Gadag ; ನರಗುಂದದಲ್ಲಿ ಬಿಎಸ್ ವೈ ಸಮಾವೇಶಕ್ಕೆ ಕಳಸಾಬಂಡೂರಿ ಬ್ರೇಕ್…

ಗದಗ : ಗದಗ ಜಿಲ್ಲೆ ನರಗುಂದದಲ್ಲಿ ಬಿಜೆಪಿ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗಮಿಸಿದ್ದರು. ಮಾಜಿ ಸಚಿವರಾದ ಸಿ ಸಿ ಪಾಟೀಲ್, ಗೋವಿಂದ ಕಾರಜೋಳರೊಂದಿಗೆ ಆಗಮಿಸಿದ್ದ ಬಿಎಸ್ ವೈ ಕಳಸಾ ಬಂಡೂರಿ ಹೋರಾಟಗಾರರಿಂದ ತೀವೃ ವಿರೋಧವನ್ನು ಎದುರಿಸಿದರು. ಕಳಸಾ ಬಂಡೂರಿ ಹೋರಾಟಗಾರರು ಕೈಗೆ ಕಪ್ಪು ಬಟ್ಟೆ ಧರಿಸಿ ಕಳಸಾ ಹೋರಾಟ ವೇದಿಕೆಯಲ್ಲಿ ಪ್ರತಿಭಟನೆ ನಡೆಸಿದರು. ಗೋವಾ, ಮಹಾರಾಷ್ಟ್ರ, ಕೇಂದ್ರ ಮೂರು ಕಡೆಗಳಲ್ಲೂ ಅವರದೇ ಆಡಳಿತವಿದ್ದು, ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ, ಸಮಾವೇಶದ ವೇದಿಕೆಗೆ ತೆರಳುವ ಮುನ್ನ ಕಳಸಾ ವೇದಿಕೆಗೆ ಬಂದು ಯೋಜನೆ ಜಾರಿಯ ಜವಾಬ್ದಾರಿ ತಗೆದುಕೊಳ್ಳಬೇಕು.

 

ಇಲ್ಲವಾದರೆ ನಾವೇ ಸಮಾವೇಶದ ವೇದಿಕೆಗೆ ತೆರಳಿ ಸಮಾವೇಶವನ್ನು ಬಹಿಷ್ಕರಿಸುತ್ತೇವೆ. ಬಹಿಷ್ಕಾರದ ವೇಳೆ  ರೈತ ಹೋರಾಟಗಾರರಿಗೆ ತೊಂದರೆಯಾದರೆ ಅದಕ್ಕೆ ಬಿಎಸ್ ವೈ ಅವರೇ ನೇರ ಹೊಣೆಯಾಗುತ್ತಾರೆ ಎಂದು ಬಿಎಸ್ ವೈ ಗೆ ಎಚ್ಚರಿಕೆ ನೀಡಿದ್ದಾರೆ. ಆಕ್ರೋಶಗೊಂಡ ರೈತರು, ಸಮಾವೇಶಕ್ಕೆ ಬಹಿಷ್ಕಾರ ಹಾಕಲು ಯತ್ನಿಸಿದರು. ಕಳಸಾಬಂಡೂರಿ ವೇದಿಕೆಯಿಂದ ಸಮಾವೇಶದ ವೇದಿಕೆಯವರೆಗೆ ಬಿಎಸ್ ವೈ ಗೆ ಧಿಕ್ಕಾರ ಕೂಗತ್ತಾ ಆಕ್ರೋಶದ ಮೆರವಣಿಗೆ ನಡೆಸಲಾಯಿತು.

ಸಮಾವೇಶದ ವೇದಿಕೆಗೆ ತೆರಳಲು ಪೋಲಿಸರು ಅವಕಾಶ ನೀಡಲಿಲ್ಲ. ಮಾರ್ಗ ಮಧ್ಯೆಯೇ ತಡೆದು ಹೋರಾಟಗಾರರ ‌ಮನವೊಲಿಕೆಗೆ ಯತ್ನಿಸಲಾಯಿತು. ಪೊಲೀಸರ ಈ ನಡೆಯಿಂದ ಕಳಸಾ ಹೋರಾಟಗಾರರು ಕೆಂಡಾಮಂಡಲವಾದರು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ  ಇನ್ನೂರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಕಳಸಾ ಬಂಡೂರಿ ಹೋರಾಟಗಾರರ ಆಕ್ರೋಶಕ್ಕೆ ಮಣಿದ ಬಿಎಸ್ ವೈ ವೇದಿಕೆ ಬಳಿ ಬಂದು ಮನವಿ ಸ್ವೀಕರಿಸಲು ಒಪ್ಪಿಕೊಂಡರು. ಮಾಜಿ ಸಿಎಂ
ಬಿಎಸ್ ವೈ ಬರಲೊಪ್ಪಿದ ಬಳಿಕ ಹೋರಾಟಗಾರರು ಸಮಾಧಾನಗೊಂಡರು. ಮನವಿ ಸ್ವೀಕರಿಸಿದ ಬಿಎಸ್ ವೈ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು.

One thought on “Gadag ; ನರಗುಂದದಲ್ಲಿ ಬಿಎಸ್ ವೈ ಸಮಾವೇಶಕ್ಕೆ ಕಳಸಾಬಂಡೂರಿ ಬ್ರೇಕ್…

Comments are closed.

Social Media Auto Publish Powered By : XYZScripts.com