Hopcoms : ಒಂದೊಂದು ಏರಿಯಾದಲ್ಲಿ ಒಂದೊಂದು ಬೆಲೆಗೆ full stop, ಇಲ್ಲಿದೆ ಉತ್ತರ..

ಹಾಪ್ ಕಾಮ್ಸ್ ಮಳಿಗೆಗಳಲ್ಲಿ, ಒಂದೊಂದು ಏರಿಯಾದಲ್ಲಿ ಒಂದೊಂದು ಬೆಲೆಗೆ ವ್ಯಾಪಾರ ಮಾಡಲಾಗುತ್ತದೆ ಎನ್ನುವುದು ಅನೇಕರ ದೂರು. ಇದನ್ನು ತಪ್ಪಿಸಲು ತೂಕ ಮಾಡುವ ಯಂತ್ರಗಳ ಮೂಲಕವೇ ಹೊಸ ದಾರಿ ಹುಡುಕಿದೆ ಹಾಪ್ ಕಾಮ್ಸ್…
ಒಂದು ಕೆಜಿ ಮಾವಿನಹಣ್ಣಿಗೆ ಒಂದು ಹಾಪ್ ಕಾಮ್ಸ್ ಮಳಿಗೆಯಲ್ಲಿ 60 ರೂಪಾಯಿ ಇದ್ದರೆ ಮತ್ತೊಂದು ಹಾಪ್ ಕಾಮ್ಸ್ ಮಳಿಗೆಯಲ್ಲಿ ಇದಕ್ಕಿಂತ ಬೆಲೆ ಹೆಚ್ಚಾಗಿರುತ್ತದೆ. ಹೀಗೆ ಬೇರೆ ಬೇರೆ ಬೆಲೆ ಇರುವುದರ ಬಗ್ಗೆ ಅನೇಕ ಬಾರಿ ಗ್ರಾಹಕರು ತಕರಾರು ಮಾಡಿದ್ದಾರೆ. ಹಾಪ್ ಕಾಮ್ಸ್ ನೂತನ ತಂತ್ರಜ್ಞಾನದ ಸಹಾಯ ಪಡೆದು ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಹಣ್ಣು-ತರಕಾರಿಗಳನ್ನು ತೂಕ ಮಾಡುವ ಯಂತ್ರವನ್ನು ಸಂಪೂರ್ಣವಾಗಿ ಡಿಜಿಟಲೈಸ್ ಮಾಡುವ ಮೂಲಕ ಎಲ್ಲಾ ಹಾಪ್ ಕಾಮ್ಸ್ ಮಳಿಗೆಗಳ ವಹಿವಾಟಿನ ಮೇಲೆ ಕೇಂದ್ರ ಕಚೇರಿ ನಿಗಾ ವಹಿಸಲಿದೆ.


ರಾಜ್ಯ ಸರ್ಕಾರ ಹಾಪ್ ಕಾಮ್ಸ್ ಅಭಿವೃದ್ಧಿಗೆ 2.75 ಕೋಟಿ ರೂಪಾಯಿ ಅನುದಾನ ನೀಡಿದೆ. ಈ ಹಣದಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡುತ್ತಿದ್ದು ಎಲ್ಲಾ ಮಳಿಗೆಗಳಲ್ಲಿ ಎಷ್ಟು ವಸ್ತುಗಳ ಮಾರಾಟ ನಡೆದಿದೆ, ಅದಕ್ಕೆ ಎಷ್ಟು ಬಿಲ್ ನೀಡಲಾಗಿದೆ ಎನ್ನುವುದೆಲ್ಲದರ ಮಾಹಿತಿ ತಕ್ಷಣದಲ್ಲೇ ಕೇಂದ್ರ ಕಚೇರಿಗೆ ಮಾಹಿತಿ ರವಾನೆಯಾಗಲಿದೆ. ಇದರಿಂದ ತಮಗೆ ಆಗುವ ಮೋಸ ತಪ್ಪುತ್ತದೆ ಎಂದು ಜನ ಖುಷಿಯಾಗಿದ್ದಾರೆ.
ಎಲ್ಲಾ 275 ಮಳಿಗೆಗಳಿಗೆ ನೂತನ ತೂಕ ಮಾಡುವ ಯಂತ್ರದ ಅಳವಡಿಸುವ ಕೆಲಸ ಜಾರಿಯಲ್ಲಿದೆ. ಮುಂದಿನ 15 ದಿನಗಳಲ್ಲಿ ಈ ಕೆಲಸ ಮುಗಿಯಲಿದ್ದು ನಂತರ ಬೆಲೆಗಳ ಬಗ್ಗೆ ಜನರ ದೂರು ಕಡಿಮೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಹಾಪ್ ಕಾಮ್ಸ್ ಅಧಿಕಾರಿಗಳು.

Comments are closed.