ಸದಸ್ಯತ್ವ ಹೋದರೂ ಚಿಂತೆಯಿಲ್ಲ ‘ಜೈ ಮಹಾರಾಷ್ಟ್ರ’ ಎನ್ನುತ್ತೇವೆ : ಎಂ.ಇ.ಎಸ್‌ ಉದ್ಧಟತನ..

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಸದಸ್ಯರ ಕ್ಯಾತೆ ಆರಂಭವಾಗಿದ್ದು, ಬೆಳಗಾವಿ ತಾಲೂಕಾ ಪಂಚಾಯತಿ ಸಭೆಯಲ್ಲಿ ಉದ್ಧಟತನ ಪ್ರದರ್ಶಿಸಿದ್ದಾರೆ. ಬುಧವಾರ ತಾಲೂಕಾ ಪಂಚಾಯಿತಿ ಸಭೆಗಾಗಿ ಮರಾಠಿಯಲ್ಲಿ ನೋಟಿಸ್ ನೀಡುವಂತೆ ಎಂಇಎಸ್ ತಾ.ಪ ಸದಸ್ಯರು ಬೇಡಿಕೆ ಇಟ್ಟಿದ್ದಲ್ಲದೆ,  ಬೆಳಗಾವಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕರೆಯಲಾದ ತಾ.ಪಂಚಾಯಿತಿ ಸಭೆಯಲ್ಲಿ ಎಂಇಎಸ್ ಸದಸ್ಯರು ಪುಂಡಾಟಿಕೆ ತೋರಿಸಿದ್ದಾರೆ.
ತಮಗೆ ಕನ್ನಡ ಭಾಷೆ ತಿಳಿಯುವುದಿಲ್ಲ. ನಮಗೆ ಮರಾಠಿ ಭಾಷೆಯಲ್ಲಿ  ದಾಖಲಾತಿ‌ ನೀಡಿ ಇಲ್ಲದಿದ್ದರೇ ಸಭೆ ಮೊಟಕುಗೊಳಿಸಿ ಎಂದು ಉದ್ಧಟತನ ಪ್ರದರ್ಶಿಸಿದ್ದಾರೆ. ಕನಾ೯ಟಕದಲ್ಲಿದ್ದ ಮಾತ್ರಕ್ಕೆ ಜೈ ಮಹಾರಾಷ್ಟ್ರ ಘೋಷಣೆ ಕೂಗಬಾರದೆಂದು ಯಾವ ಕಾನೂನು ಇಲ್ಲ. ಸದಸ್ಯತ್ವ ಹೋದರು ಚಿಂತೆಯಿಲ್ಲ ಜೈ ಮಹಾರಾಷ್ಟ್ರ ಘೋಷಣೆ ಕೂಗುವೆವು ಎಂದು ಎಂಇಎಸ್ ತಾ.ಪಂಚಾಯತಿ ಸದಸ್ಯರು  ಉದ್ಧಟತನದ ಹೇಳಿಕೆ ನೀಡಿದ್ದಾರೆ.

Comments are closed.