Haveri : ಸಿಡಿಲು ಬಡಿದು ಮೂವರ ಸಾವು: ಓರ್ವ ಬಾಲಕನಿಗೆ ಗಂಭೀರ ಗಾಯ…

ಹಾವೇರಿ: ಸಿಡಿಲು ಬಡಿದು ಮೂವರು ಮೃತಪಟ್ಟು, ಓರ್ವ ಬಾಲಕ ಅಸ್ವಸ್ಥನಾಗಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಆಲದಗೇರಿ ಗ್ರಾಮದಲ್ಲಿ ನಡೆದಿದೆ.  ಗ್ರಾಮದ ಬಳಿ ಇರುವ  ಬರಪುನಶಾವಲಿ ದೇವಸ್ಥಾನಕ್ಕೆ ಈ ಬಾಲಕರು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಮೃತರಲ್ಲಿ ಓರ್ವ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನವನಾಗಿದ್ದು ಆತನನ್ನು ಅಶ್ಪಾಕ್ (14) ಎಂದು ಗುರುತಿಸಲಾಗಿದೆ.  ಇನ್ನಿಬ್ಬರು ಆಲದಗೇರಿ ಗ್ರಾಮದವರೇ ಆಗಿದ್ದು, ಅವರು ಅಬ್ದುಲ್ (13)ಮತ್ತು  ಆಫ್ರೀನ್ (13) ಎಂದು ಗುರುತಿಸಲಾಗಿದೆ. 12 ವರ್ಷ ವಯಸ್ಸಿನ ಸಮೀರ ಗಂಭೀರವಾಗಿ ಗಾಯಗೊಂಡಿದ್ದು, ಹಂಸಭಾವಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com