ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ ಬಾಂಬ್ ಸ್ಫೋಟ : 22 ಜನ ಸಾವು, 50 ಜನರಿಗೆ ಗಾಯ…

ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು 22 ಜನ ಮೃತಪಟ್ಟಿದ್ದು 50 ಜನ ಗಾಯಗೊಂಡಿದ್ದಾರೆ. ಅಮೇರಿಕಾದ ಪಾಪ್ ಸಿಂಗರ್ ಏರಿಯಾನಾ ಗ್ರ್ಯಾಂಡ್ ರವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಸುಮಾರು 10.30 ಕ್ಕೆ ಸ್ಫೋಟ ಸಂಭವಿಸಿದ್ದು ಭಯೋತ್ಪಾದಕ ದಾಳಿಯೆಂದು ಪೋಲಿಸರು ಶಂಕಿಸಿದ್ದಾರೆ.

ಕಾರಣ ಇನ್ನೂ ತಿಳಿದುಬಂದಿಲ್ಲ, ಮತ್ತು ಯಾವ ಸಂಘಟನೆಯೂ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಗಾಯಕಿ ಏರಿಯಾನಾ ಗ್ರ್ಯಾಂಡ್ ಅವರಿಗೆ ಯಾವುದೇ ಅಪಾಯವಾಗಿಲ್ಲ. ಘಟನೆಯ ಬಳಿಕ ಗ್ರ್ಯಾಂಡ್ “broken. from the bottom of my heart, i am so so sorry. i don’t have words.” ಎಂದು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com