ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಕೊಲೆ : ಕಳ್ಳತನಕ್ಕೆ ಅಡ್ಡಿಯಾದ ಬಾಲಕನನ್ನೇ ಕೊಂದ ಯುವಕ…

ಮಂಡ್ಯ: ಕ್ರಿಕೆಟ್‌ ಬೆಟ್ಟಿಂಗ್‌ಗೆ ಹಣ ಸಂಗ್ರಹಿಸುವುದಕ್ಕಾಗಿ ಕಳ್ಳತನ ಮಾಡುವುದಕ್ಕೆ ಹೋದ ದುಷ್ಕರ್ಮಿಯೊಬ್ಬನನ್ನ ತಡೆದಿದ್ದ ಕಾರಣಕ್ಕೆ ಶಶಾಂಕ್‌ ಎಂಬ ಬಾಲಕ  ಕೊಲೆಯಾಗಿದ್ದಾನೆ ಎಂಬ ಸತ್ಯ ಮಂಗಳವಾರ ಬಯಲಾಗಿದೆ.  ಒಂಭತ್ತನೇ ತರಗತಿಯ ವಿದ್ಯಾರ್ಥಿ ಶಶಾಂಕ(13) ಎಂಬ ಬಾಲಕನ ಹತ್ಯೆ ನಡೆದಿದ್ದು ಮಂಡ್ಯ ಜಿಲ್ಲೆ, ಕೆಆರ್ ಪೇಟೆಯಲ್ಲಾಗಿದ್ದು, ಮೇ 15ರಂದು ಘಟನೆ ನಡೆದಿತ್ತು.  ಅಂತಿಮ ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ 18 ವರ್ಷ ವಯಸ್ಸಿನ ದೀಕ್ಷಿತ್ ಈ ಕೊಲೆಯ ಆರೋಪಿಯಾಗಿದ್ದು, ಈತ ಹಣ ಕದಿಯಲು ಶಶಾಂಕ ಮನೆಗೆ ಬಂದಾಗ ಹತ್ಯೆ ನಡೆಸಿದ್ದಾನೆ ಎನ್ನಲಾಗಿದೆ.
ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ದೀಕ್ಷಿತ್‌ ಹಣದ ಆಸೆಗಾಗಿ ಕಳ್ಳತನ ಶುರು ಮಾಡಿದ್ದ, ಹೀಗೆ ಕಳ್ಳತನಕ್ಕಾಗಿ ಶಶಾಂಕ್‌ ಮನೆಗೆ ಬಂದಿದ್ದಾಗ, ಶಶಾಂಕ್‌ ವಿರೋಧ ವ್ಯಕ್ತಪಡಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನೇ ದೀಕ್ಷಿತ್‌ ಕೊಂದುಬಿಟ್ಟಿದ್ದ, ಮತ್ತು  ಶಶಾಂಕನನ್ನು ಕೊಲೆ ಮಾಡಿದ ನಂತರ ಆತನ ಬಳಿಯಿದ್ದ ಮನೆಯ ಬೀಗದ ಕೀಲಿ ಬಳಸಿ ಬೆಳ್ಳಿಯ ವಸ್ತುವನ್ನು ಕಳ್ಳತನ ಮಾಡಿದ್ದ. ನಂತರ ನಿರ್ಜನ ಪ್ರದೇಶದಲ್ಲಿ ಶಶಾಂಕನ ಮೃತ ದೇಹದ ಮೇಲೆ ಹೊಂಗೆ ಸೊಪ್ಪನ್ನು ಮುಚ್ಚಿ ಆರೋಪಿ ದೀಕ್ಷಿತ್‌ ತಲೆಮರೆಸಿಕೊಂಡಿದ್ದ. ಕೆಆರ್ ಪೇಟೆ ಗ್ರಾಮಾಂತರ ಪೊಲೀಸರ ತನಿಖೆಯಿಂದ ಸಿಕ್ಕಿ ಬಿದ್ದ ದೀಕ್ಷಿತ್, ತಪ್ಪೊಪ್ಪಿಕೊಂಡಿದ್ದಾನೆ.

Comments are closed.