2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಕುರಿತು ಅನುಮಾನವಿಲ್ಲ : ಸಂಸದ ಧೃವನಾರಾಯಣ್‌..

ಚಾಮರಾಜನಗರ : 2018 ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಬೇಕು.  ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲೋದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಸದ ಧೃವನಾರಾಯಣ್‌ ಹೇಳಿದ್ದಾರೆ.  ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್ ಹಲವು ಸೂಚನೆಯನ್ನ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಗೆ ಸಿಎಂ ಈಗಾಗಲೇ ಎರಡು ಸಾವಿರ ಕೋಟಿ ಅನುಧಾನ ನೀಡಿದ್ದಾರೆ.  ಹತ್ತು ಬಾರಿ ಭೇಟಿ ಕೊಟ್ಟು ಶಾಪಗ್ರಸ್ಥ ಜಿಲ್ಲೆ ಅನ್ನುವ ಕಳಂಕವನ್ನ ತೊಡೆದು ಹಾಕಿದ್ದಾರೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷವನ್ನ ಮತ್ತೆ ಬೆಂಬಲಿಸಲಿದ್ದಾರೆ ಎಂದು ಧೃವನಾರಾಯಣ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಅಲ್ಲದೆ,  2018 ರ ಚುನಾವಣೆಯಲ್ಲಿ  ನಾನು ರಾಜ್ಯ ರಾಜಕಾರಣಕ್ಕೆ ವಾಪಸ್ ಆಗಲ್ಲ. ನಾನು ಸಂಸದನಾಗಿಯೇ ಕೆಲಸ ಮಾಡಲು ಇಷ್ಟ ಪಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

One thought on “2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಕುರಿತು ಅನುಮಾನವಿಲ್ಲ : ಸಂಸದ ಧೃವನಾರಾಯಣ್‌..

  • October 25, 2017 at 10:12 AM
    Permalink

    Acheter Levitra Ordonnance Tadalafil E20 Canada Online buy viagra Discount Generic Finasteride Propecia Ejaculation Benign Prostatic Hyperplasia

Comments are closed.