟಿ ಸೌಂಡ್ ಮಾಡ್ತಿರೋದು ನೋಡಿ ಬಾಹುಬಲಿ ಟೀಮ್ ಶೀಘ್ರದಲ್ಲೇ ತಮ್ಮ ಚಿತ್ರವನ್ನ ಅಲ್ಲಿ ರಿಲೀಸ್ ಮಾಡೋಕೆ ಪ್ಲಾನ್ ಮಾಡ್ತಿದೆ. ದಂಗಲ್ ಚಿತ್ರವನ್ನ ಅಲ್ಲಿ ಬಿಡುಗಡೆ ಮಾಡಿದ ವಿತರಕರೇ ಬಾಹುಬಲಿ ಚಿತ್ರವನ್ನೂ ರಿಲೀಸ್ ಮಾಡ್ತಾರಂತೆ. ಜುಲೈನಲ್ಲಿ ಬಾಹುಬಲಿ ದಿ ಕನ್‍ಕ್ಲೂಷನ್ ಚಿತ್ರ ಚೀನಾದಾದ್ಯಂತ ತೆರೆಗೆ ಬರೋ ಸಾಧ್ಯತೆಗಳಿವೆ. ಆದ್ರೆ ಚೀನಾದಲ್ಲಿ ಬಾಹುಬಲಿ ದಿ ಕನ್‍ಕ್ಲೂಷನ್ ಎಷ್ಟರ ಮಟ್ಟಿಗೆ ಗೆಲ್ಲುತ್ತೆ ಅಂತ ಕಾದು ನೋಡ್ಬೇಕು. ಯಾಕಂದ್ರೆ ಬಾಹುಬಲಿ ದಿ ಬಿಗಿನಿಂಗ್ ರಿಲೀಸ್ ಆಗಿ ಚೀನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿದೆ.

One thought on “`ಬಾಹುಬಲಿಗೆ ವರುಷ, ದಂಗಲ್‍ಗೆ ನಿಮಿಷ’ ಈ ರೀತಿ ಗಾದೆ ಬದಲಾಗುತ್ತಾ..?

  • October 25, 2017 at 10:23 AM
    Permalink

    It’s an awesome post in support of all the online viewers;
    they will take benefit from it I am sure.

Comments are closed.

Social Media Auto Publish Powered By : XYZScripts.com