belagavi :ಬಾರ್‌ ಸಿಬ್ಬಂದಿ ಮೇಲೆ ಪಿಎಸ್‌ಐ ಹಲ್ಲೆ ಪ್ರಕರಣ : ಪಿಎಸ್‌ಐ ಈಗ ಆರೋಪ ಮುಕ್ತ

ಬೆಳಗಾವಿ: ಬಾರ್‌ ಸಿಬ್ಬಂದಿ ಮೇಲೆ ಪಿಎಸ್ಐ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ,   ಮಂಗಳವಾರ ಕುಡಚಿ ಠಾಣೆ ಪಿಎಸ್ಐಗೆ ಇಲಾಖೆ ವಿಚಾರಣೆಯಲ್ಲಿ ಕ್ಲೀನ್ ಚಿಟ್ ದೊರಕಿದ್ದು, ಪಿಎಸ್‌ಐ ಆರೋಪ ಮುಕ್ತರಾಗಿದ್ದಾರೆ. ಕುಡಚಿ ಪೋಲಿಸ್ ಠಾಣೆ ಪಿಎಸ್ ಐ ಶಿವಶಂಕರ ಮುಕರಿ ಹಲ್ಲೆ ಆರೋಪ ಎದುರಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಪುಟಗಳ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗಿತ್ತು.  ಬಾರ್ ಮಾಲೀಕರ ಹೇಳಿಕೆ, ಸಾಕ್ಷಿಗಳನ್ನ ಪರಿಗಣಿಸಿ ತನಿಖಾಧಿಕಾರಿ ವರದಿ ನೀಡಿದ್ದರು. ಇಲಾಖೆ ವಿಚಾರಣೆಯ ತೀರ್ಪಿನ ನಂತರ ಈಗ ಪಿಎಸ್ ಐ ಪರವಾಗಿಯೇ ವರದಿ ತಯಾರು ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು,  ದೂರುದಾರ ಬಾರ್ ಮಾಲೀಕನ ವಿರುದ್ಧ ಇಡೀ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗುತ್ತಿದೆ.
ಮಾರ್ಚ 13ರಂದು  ಪಿಎಸ್ ಐ ಶಿವಶಂಕರ ಮುಕರಿ, ಕುಡಚಿ ಪಟ್ಟಣದ ಶಿವಶಕ್ತಿ ಬಾರ್‌ಗೆ ನುಗ್ಗಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾರ್‌ ಮಾಲಿಕ ದೂರು ನೀಡಿದ್ದು, ಈ ಬಗ್ಗೆ ಐಜಿಪಿ ತನಿಖೆ ನಡೆಸಿ ವರದಿ ನೀಡುವಂತೆ ಮಾ.18ರಂದು ಆದೇಶಿಸಿದ್ದರು. ಈ ಆದೇಶದ ಮೇರೆಗೆ ಡಿಸಿಆರ್ ಬಿ ಘಟಕದ ಡಿವೈಎಸ್ಪಿ ಎಸ್.ಎಂ.ನಾಗರಾಜ್ ತನಿಖೆ ನಡೆಸಿದ್ದಾರೆ. ಕಳೆದ ಮಾರ್ಚ 27ರಂದೇ ತನಿಖೆ ನಡೆಸಿ ವರದಿ ನಾಗರಾಜ್‌ ವರದಿ ನೀಡಿದ್ದರು.
ಡಿವೈಎಸ್‌ಪಿ ನಾಗರಾಜ್‌ ನೀಡಿರುವ ವರದಿಯಲ್ಲಿರುವ ಅಂಶಗಳು :-
-ಪಿಎಸ್ ಐ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಅನುಮಾನವಿದೆ
-ಬಾರ್ ನಲ್ಲಿ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟತೆ ಕೊರತೆ ಇದೆ.
-ಸಿಸಿಟಿವ್ಹಿ ದೃಶ್ಯಾವಳಿಗಳು ನಿಜವೆಂದು ನಂಬಲು ಸಾಧ್ಯವಿಲ್ಲ
-ಬಾರ್ ಸಿಬ್ಬಂದ್ಧಿ ಉದ್ದೇಶಪೂರ್ವಕವಾಗಿ ಘಟನೆಗೆ ಅತಿಯಾದ ರಂಜನೆ ನೀಡಿದ್ದಾರೆ
-ಇದಕ್ಕಾಗಿಯೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದೇ, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ
-ಪಿಎಸ್ ಐ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ, ಹಿಗ್ಗಾಮುಗ್ಗಾ ಥಳಿಸಿದ್ದಾರೆಂಬುದು ಸುಳ್ಳು.
-ಘಟನೆ ದಿನ ಮದ್ಯ ಮಾರಾಟ ನಿಷೇಧವಿದ್ದರೂ ಬಾರ್ ನಲ್ಲಿ ಮದ್ಯ ಮಾರಾಟ ಮಾಡಲಾಗುತಿತ್ತು.
-ಪೋಲಿಸ್ ಅಧಿಕಾರಿಗಳಲ್ಲಿ ಭಯ ಹುಟ್ಟಿಸಲು ಈ ಆಪಾದನೆ ಮಾಡಲಾಗಿದೆ.
-ಪಿಎಸ್ ಐ ಪ್ರತಿ ತಿಂಗಳು 30ಸಾವಿರ ರೂ. ಮಾಮೂಲಿ ಪಡೆಯುತ್ತಾರೆಂಬ ಆರೋಪ ಶುದ್ದ  ಸುಳ್ಳು
-ಪಿಎಸ್ ಐ ಯಾವುದೇ ನೀರಿನ ಬಾಟಲ್ , ತಂಪು ಪಾನೀಯ ದೋಚಿಲ್ಲ
-ಬಾರ್ ಮಾಲೀಕ ನೀಡಿದ ದೂರು ಸತ್ಯಕ್ಕೆ ದೂರವಾದದ್ದು

Comments are closed.

Social Media Auto Publish Powered By : XYZScripts.com